2014 ರಲ್ಲಿ ಎಲ್ಲ ಏಳೂ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿಸಿದ್ದ ದೆಹಲಿ ಜನತೆ ಈ ಬಾರಿಯೂ ಮೋದಿಗೆ ಜೈ ಎಂದಿದ್ದಾರೆ. ಏಳೂ ಕ್ಷೇತ್ರಗಳಲ್ಲೂ ಒಂದೇ ಪಕ್ಷವನ್ನು ಆರಿಸುವುದು ದೆಹಲಿಯ ಜನರ ಹವ್ಯಾಸ ಎಂಬ ಮಾತನ್ನು ಈ ಬಾರಿಯೂ ಅವರು ಸಾಬೀತು ಮಾಡಿದ್ದಾರೆ.
2014ರಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದ ದೆಹಲಿ ಜನರು, 2004 ಮತ್ತು 2009 ರಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದರು. ಅದೇ ರೀತಿ 1999 ರಲ್ಲೂ ಬಿಜೆಪಿ ಕೈ ಹಿಡಿದಿದ್ದರು. ದೆಹಲಿಯಲ್ಲಿ ಬಿಜೆಪಿಯ ಗೌತಮ್ ಗಂಭೀರ್ ವಿರುದ್ಧ ಸ್ಪರ್ಧಿಸಿದ್ದ ಹಾಗೂ ಬಾರಿ ಸುದ್ದಿ ಮಾಡಿದ್ದ ಎಎಪಿಯ ಆತಿಶಿ ಮರ್ಲೆನಾ ಮೂರನೇ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ.
ಇನ್ನು ಈಶಾನ್ಯ ದೆಹಲಿಯಿಂದ ಸ್ಪರ್ಧಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಮನೋಜ್ ತಿವಾರಿ, ಕಾಂಗ್ರೆಸ್‌ನ ಹಿರಿಯ ನಾಯಕಿ ಶೀಲಾ ದೀಕ್ಷಿತ್ ವಿರುದ್ಧ ಸ್ಪರ್ಧಿಸಿ 3 ಲಕ್ಷಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎಎಪಿ ಹವಾ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ಸಿಎಂ ಅರವಿಂದ ಕೇಜ್ರಿವಾಲ್‌ಗೆ ಆತಂಕಕಾರಿ ಸಂಗತಿ. ಅಷ್ಟೇ ಅಲ್ಲ, ಈ ಬಾರಿಯ ಎಎಪಿ ಮತಗಳನ್ನು ಕಾಂಗ್ರೆಸ್ ಒಡೆದಿದೆ ಎಂಬ ಆಕ್ರೋಶವನ್ನೂ ಈ ಹಿಂದೆಯೇ ಕೇಜ್ರಿವಾಲ್ ವ್ಯಕ್ತಪಡಿಸಿದ್ದರು.
ಗೆದ್ದ ಪ್ರಮುಖರು
ಮನೋಜ್ ತಿವಾರಿ(ಬಿಜೆಪಿ), ಈಶಾನ್ಯ ದೆಹಲಿ
ಹರ್ಷವರ್ಧನ್ (ಬಿಜೆಪಿ), ಚಾಂದನಿ ಚೌಕ್
ಸೋತ ಪ್ರಮುಖರು
ಶೀಲಾ ದೀಕ್ಷಿತ್ (ಕಾಂಗ್ರೆಸ್), ಈಶಾನ್ಯ ದೆಹಲಿ