ಲಕ್ನೋ : ತಮ್ಮ ವೈಫಲ್ಯಗಳನ್ನು ಮರೆಮಾಚಲು ಬಿಜೆಪಿ ಕಾಲಕಾಲಕ್ಕೆ ಪಾಕಿಸ್ಥಾನ, ಬಣ್ಣ ಮತ್ತು ಇತರ ತಂತ್ರಗಳನ್ನು ರೂಪಿಸುತ್ತದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ.
ಅಖಿಲೇಶ್ ಯಾದವ್ ಅವರು ಪತ್ನಿ, ಸಂಸದೆ ಡಿಂಪಲ್ ಯಾದವ್ ಅವರೊಂದಿಗೆ ಕರ್ಹಾಲ್ ಮತ್ತು ಇಟಾವಾದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡಿದ ಹೇಳಿಕೆ ಮತ್ತು ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರದ ಬೇಷರಮ್ ರಂಗ್ ಹಾಡಿನ ಕುರಿತಾಗಿ ವಿರೋಧದ ಕುರಿತಾಗಿನ ಪ್ರಶ್ನೆಗೆ ಈ ಹೇಳಿಕೆ ನೀಡಿದ್ದಾರೆ.
‘ಎಲ್ಲಾ ಬಣ್ಣಗಳಿಗೆ ಪ್ರಾಮುಖ್ಯತೆ ಇದೆ, ಎಲ್ಲಾ ಬಣ್ಣಗಳಿಗೆ ಗೌರವವಿದೆ.ಎಲ್ಲಾ ಬಣ್ಣಗಳ ಮೇಲೆ ಪ್ರೀತಿ ಇದೆ’ ಎಂದು ಅಖಿಲೇಶ್ ವಿಡಿಯೋ ಕೂಡ ಟ್ವೀಟ್ ಮಾಡಿದ್ದಾರೆ.
ಹೇಳಿಕೆ ಖಂಡಿಸಿದ ಬಘೇಲ್
ಪಾಕಿಸ್ಥಾನದ ವಿದೇಶಾಂಗ ಸಚಿವ ನೀಡಿದ ಹೇಳಿಕೆಯನ್ನು ನಾನು ಖಂಡಿಸುತ್ತೇನೆ, ಇದಕ್ಕೆ ತಕ್ಕ ಉತ್ತರವನ್ನು ನೀಡಬೇಕು. ನಮ್ಮ ಪ್ರಧಾನಿ ಬಗ್ಗೆ ಇಂತಹ ಹೇಳಿಕೆ ನೀಡುವ ಹಕ್ಕು ಯಾರಿಗೂ ಇಲ್ಲ. ನಮಗೆ ವಿಭಿನ್ನ ರಾಜಕೀಯ ಸಿದ್ಧಾಂತಗಳಿವೆ ಆದರೆ ಇದು ರಾಷ್ಟ್ರ ಮತ್ತು ಮೋದಿ ನಮ್ಮ ಪ್ರಧಾನಿ ಎಂದು ಛತ್ತೀಸ್‌ಗಢ ಸಿಎಂ, ಕಾಂಗ್ರೆಸ್ ಹಿರಿಯ ನಾಯಕ ಭೂಪೇಶ್ ಬಘೇಲ್ ಹೇಳಿಕೆ ನೀಡಿದ್ದಾರೆ.