Advertisement

BJP ಗೆ ಇತಿಹಾಸ ತಿಳಿದಿಲ್ಲ: ಪೈಲಟ್‌

12:23 AM Aug 16, 2023 | Team Udayavani |

ಜೈಪುರ: ರಾಜಸ್ಥಾನ ಮಾಜಿ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರ ತಂದೆ ರಾಜೇಶ್‌ ಪೈಲಟ್‌ ಐಎಎಫ್ನಲ್ಲಿದ್ದಾಗ ಮಣಿಪುರದ ಮೇಲೆ ಬಾಂಬ್‌ ದಾಳಿ ನಡೆಸಿದ್ದರು ಎಂದಿದ್ದ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯರನ್ನು ಸಚಿನ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮಗೆ ಇತಿ ಹಾಸವೂ ತಿಳಿದಿಲ್ಲ, ದಿನಾಂಕವೂ ನೆನಪಿಲ್ಲವೆಂದು ಟೀಕಿಸಿದ್ದಾರೆ.

Advertisement

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಅವಧಿಯಲ್ಲಿ 1966ರ ಮಾರ್ಚ್‌ 5ರಂದು ಮಣಿಪುರದ ಜೈಸ್ವಾಲ್‌ ಮೇಲೆ ಐಎಎಫ್ ಪಡೆಗಳನ್ನು ಬಳಸಿ ಬಾಂಬ್‌ ದಾಳಿ ನಡೆಸಲಾಗಿದ್ದ ವಿಚಾರ ಸಂಸತ್‌ನಲ್ಲಿ ಇತ್ತೀಚೆಗೆ ಪ್ರಸ್ತಾವವಾಗಿತ್ತು. ಈ ಸಂಬಂಧಿಸಿದ ವೀಡಿಯೋ ಹಂಚಿಕೊಂಡಿದ್ದ ಮಾಳವೀಯ, “ಐಎಎಫ್ನಲ್ಲಿ ಅಂದು ಪೈಲಟ್‌ಗಳಾಗಿದ್ದ ರಾಜೇಶ್‌ ಹಾಗೂ ಸುರೇಶ್‌ ನಮ್ಮ ನಾಗರಿಕರ ಮೇಲೆಯೇ ಬಾಂಬ್‌ ಹಾಕಿದ್ದರು. ರಾಜಕೀಯಕ್ಕಾಗಿ ಮುಂದೆ ಇಂದಿರಾ, ಅದೇ ಪೈಲಟ್‌ಗಳನ್ನು ಸಂಸದರು, ಸಚಿವರನ್ನಾಗಿಸಿದರು ಎಂದು ಟೀಕಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿನ್‌ ಪೈಲಟ್‌ “ನನ್ನ ತಂದೆ ಬಾಂಬ್‌ ಹಾಕಿದ್ದು ಸತ್ಯ! ಆದರೆ ಮಣಿಪುರದ ಮೇಲಲ್ಲ. 1971ರ ಯುದ್ಧದಲ್ಲಿ ಪೂರ್ವ ಪಾಕಿಸ್ಥಾನದ ಮೇಲೆ ಬಾಂಬ್‌ ಹಾಕಿದ್ದರು. ನನ್ನ ತಂದೆ ಐಎಎಫ್ ಸೇರ್ಪಡೆಗೊಂಡಿದ್ದೇ 1966ರ ಅಕ್ಟೋಬರ್‌ 29ರಂದು’ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next