Advertisement

ಜಗದ್ಗುರುಗಳಿಗೆ ಚಪ್ಪಲಿ ಎಸೆದವರಿಗೆ ಬಿಜೆಪಿ ಪಕ್ಷಕ್ಕೆ ಪ್ರವೇಶವಿಲ್ಲ: ವಿಜುಗೌಡ ಪಾಟೀಲ

08:07 PM Oct 13, 2020 | Mithun PG |

ವಿಜಯಪುರ: ಧರ್ಮ ಒಡೆಯುವ ಕೆಸಲದಲ್ಲಿ ನಿರವಾಗಿರುವ ಹಾಗೂ ಸಮಾಜದ ಜಗದ್ಗುರುಗಳ ಮೇಲೆ ಚಪ್ಪಲಿ ಎಸೆದು ಅಪಮಾನ ಮಾಡಿದ ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತರ ನಾಯಕರಿಗೆ ಬಿಜೆಪಿ ಪಕ್ಷಕ್ಕೆ ಪ್ರವೇಶವಿಲ್ಲ. ಲಿಂಗಾಯತ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿಗಳಿಗೆ ಬಿಜೆಪಿ ಆಹ್ವಾನ ನೀಡಿರುವ ಸಂಗತಿ ನನಗೆ ತಿಳಿದಿಲ್ಲ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಹೇಳಿದ್ದಾರೆ

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಸಿದ ಅವರು, ಬಿಜೆಪಿ ಪಕ್ಷ ಧರ್ಮ ಮಾರ್ಗಕ್ಕೆ ಆದ್ಯತೆ ನೀಡುತ್ತದೆ. ಹೀಗಾಗಿ ಧರ್ಮ ಒಡೆದವರಿಗೆ, ಧರ್ಮಗುರುಗಳಿಗೆ ಚಪ್ಪಲಿ ಎಸೆದು ಅವಮಾನಿಸಿದವರಿಗೆ ಪಕ್ಷದಲ್ಲಿ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂಬ ಆತ್ಮ ವಿಶ್ವಾಸವಿದೆ. ಇದರ ಹೊರತಾಗಿಯೂ ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧವಾಗಿದ್ದೇನೆ ಎಂದರು.

ವಿಜಯಪುರ ಜಿಲ್ಲೆಯ ಕೆಲವು ನಾಯಕರು ಅಂಥವರನ್ನು ಪಕ್ಷಕ್ಕೆ ಕರೆ ತರುವ ಪ್ರಯತ್ನದಲ್ಲಿದ್ದು, ಪಕ್ಷ ನಾಯಕತ್ವ ವಹಿಸಿರುವ ವಿಷಯ ನನಗೆ ತಿಳಿದಿಲ್ಲ. ಬಿಜೆಪಿ ತತ್ವ-ಸಿದ್ಧಾಂತಗಳಿಗೆ ಬದ್ಧವಾದ ಪಕ್ಷ. ಹೀಗಾಗಿ ಧರ್ಮ ಒಡೆದವರಿಗೆ, ಧರ್ಮಗುರುಗಳ ಮೇಲೆ ಚಪ್ಪಲಿ ಎಸೆದವರಿಗೆ ನಮ್ಮ ಪಕ್ಷದಲ್ಲಿ ಪ್ರವೇಶ ನೀಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next