Advertisement

ಸಂಘಟನೆಯಿಂದ ಜನರನ್ನು ತಲುಪಿ: ನಾಯಕ್‌

07:55 PM Nov 08, 2020 | Suhan S |

ಚಿಕ್ಕಮಗಳೂರು: ಬಿಜೆಪಿಯು ಎಲ್ಲಾ ವರ್ಗದ ಪ್ರಶಿಕ್ಷಣ ಕಾರ್ಯಕರ್ತರಿಗೆ ಭಾರತಮಾತೆಯ ಸೇವೆ ಮಾಡುವ ಅವಕಾಶ ನೀಡಿದ್ದು, ಪಕ್ಷದ ಶಿಸ್ತು-ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳುವುದರೊಂದಿಗೆ ಸಂಘಟನೆ ಮೂಲಕ ಜನರನ್ನು ತಲುಪುವ ಕೆಲಸ ಮಾಡಬೇಕು ಎಂದು ಉಜಿರೆ ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹನಾಯಕ್‌ ಹೇಳಿದರು.

Advertisement

ಶನಿವಾರ ನಗರದ ಬಿಜೆಪಿ ಪಾಂಚಜನ್ಯ ಸಭಾಂಗಣದಲ್ಲಿ ಗ್ರಾಮಾಂತರ ಮಂಡಲ ಪ್ರಶಿಕ್ಷಣ ವರ್ಗಕ್ಕೆ ಆಯೋಜಿಸಿದ್ದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಬಿಜೆಪಿ ಕಾರ್ಯಕರ್ತರನ್ನು ಒಗ್ಗೂಡಿಸಿ ಸಂಘಟನಾ ಸಾಮರ್ಥ್ಯವನ್ನು ಹೆಚ್ಚಿಸಲು ಉದ್ದೇಶದಿಂದ ಜಿಲ್ಲೆಯ ಎಲ್ಲಾ ಗ್ರಾಮ ಹಾಗೂ ಗ್ರಾಮಾಂತರ ಪದಾಧಿ ಕಾರಿಗಳು, ಕಾರ್ಯಕರ್ತರನ್ನು ಒಳಗೊಂಡ ಸಭೆ ಆಯೋಜಿಸಿದ್ದು ಇದೊಂದು ಭಾವನಾತ್ಮಕ ಸಭೆ ಎನಿಸಿಕೊಂಡಿದೆ ಎಂದರು.

ನಗರ ಮಂಡಲ ಅಧ್ಯಕ್ಷ ಮಧು ಕುಮಾರ್‌ ರಾಜ್‌ಅರಸ್‌ ಮಾತನಾಡಿ, ಪ್ರತಿಯೊಬ್ಬ ಪ್ರಶಿಕ್ಷಣ ಕಾರ್ಯಕರ್ತರು ಪಕ್ಷಕ್ಕಾಗಿ ಶ್ರಮವಹಿಸಿ ದುಡಿಯಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಸರ್ಕಾರದ ಅಭಿವೃದ್ಧಿ ಸಾಧನೆಗಳ ಕುರಿತಾಗಿ ಜನರಲ್ಲಿ ಅರಿವು ಮೂಡಿಸಬೇಕು. ಜನಸೇವೆಯನ್ನು ಆದ್ಯತೆಯಾಗಿರಿಸಿಕೊಂಡು ಪಕ್ಷದ ಬಲವರ್ಧನೆಗೆ ಮುಂದಾಗಬೇಕು ಎಂದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್‌ ಮಾತನಾಡಿ, ಪ್ರತಿ ಬಾರಿಯಂತೆ ಈ ಬಾರಿ ವಿಷಯ ಪ್ರಮುಖರೊಳಗೊಂಡ ಕಾರ್ಯಾಗಾರ ನಡೆಸಲಾಗಿದು,ª ಪಕ್ಷದ ಸಂಘಟನೆ, ಶಿಸ್ತು, ಸಂಯಮವನ್ನು ಮೈಗೂಡಿಸಿಕೊಳ್ಳಬೇಕು. ಪಕ್ಷದ ರಾಜ್ಯಾಧ್ಯಕ್ಷರ ಸೂಚನೆಯಂತೆ 10 ವಿಷಯಗಳನ್ನೊಳಗೊಂಡಂತೆ ಪ್ರಶಿಕ್ಷಣ ವರ್ಗಕ್ಕೆ ಪಕ್ಷ ಸಂಘಟನೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರಡಪ್ಪ, ಮುಗುಳವಳ್ಳಿ ನಿರಂಜನ್‌ ಮತ್ತಿತರರು ಇದ್ದರು.

ಕಡೂರು: ಬಿಜೆಪಿ ಪ್ರಶಿಕ್ಷಣ ಕಾರ್ಯಾಗಾರ ಉದ್ಘಾಟನೆ :

Advertisement

ಕಡೂರು: ಬಿಜೆಪಿ ಸಿದ್ಧಾಂತ ಒಪ್ಪಿಕೊಳ್ಳುವ ಮೂಲಕ ನಮ್ಮ ಪಕ್ಷವನ್ನು ಸಮರ್ಥಿಸಿಕೊಂಡು ಸೇವೆ ಮಾಡಿದರೆ ಉತ್ತಮವಾದ ನಾಯಕನಾಗಿ ಬೆಳೆಯಲು ಸಾಧ್ಯ ಎಂದು ಶಾಸಕ ಬೆಳ್ಳಿಪ್ರಕಾಶ್‌ ಹೇಳಿದರು.

ಕಡೂರು ಮಂಡಲದ ಖಂಡುಗದಹಳ್ಳಿಯ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದ ಸಮುದಾಯ ಭವನದಲ್ಲಿ ನಡೆದ ಎರಡು ದಿನದ “ಪ್ರಶಿಕ್ಷಣ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪಕ್ಷವನ್ನು ಬೆಳೆಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ಸಂತೋಷ್‌ ಜೀಯವರು. ರಾಷ್ಟ್ರ ರಕ್ಷಣೆ, ರಾಷ್ಟ್ರಭಕ್ತಿ ಎರಡು ಇದ್ದಲ್ಲಿ ತನ್ನ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮುಂದೆ ಬೆಳೆಯಲು ಸಾದ್ಯವಾಗುತ್ತದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕಲ್ಮರುಡಪ್ಪ ಮಾತನಾಡಿ, ಭಾರತವನ್ನು ನಿಜವಾದ ಪ್ರಜಾಪ್ರಭುತ್ವದ ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಕೆಲಸ ಮಾಡುತ್ತಿದೆ ಎಂದರು. ಜಿಲ್ಲಾ ಪ್ರ. ಕಾರ್ಯದರ್ಶಿ ದೇವರಾಜ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ದೇವಾನಂದ್‌ ಅಧ್ಯಕ್ಷತೆ ವಹಿಸಿದ್ದರು. ಕಡೂರು ನಗರ ಘಟಕದ ಅಧ್ಯಕ್ಷ ಕೆ.ಬಿ. ಸೋಮೇಶ್‌, ರಮೇಶ ಬೆಳಗೋಡು, ಬಂಕ್‌ ಮಂಜು, ಕುರುಬಗೆರೆ ಮಹೇಶ್‌, ಶಾಮಿಯಾನ ಚಂದ್ರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next