Advertisement
ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಿಗೆ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಆದೇಶ ಹೊರಡಿಸಿದ್ದು, ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ರಾಜ್ಯ ಉಸ್ತುವಾರಿಯಾಗಿ ನಿರ್ವಹಿಸಿದ್ದರು. ಕರ್ನಾಟಕದ ಉಸ್ತುವಾರಿಯಾಗಿ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಮತ್ತು ಸಹ ಉಸ್ತುವಾರಿಯಾಗಿ ಪ್ರಭಾಕರ್ ರೆಡ್ಡಿ ನೇಮಕ ಮಾಡಲಾಗಿದೆ.
ನೆರೆಯ ರಾಜ್ಯ ಕೇರಳಕ್ಕೆ ಪ್ರಭಾರಿಯಾಗಿ ಪ್ರಕಾಶ್ ಜಾವ್ಡೇಕರ್ ಹಾಗೂ ಸಹ ಪ್ರಭಾರಿಯಾಗಿ ಅಪರಾಜಿತಾ ಸಾರಂಗಿ ನೇಮಕವಾಗಿದ್ದಾರೆ. ಗೋವಾ ರಾಜ್ಯಕ್ಕೆ ಪ್ರಭಾರಿಯಾಗಿ ಆಶಿಶ್ ಸೂದ್ ನೇಮಕವಾಗಿದ್ದಾರೆ. ಕೆಲವೇ ತಿಂಗಳಿನಲ್ಲಿ ಚುನಾವಣೆ ಎದುರಿಸಲಿರುವ ಜಾರ್ಖಂಡ್ಗೆ ಸಂಸದ ಲಕ್ಷ್ಮೀಕಾಂತ್ ಬಜ್ಪಾಲ್ ನೇಮಕಗೊಂಡಿದ್ದಾರೆ.