Advertisement

ಬಿಜೆಪಿ ಪಾಲಾದ ಬ್ಯಾಡಗಿ ಎಪಿಎಂಸಿ ಅಧ್ಯಕ್ಷ ಸ್ಥಾನ

07:48 AM Jun 17, 2020 | Team Udayavani |

ಬ್ಯಾಡಗಿ: ಬಹುಮತವಿದ್ದರೂ ಕಾಂಗ್ರೆಸ್‌ ಪಕ್ಷದಲ್ಲಿ ಹೊಂದಾಣಿಕೆ ಕೊರತೆಯಿಂದ ಮಂಗಳವಾರ ನಡೆದ ಸ್ಥಳೀಯ ಎಪಿಎಂಸಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗಿದ್ದು, ವೀರಭದ್ರಪ್ಪ ಗೊಡಚಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಕಾಂಗ್ರೆಸ್‌ನ ಉಳಿವೆಪ್ಪ ಕುರುವತ್ತಿ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

Advertisement

ಮಂಗಳವಾರ ಎಪಿಎಂಸಿ ಆವರಣದಲ್ಲಿ ಮುಂದಿನ 20 ತಿಂಗಳ ಅವಧಿಗೆ ಜರುಗಿದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯಿಂದ ವೀರಭದ್ರಪ್ಪ ಗೊಡಚಿ ಹಾಗೂ ಕಾಂಗ್ರೆಸ್‌ನಿಂದ ಶಂಭನಗೌಡ ಪಾಟೀಲ ನಾಮಪತ್ರ ಸಲ್ಲಿಸಿದ್ದರು, ಕಾಂಗ್ರೆಸ್‌ 9, ಬಿಜೆಪಿ (ಮೂವರು ನಾಮ ನಿರ್ದೇಶಿತ ಸದಸ್ಯರು ಸೇರಿ) 7 ಜನ ಸದಸ್ಯರು, ವರ್ತಕರ ಪ್ರತಿನಿಧಿ 1 ಸ್ಥಾನ (ತಟಸ್ಥ) ಬಲವನ್ನು ಹೊಂದಿದ್ದು, ಅಂತಿಮವಾಗಿ ಕಾಂಗ್ರೆಸ್‌ನ ಇಬ್ಬರು ಬಿಜೆಪಿ ಕಡೆ ವಾಲಿದ್ದರಿಂದ ಅಧ್ಯಕ್ಷ ಗೊಡಚಿ ಆಯ್ಕೆ ಸುಲಭವಾಯಿತು..

ಉಪಾಧ್ಯಕ್ಷ ಸ್ಥಾನಕ್ಕೆ ಉಳಿಪ್ಪ ಮರು ಆಯ್ಕೆ: ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಮಾಸಣಗಿ ಕ್ಷೇತ್ರದ ಉಳಿವೆಪ್ಪ ಕುರುವತ್ತಿ ಮರು ಆಯ್ಕೆ ಬಯಸಿ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ವಿಜಯ ಕುಮಾರ್‌ ಮಾಳಗಿ ನಾಮಪತ್ರ ಸಲ್ಲಿಸಿದ್ದರು. ಇಲ್ಲಿಯೂ ಬಿಜೆಪಿಯ ವಿಜಯಕುಮಾರ್‌ ಮಾಳಗಿ ಆಯ್ಕೆ ಆಗುವ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿ ಅಂತಿಮವಾಗಿ ಉಳಿವೆಪ್ಪ ಕುರುವತ್ತಿ ಹತ್ತು ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಮರು ಆಯ್ಕೆಯಾದರು. ಹಾವೇರಿ ತಹಶೀಲ್ದಾರ್‌ ಶಂಕರ್‌ಚುನಾವಣಾಧಿಕಾರಿಯಾಗಿ ಕೆಲಸ ನಿರ್ವ ಹಿಸಿದರು.

ಮಾರುಕಟ್ಟೆ ಸಮಗ್ರ ಅಭಿವೃದ್ಧಿಗೆ ಚಿಂತನೆ: ಅಧ್ಯಕ್ಷರಾಗಿ ಆಯ್ಕೆ ಆಯ್ಕೆಯಾದ ಬಳಿಕ ಮಾತನಾಡಿದ ವೀರಭದ್ರಪ್ಪ ಗೊಡಚಿ, ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಗೆ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದು, ಬಹಳಷ್ಟು ಸಂತಸ ತಂದಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರಕಾರಗಳಿದ್ದು ಸ್ಥಳೀಯ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಮಾಜಿ ಶಾಸಕ ಸುರೇಶ ಗೌಡ ಅವರ ಮಾರ್ಗದರ್ಶನದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದ್ದೇನೆ. ಚುನಾವಣೆಯಲ್ಲಿನ ಸಂಖ್ಯಾ ಬಲಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲ ಸದಸ್ಯರನ್ನು ಒಟ್ಟುಗೂಡಿಸಿಕೊಂಡು ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next