- ಹೈಕ ಭಾಗಕ್ಕೆ ಕೇವಲ ಒಂದೇ ಸಚಿವ ಸ್ಥಾನ
- ಆಪರೇಷನ್ ಕಮಲ ಸಿಬಿಐ ತನಿಖೆಯಾಗಲಿ
Advertisement
ಕೊಪ್ಪಳ: ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಸರ್ಕಾರಕ್ಕೆ ಆಯುಸ್ಸು ತುಂಬ ಕಡಿಮೆಯಿದೆ. ಇನ್ನೂ 6-8 ತಿಂಗಳಲ್ಲಿ ಬೀಳಲಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಭವಿಷ್ಯ ನುಡಿದಿದ್ದಾರೆ.
Related Articles
Advertisement
ಛಲವಾದಿ, ಗಂಗಾಮತ, ಕುರುಬರು, ವಾಲ್ಮೀಕಿ, ಉಪ್ಪಾರ, ಭೋವಿ, ಮಾದಿಗ ಸಮುದಾಯ ಸೇರಿ ಹಲವು ಸಮುದಾಯ ಹೈಕ ಭಾಗದಲ್ಲಿ ಹೆಚ್ಚಿವೆ. ಬಿಜೆಪಿಗೆ ಸಣ್ಣಪುಟ್ಟ ಸಮಾಜಗಳು ಕಾಣಲಿಲ್ಲವೇ ? ಕಾಂಗ್ರೆಸ್ ಸರ್ಕಾರದಲ್ಲಿ ಸಣ್ಣ ಸಣ್ಣ ಸಮಾಜದ ಶಾಸಕರಿಗೂ ಮಂತ್ರಿಗಿರಿ ಕೊಟ್ಟಿದೆ.
ಅನರ್ಹ ಶಾಸಕರನ್ನು ಬಿಜೆಪಿ ಬೀದಿಗೆ ನಿಲ್ಲಿಸಿದೆ. ಅವರು ಮನೆ ಮಠ ತೊರೆದು ಸುಪ್ರೀಂ ಕೋರ್ಟ್‌ಗೆ ಅಲೆಯುವಂತಾಗಿದೆ. ಪೋನ್ ಕದ್ದಾಲಿಕೆಯೀಗ ಜೋರಾಗಿ ಚರ್ಚೆ ನಡೆದಿದೆ.
ಸಿಎಂ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಆಪರೇಷನ್ ಕಮಲ ಮಾಡಿದ 17 ಅನರ್ಹ ಶಾಸಕರ ಪ್ರಕರಣವನ್ನು ಸಿಬಿಐಗೆ ನೀಡಬೇಕು. ಅವರು ಏಕೆ ರಾಜಿನಾಮೆ ಕೊಟ್ಟರು ? ಅದರ ಹಿಂದೆ ಏನು ಉದ್ದೇಶವಿತ್ತು. ಯಾರಿಗೆ ಏಷ್ಟೆಷ್ಟು ಕೊಟ್ಟಿದ್ದಾರೆ ? ಏನೇನು ಆಮಿಷ ಒಡ್ಡಿದ್ದಾರೆ ? ಫ್ಲೈಟ್ ಮಾಡಿದ್ಯಾರು ? ಎನ್ನುವುದು ತನಿಖೆಯಾಗಲಿ ಎಂದು ಒತ್ತಾಯ ಮಾಡಿದರು.
ಉದ್ಯಮಿಗಳಿಗೆ ಕುತ್ತು : ಸಿಬಿಐ, ಈಡಿ, ಐಟಿ ಮೂಲಕ ದೊಡ್ಡ ದೊಡ್ಡ ಉದ್ಯಮಿಗಳಿಗೆ ಕುತ್ತು ತರುತ್ತಿದ್ದಾರೆ. ಸಿದ್ಧಾರ್ಥ ಸಾವಿಗೂ ಇದೇ ಕಾರಣ. ಇದರಿಂದ ಉದ್ಯಮಿಗಳು ಆತಂಕದಲ್ಲಿದ್ದಾರೆ. ಭಾರತದ ಆರ್ಥಿಕ ಸ್ಥಿತಿ ತುಂಬ ಕೆಟ್ಟದ್ದಾಗಿದೆ. ಆರ್ಥಿಕ ತಜ್ಞರೇ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ನೆರೆಸಂತ್ರಸ್ಥರಿಗೆ ಬಿಜೆಪಿ ನಯಾಪೈಸೆ ಬಿಡುಗಡೆ ಮಾಡಿಲ್ಲ. ಇಷ್ಟೆಲ್ಲ ಅನ್ಯಾಯ ನಡೆದರೂ ಮೋದಿ ಭಕ್ತರು ಏಲ್ಲಿದ್ದಾರೋ ಕಾಣುತ್ತಿಲ್ಲ. ನೆರೆ ವೀಕ್ಷಣೆಗೆ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದು ನೋಡಿದರೂ ನಯಾ ಪೈಸೆ ಘೋಷಣೆ ಮಾಡಿಲ್ಲ. ಗುಜರಾತ್‌ಗೆ ಏನಾದ್ರು ಆದ್ರೆ ಮೋದಿ ಹಣ ಬಿಡುಗಡೆ ಮಾಡ್ತಾರೆ. ಆದರೆ ನಮಗೆ ಬಿಡುಗಡೆ ಮಾಡುತ್ತಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ, ಶಾಸಕ ರಾಘವೇಂದ್ರ ಹಿಟ್ನಾಳ ಇದ್ದರು.