Advertisement

Karnataka: ಸರಕಾರದ ವಿರುದ್ಧ ಎರಡು ದಿನ BJP ಹೋರಾಟ

12:23 AM Oct 16, 2023 | Team Udayavani |

ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಎರಡು ದಿನಗಳ ಕಾಲ ಹೋರಾಟ ನಡೆಸಲು ಬಿಜೆಪಿ ತೀರ್ಮಾನಿಸಿದ್ದು, ಸೋಮವಾರ ಮತ್ತು ಮಂಗಳವಾರ ಎಲ್ಲ ಜಿಲ್ಲೆ ಹಾಗೂ ಮಂಡಲ ಮಟ್ಟದಲ್ಲಿ ಹೋರಾಟ ನಡೆಯಲಿದೆ.

Advertisement

ಪ್ರಮುಖವಾಗಿ ಸರಕಾರದ ಭ್ರಷ್ಟಾಚಾರ, ಗ್ಯಾರಂಟಿಗಳ ಜಾರಿ, ಕಾನೂನು ಸುವ್ಯವಸ್ಥೆ ಹಾಗೂ ಬರಗಾಲ ನಿರ್ವಹಣೆ ಸಹಿತ ಒಟ್ಟಾರೆ ಸರಕಾರದ ವೈಫ‌ಲ್ಯಗಳ ವಿರುದ್ಧ ಸೋಮವಾರ ವಿವಿಧ ಜಿಲ್ಲೆ, ಮಂಡಲ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುತ್ತದೆ.

ಇದಕ್ಕಾಗಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ರಾಜೇಶ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ನೇತೃತ್ವದಲ್ಲಿ ಸಭೆ ನಡೆದಿದ್ದು, ಮಂಗಳವಾರ ಬೆಂಗಳೂರಿ ನಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಸ್ವಾತಂತ್ರ್ಯ ಉದ್ಯಾನವನದಲ್ಲಿ ಈ ಹೋರಾಟ ನಡೆಯುವ ಸಾಧ್ಯತೆ ಯಿದ್ದು, ರಾಜ್ಯ ನಾಯಕರು, ಕಾರ್ಯ ಕರ್ತರು ಎಲ್ಲರೂ ಪಾಲ್ಗೊಳ್ಳಲಿದ್ದಾರೆ.

ಸಿಎಂ ರಾಜೀನಾಮೆಗೆ ಆಗ್ರಹ
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ನಳಿನ್‌ ಕುಮಾರ್‌ ಕಟೀಲು, ರಾಜ್ಯದಲ್ಲಿ ಕೆಟ್ಟ ಸರಕಾರ ಇದೆ. ಸಿಎಂ ಮತ್ತು ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾಧ್ಯಕ್ಷರು ನಾಳೆ ಜಿಲ್ಲೆಗಳಲ್ಲಿ ಮತ್ತು ಮಂಡಲ ಅಧ್ಯಕ್ಷರು ನಾಡಿದ್ದು ಮಂಡಲಗಳಲ್ಲಿ ಹೋರಾಟ ಕೈಗೆತ್ತಿಕೊಳ್ಳಲು ಸೂಚಿಸ ಲಾಗಿದೆ ಎಂದರು.
ಕಲಾವಿದರನ್ನೂ ಬಿಡದ ಸರಕಾರ

ಅಧಿಕಾರಿಗಳಿಗೇ ರೇಟ್‌ ಫಿಕ್ಸ್‌ ಮಾಡಿದ ಸರಕಾರವಿದು. ಈ ಸರಕಾರ ಕಲಾವಿದರಿಂದಲೂ ಲಂಚ ಕೇಳಿ¨ªಾಗಿ ಮೈಸೂರು ದಸರಾದಲ್ಲಿ ಭಾಗವಹಿಸಬೇಕಾದ ಕಲಾವಿದರೇ ಆರೋಪ ಮಾಡಿದ್ದಾರೆ ಎಂದರು.

Advertisement

ಲೂಟಿಯ ಹೊಣೆ ಸಿಎಂ, ಡಿಸಿಎಂ ಹೊರಬೇಕು
ಐಟಿ ದಾಳಿ ಆದಾಗ ಗುತ್ತಿಗೆದಾರ, ಬಿಲ್ಡರ್‌ಗಳ ಮನೆಯಲ್ಲಿ 40 ಕೋಟಿ, 50 ಕೋ. ರೂ. ಸಿಗುತ್ತಿದೆ. 600 ಕೋ. ರೂ. ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ ಎರಡೇ ದಿನ ಗಳಲ್ಲಿ 45 ಕೋಟಿ ರೂ. ಒಬ್ಬ ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದೆ. ಇದಕ್ಕೂ ಕಾಂಗ್ರೆಸ್ಸಿಗೂ ಸಂಬಂಧ ಇದೆ ಎಂಬುದು ಸ್ಪಷ್ಟವಾಗಿದೆ. ಈ ಲೂಟಿ ಸರಕಾರ ಅಧಿಕಾರದಲ್ಲಿರಲು ನೈತಿಕತೆ ಹೊಂದಿಲ್ಲ ಎಂದರು.

ದಾಳಿಯಲ್ಲಿ ಸಿಕ್ಕಿರುವುದು ಸಿಎಂ,ಡಿಸಿಎಂ ಹಣ: ರವಿ
ಬೆಂಗಳೂರು: ಗುತ್ತಿಗೆದಾರ ಅಂಬಿಕಾಪತಿ, ಬಿಲ್ಡರ್‌ ಸಂತೋಷ್‌ ಕೃಷ್ಣಪ್ಪ ಮನೆಯಲ್ಲಿ ಐಟಿ ದಾಳಿ ವೇಳೆ ಸಿಕ್ಕಿರುವ ಕೋಟ್ಯಂತರ ಮೊತ್ತದ ಹಣವು ರಾಜ್ಯದ ನಂ.1 (ಸಿಎಂ), ನಂ.2 (ಡಿಸಿಎಂ) ಅವರ ಬೇನಾಮಿ ಹಣ ಎಂಬ ಮಾಹಿತಿ ಇದೆ. ಹೀಗಾಗಿ ಈ ವಸೂಲಿ ಸರಕಾರದ ವಿರುದ್ಧ ಸಿಬಿಐ ತನಿಖೆ ಆಗಬೇಕೆಂದು ಬಿಜೆಪಿ ಮುಖಂಡ ಸಿ.ಟಿ.ರವಿ ಆಗ್ರಹಿಸಿದರು. ರವಿವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶದ ಕಮಿಷನ್‌ ಕಾಂಗ್ರೆಸ್‌ ಆಗಿ ಬದಲಾಗಿದೆ. ನಂ.1 ಹಾಗೂ ನಂ.2 ಇಬ್ಬರಿಗೂ ರಾಜ್ಯಾದ್ಯಂತ ನೂರಾರು ಬೇನಾಮಿಗಳು ಇದ್ದಾರೆ. ಸದ್ಯಕ್ಕೆ ಇಬ್ಬರು ಸಿಕ್ಕಿ ಬಿದ್ದಿದ್ದಾರಷ್ಟೆ. ಅವರ ಬಳಿ ಸಿಕ್ಕಿರುವ 86 ಕೋಟಿ ರೂ. ಹಣವೇ ಇದಕ್ಕೆ ಸಾಕ್ಷಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next