Advertisement
ಜೆಡಿಎಸ್ ಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಹಗರಣಗಳು ಹಾಗು ವಿದ್ಯುತ್ ಖರೀದಿ ಅವ್ಯವಹಾರ ಬಯಲು ಮಾಡಲು ಸದನವನ್ನು ವೇದಿಕೆಯಾಗಿ ಬಳಸಿಕೊಳ್ಳಲು ತೀರ್ಮಾನಿಸಿದೆ.
Related Articles
Advertisement
ಶ್ವೇತಪತ್ರ ಹೊರಡಿಸಲಿ -ಎಚ್‌ಡಿಕೆ : ಬಿಜೆಪಿಯವರು ರಾಜಕೀಯ ಕಾರಣಗಳಿಗಾಗಿ ಏನಾದರೂ ಮಾಡಿಕೊಳ್ಳಲಿ.ಜೆಡಿಎಸ್ ಉತ್ತರ ಕರ್ನಾಟಕದ ಸಮಸ್ಯೆಗಳು, ರಾಜ್ಯದ ರೈತಾಪಿ ಸಮುದಾಯದ ಸಂಕಷ್ಟದ ಬಗ್ಗೆ ಪ್ರಸ್ತಾಪಿಸಿ
ನಾಲ್ಕೂವರೆ ವರ್ಷದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಕೈಗೊಂಡಿರುವ ಕ್ರಮಗಳ
ಬಗ್ಗೆ ಶ್ವೇತಪತ್ರ ಹೊರಡಿಸಲು ಒತ್ತಾಯಿಸಲಿದೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿ
ದ್ದಾರೆ. ವಿದ್ಯುತ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ವರದಿಯನ್ನು ಇದೇ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದರು. ಆದರೆ,ಕಾರ್ಯಸೂಚಿಯಲ್ಲಿ ಅದು ಇಲ್ಲ. ಒಂದೊಮ್ಮೆ ಸದನದಲ್ಲಿ ವರದಿ ಮಂಡನೆಯಾಗದಿದ್ದರೆ ಅಧಿವೇಶನದಲ್ಲಿ ದಾಖಲೆ ಸಮೇತ ನಾನೇ ಅವ್ಯವಹಾರವನ್ನು ಜನರ ಮುಂದಿಡುತ್ತೇನೆ ಎಂದು ಹೇಳಿದ್ದಾರೆ. ಅಧಿವೇಶನದ ಕಾರ್ಯತಂತ್ರ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯದ ಜನರ ಜತೆ ಕಣ್ಣಾಮುಚ್ಚಾಲೆ ಆಡಲು ಹೊರಟಿವೆ. ನಾನು ಆತ್ತಂಗೆ ಮಾಡ್ತೇನೆ, ನೀನು ಹೊಡೆದಂತೆ ಮಾಡು ಎಂಬಂತೆ ನಟನೆ ಮಾಡುತ್ತಿವೆ. ವಿದ್ಯುತ್ ಖರೀದಿಯಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬುದು ದಾಖಲೆ ಸಮೇತ ಮಾಹಿತಿ ಕೊಟ್ಟಿದ್ದರೂ ಯಾರನ್ನೋ ಪಾರು ಮಾಡುವ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. ಜೆಡಿಎಸ್‌ಗೆ ಯಾವುದೇ ಅಳುಕು-ಅಂಜಿಕೆ ಇಲ್ಲ.ಬಿಜೆಪಿ ಸರ್ಕಾರದ ಅವಧಿಯ ವಿದ್ಯುತ್ ಖರೀದಿ ಅವ್ಯವಹಾರ ಬಯಲು ಮಾಡುತ್ತೇನೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿರುವ ಸೋಲಾರ್ ಟೆಂಡರ್ ಹಗರಣ ಸಹಿತ ಇನ್ನೂ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಜನರ ಮುಂದಿಡುತ್ತೇನೆ ಎಂದು ತಿಳಿಸಿದರು. ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ ನಾಲ್ಕೂವರೆ ವರ್ಷದಲ್ಲಿ ಕೈಗೊಂಡ ಕ್ರಮಗಳೇನು? ಎಷ್ಟು ಪ್ರಮಾಣದಲ್ಲಿ ಅಭಿವೃದ್ಧಿಯಾಗಿದೆ ಎಂಬುದನ್ನು ಅಂಕಿ- ಅಂಶ ಸಮೇತ ಸರ್ಕಾರ ತಿಳಿಸಲಿ. ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಲ್ಕೂವರೆ ವರ್ಷ “ಆಟ’ ಆಡಿದ್ದಷ್ಟೇ. ಯಾವುದೇ ಪ್ರಗತಿಯಾಗಿಲ್ಲ. ಎರಡೂ ಪಕ್ಷಗಳು ಈ ಭಾಗದ ಜನರಿಗೆ ಉತ್ತರಿಸಬೇಕಾಗುತ್ತದೆ ಎಂದು ಹೇಳಿದರು. ರೈತರ ಸಮಸ್ಯೆ, ಉತ್ತರ ಕರ್ನಾಟಕ ಭಾಗದ ಸಮಸ್ಯೆ ಮುಂದಿಟ್ಟುಕೊಂಡೇ ಜೆಡಿಎಸ್ ಮಂಗಳವಾರ (ನ.14) ಬೆಳಗಾವಿಯಲ್ಲಿ ಸಮಾವೇಶ ನಡೆಸುತ್ತಿದೆ ಎಂದು ತಿಳಿಸಿದರು. ರಾಜ್ಯದ ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಆಟ ಇನ್ನು ಮುಂದೆ ನಡೆಯುವುದಿಲ್ಲ. ಕರ್ನಾಟಕ ವಿಕಾಸ ವಾಹಿನಿ ಯಾತ್ರೆ ಸಂದರ್ಭದಲ್ಲಿ ಜನರು ಅನುಭವಿಸುತ್ತಿರುವ ತೊಂದರೆಗಳು ಗಮನಕ್ಕೆ ಬಂದಿವೆ. ಎರಡೂ ಪಕ್ಷಗಳಿಗೆ ಮುಂದಿನ ಚುನಾವಣೆಯಲ್ಲಿ ಜನರೇ ಪಾಠ ಕಲಿಸಲಿದ್ದಾರೆ.