ಮೂಡಿಗೆರೆ :ಬಜರಂಗದಳ ಮುಖಂಡ ರಘು ಸಕಲೇಶಪುರ ಅವರ ಪತ್ತೆ ಕಾರ್ಯಾಚರಣೆ ವೇಳೆ ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಮೇಲೆ ಪೊಲೀಸರು ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದೆ.
ರಘು ಸಕಲೇಶಪುರ, ಎಲ್ಲಿದ್ದಾನೆ ಹೇಳು ಎಂದು ಠಾಣೆಗೆ ಕರೆದೊಯ್ದು ಸಕಲೇಶಪುರ ಪೊಲೀಸರು ಅವಿನಾಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು,ಸದ್ಯ ಅವಿನಾಶ್ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವಿನಾಶ್, ತಲೆ, ಕಿವಿ, ಕೈಗೆ ತೀವ್ರ ಗಾಯವಾಗಿದ್ದು, ದೌರ್ಜನ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿದ್ದು ಸಕಲೇಶಪುರ ಡಿವೈಎಸ್ಪಿ ಮಿಥುನ್ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.
1000ಕ್ಕೂ ಹೆಚ್ಚು ಜನ ಬಿಜೆಪಿ ಕಾರ್ಯಕರ್ತರು ಮೂಡಿಗೆರೆ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ಕಾಂಗ್ರೆಸ್ ಕೈಗೊಂಬೆಯಾದ ಖಾಕಿ ಎಂದು ಆಕ್ರೋಶ ಹೊರ ಹಾಕಿದರು.
‘ಜಿಹಾದಿ ಮನಸ್ಥಿತಿಯಲ್ಲಿ ಬಂದರೆ, ಬಂದೂಕುಗಳು ಹೊರ ಬರುತ್ತದೆ’ ಎಂಬ ಹೇಳಿಕೆ ನೀಡಿ ಪ್ರಕರಣ ದಾಖಲಾಗುತ್ತಿದ್ದಂತೆ ರಘು ಸಕಲೇಶಪುರ ನಾಪತ್ತೆಯಾಗಿದ್ದು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.