Advertisement

ಯಡಿಯೂರಪ್ಪನವರಿಗೆ ಬಿಜೆಪಿ ಎಲ್ಲಾ ಅವಕಾಶ ನೀಡಿದೆ: ಸಿ.ಟಿ.ರವಿ

03:39 PM Jul 25, 2021 | Team Udayavani |

ಪಣಜಿ: ಬಿ.ಎಸ್.ಯಡಿಯೂರಪ್ಪನವರು ಜನಪ್ರಿಯ ನಾಯಕರು. ಬಿಎಸ್ ವೈ ಜನಪ್ರಿಯತೆಯನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅವರೊಬ್ಬ ಉತ್ತಮ ನಾಯಕ. ಪಕ್ಷ ಅವರಿಗೆ ಸಾಕಷ್ಟು ಅವಕಾಶಗಳನ್ನ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

ಗೋವಾದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿ ಕರ್ನಾಟಕ ಜನತೆ ಸೇವೆ ಮಾಡಲು ಅವಕಾಶ ಸಿಕ್ಕಿದೆ. ವಿಪಕ್ಷ ನಾಯಕರಾಗಿ, ಉಪ ಮುಖ್ಯಮಂತ್ರಿಯಾಗಿ, ನಾಲ್ಕು ಬಾರಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಇದು ಕಾಂಗ್ರೆಸ್, ಜನತದಳವರಿಗೂ ಅವಕಾಶ ಸಿಕ್ಕಿಲ್ಲ. ಬಿಜೆಪಿ ಪಕ್ಷ ಈ ಎಲ್ಲಾ ಅವಕಾಶ ನೀಡಿದ್ದು, ಕಾರ್ಯಕರ್ತನಿಂದ ಹಿಡಿದು ನಾಯಕನಾಗಿ ಬೆಳೆಯುವಂತೆ ಯಡೊಯೂರಪ್ಪನವರಿಗೆ ಅವಕಾಶ ನೀಡಿದೆ ಎಂದರು.

ಇದನ್ನೂ ಓದಿ:ಭ್ರಷ್ಟರನ್ನು ತೆಗೆಯುವ ವಿಧಾನ ಪ್ರಧಾನಿ ಮೋದಿ ,ಅಮಿತ್ ಶಾಗೆ ಗೊತ್ತಿದೆ – ವೀರಪ್ಪ ಮೊಯ್ಲಿ

ಎಲ್ಲಾ ಕಾರ್ಯಕರ್ತರ ಶಕ್ತಿಯಿಂದ ಇವತ್ತು ಬಿಜೆಪಿ ಪಕ್ಷಕ್ಕೆ ಶಕ್ತಿ ಬಂದಿದೆ ಎಂದ ಅವರು, ಯಡಿಯೂರಪ್ಪ ಬಗ್ಗೆ ಸಚಿವರು,ಶಾಸಕರು ಬೇಸರದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅದರ ಬಗ್ಗೆ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಅವರು ನೋಡಿಕೊಳ್ಳುತ್ತಾರೆ. ರಾಜಕಾರಣದಲ್ಲಿ ಇವೆಲ್ಲವೂ ಆಗ್ತಾವೆ, ಹೋಗ್ತಾವೆ. ಈ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುಲ್ಲ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next