Advertisement
ಕಾಂಗ್ರೆಸ್ ಬೆಂಗಳೂರು ಘಟಕದ ಸಭೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಆಡಳಿತ ವಿರೋಧ ಪಕ್ಷ ಎರಡು ಇರಬೇಕು. ಆದರೆ ಬಿಜೆಪಿಯವರು ತಮ್ಮ ಲೋಪ ಮುಚ್ಚಿಕೊಳ್ಳಲು ಆಮಿಷ ಒಡ್ಡುತ್ತಿದ್ದಾರೆ. ಭ್ರಷ್ಟಾಚಾರ ಇವತ್ತು ವಿಪರೀತವಾಗಿದೆ. ಎಲ್ಲಿ ನೋಡಿದರೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.
Related Articles
Advertisement
ಮಿಷನ್ 2022 ಮಾಡುತ್ತಿದಾರೆ, ಆದರೆ ಅದಕ್ಕೆ ಹಣವನ್ನೇ ಮೀಸಲಿಟ್ಟಿಲ್ಲ. ಹಣವನ್ನೇ ಇಡದೇ ಬಿಜೆಪಿ ಸರ್ಕಾರ ಮಿಷನ್ 2022 ಘೋಷಿಸಿದೆ. ನಾವು ಈ ಬಗ್ಗೆ ಹೋರಾಟ ಮಾಡಿದರೆ ಪತ್ರಿಕೆಗಳಲ್ಲಿ ಬರೆಯಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಅನೇಕ ಗುಂಪುಗಳಿವೆ, ಬಿಜೆಪಿ ನಾಯಕರಿಗೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ನಮ್ಮಲ್ಲೂ ಗುಂಪುಗಳಿವೆ, ಆದರೆ ಬಿಜೆಪಿಯಷ್ಟಿಲ್ಲ, ಅಲ್ಲಿ ಗುಂಪುಗಾರಿಕೆ ಹೆಚ್ಚಿದೆ. ಹಾಗಾಗಿ ಸಂಪುಟ ವಿಸ್ತರಣೆಯನ್ನೇ ಮಾಡಲಾಗಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ: ಜೀರೋ ಟ್ರಾಫಿಕ್ ನಲ್ಲಿ ಕೇಂದ್ರ ಸಚಿವ ಸದಾನಂದ ಗೌಡರು ಬೆಂಗಳೂರಿಗೆ ಶಿಫ್ಟ್
ಬಿಜೆಪಿ ಈ ಹಿಂದೆ ಮನುವಾದ ಅನುಸರಣೆ ಮಾಡುತ್ತಿತ್ತು. ಈಗ ಬಿಜೆಪಿ ‘ಮನೀ’ ವಾದ ಅನುಸರಿಸುತ್ತಿದೆ ಎಂದು ಟೀಕಿಸಿದ ಅವರು, ಯಡಿಯೂರಪ್ಪ ಡಾಕ್ಟರ್ ಯಡಿಯೂರಪ್ಪ ಅಂತ ಹಾಕಿಕೊಳ್ಳುವುದನ್ನೇ ಬಿಟ್ಟರ ಅಂತಹ ಕಂಪನಿ ಅವರಿಗೆ ಡಾಕ್ಟರೇಟ್ ಕೊಟ್ಟಿತ್ತು. ಈಗ ಮೋದಿಗೂ ಅಮೆರಿಕಾದ ಅವಾರ್ಡ್ ಕೊಟ್ಟಿದ್ದಾರೆ, ಟ್ರಂಪ್ ಸೋಲೋದಕ್ಕೆ ಓಟ್ ಕೊಡಿಸಿದರಲ್ಲ, ಅದಕ್ಕೇ ಅವಾರ್ಡ್ ಕೊಟ್ಟಿದ್ದಾರೆ. ಬಿಜೆಪಿಯವರು ಎಂದರೆ ಡೋಂಗಿಗಳು ಎಂದು ರಾಮಲಿಂಗಾರೆಡ್ಡಿ ಟೀಕಿಸಿದರು.