ಬನಹಟ್ಟಿ: ದೇಶದ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ದೇಶವಷ್ಟೇ ಅಲ್ಲದೆ ಇಡೀ ಜಗತ್ತೇ ಮೆಚ್ಚಿರುವುದು ವಿಶೇಷವಾಗಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಿಶ್ಚಿತವೆಂದು ಬಿಜೆಪಿ ಜಿಲ್ಲಾಧ್ಯಕ್ಷ, ತೇರದಾಳ ಕ್ಷೇತ್ರದ ಅಭ್ಯರ್ಥಿ ಸಿದ್ದು ಸವದಿ ಹೇಳಿದರು.
ಬುಧವಾರ ಸಂಜೆ ನಗರದ ಈಶ್ವರಲಿಂಗ ಮೈದಾನದಲ್ಲಿ ಮಹಿಳಾ ಕಾರ್ಯಕರ್ತರ ರ್ಯಾಲಿ ಸಂದರ್ಭ ಮಾತನಾಡಿದ ಅವರು, 4 ವರ್ಷಗಳಲ್ಲಿ ಇಡೀ ದೇಶವು ಅಭಿವೃದ್ಧಿಯತ್ತ ಸಾಗುತ್ತಿದ್ದು, ಎಲ್ಲ ರಾಜ್ಯಗಳಲ್ಲಿನ ಜನತೆ ಬಿಜೆಪಿಯನ್ನು ಮೆಚ್ಚಿದ್ದಾರೆ. ಈ ಬಾರಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಮಲ ಅರಳಲಿದೆ ಎಂದರು.
ಯಡಿಯೂರಪ್ಪ ನೇತೃತ್ವದ ಸರ್ಕಾರವಧಿಯಲ್ಲಿ ರೈತ ಹಾಗೂ ನೇಕಾರರಿಗೆ ಹಲವಾರು ಯೋಜನೆಗಳನ್ನು ನೀಡುವ ಮೂಲಕ ರಾಜ್ಯದ ಜನತೆಗೆ ನಿಟ್ಟುಸಿರುವ ಬಿಡುವಲ್ಲಿ ಕಾರಣವಾಗಿತ್ತು. ಕಳೆದ 5 ವರ್ಷಗಳ ಕಾಂಗ್ರೆಸ್‌ನ ದುರಾಡಳಿತದಲ್ಲಿ ಸಾಮಾನ್ಯ ಜನತೆ ತೀವ್ರ ಸಂಕಷ್ಟ ಎದುರಿಸುವಲ್ಲಿ ಕಾರಣವಾಗಿದೆ ಎಂದು ಸವದಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಇದೇ ಸಂದರ್ಭ ಸಾವಿರಾರು ಮಹಿಳಾ ಕಾರ್ಯಕರ್ತೆಯರೊಂದಿಗೆ ಬನಹಟ್ಟಿ ನಗರಾದ್ಯಂತ ಬೃಹತ್ ರ್ಯಾಲಿ ನಡೆಸಿದರು.
ರಾಜು ಅಂಬಲಿ, ಶ್ರೀಶೈಲ ಯಾದವಾಡ, ಕಣೆಪ್ಪ ಹಾರೂಗೇರಿ, ರಾಜು ಬಾಣಕಾರ, ಕುಮಾರ ಕದಮ, ಮೀನಾಕ್ಷಿ ಸವದಿ, ಸಂಗೀತಾ ಖಾನಾಪುರ, ಶಾಂತಾ ಸೊರಗಾಂವಿ, ಸುನಿತಾ ನಂದಗೋಂಡ, ಮಾಲಾ ಬಾವಲತ್ತಿ, ಶೈಲಜಾ ಹೊಸಕೋಟಿ, ಸಾವಿತ್ರಿ ಪಾಟೀಲ, ವೈಷ್ಣವಿ ಬಾಗೇವಾಡಿ, ರತ್ನಾ ಕೊಳಕಿ, ಸವಿತಾ ಹೊಸೂರ, ಸುರೇಶ ಚಿಂಡಕ, ಭೀಮಶಿಮಗದುಮ್ಮ, ಧರೆಪ್ಪ ಉಳ್ಳಾಗಡ್ಡಿ, ಪ್ರಭು ಮೊಳೇದ, ಗೋವಿಂದ ಡಾಗಾ, ದುಂಡಪ್ಪ ಮಾಚಕನೂರ, ಚಿದಾನಂದ ಹೊರಟ್ಟಿ, ರವಿ ಕರಲಟ್ಟಿ, ಮಲ್ಲಿಕಾರ್ಜುನ ಬಾಣಕಾರ, ಮಹಾಲಿಂಗಪ್ಪ ಕೋಳಿಗುಡ್ಡ, ಗುಂಡು ಹೂಲಿ, ಶ್ರೀಶೈಲ ಬೀಳಗಿ, ಪ್ರಕಾಶ ಬೇವಿನಗಿಡದ, ಸತೀಶ ಸುಟ್ಟಟ್ಟಿ, ಮಲ್ಲಪ್ಪ ಪಟಗುಂಡಿ, ಮುರಾಧ ಮೊಮೀನ್, ಬಸೀರ ಮೊಮೀನ್ ಸೇರಿದಂತೆ ಅನೇಕರಿದ್ದರು.