Advertisement

ಬಿಜೆಪಿಗೆ ತತ್ವ-ಸಿದ್ಧಾಂತ ಇಲ್ಲ: ಕಾಗೋಡು

12:49 PM Apr 30, 2018 | |

ಸಾಗರ: ಎರಡು ಬಾರಿ ಸಾಗರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಗೋಪಾಲಕೃಷ್ಣ ಬೇಳೂರು ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಯಡಿಯೂರಪ್ಪ ಅವರು ಟಿಕೆಟ್‌ ನೀಡದೆ ಹೋಗಿರುವುದನ್ನು ನೋಡಿದರೆ ಬಿಜೆಪಿಯಲ್ಲಿ ತತ್ವ- ಸಿದ್ಧಾಂತಗಳೆಲ್ಲಾ ಬೊಗಳೆ ಎನ್ನುವುದು ಗೊತ್ತಾಗುತ್ತದೆ ಎಂದು ಕಂದಾಯ ಸಚಿವ ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಹೇಳಿದರು.

Advertisement

ಇಲ್ಲಿನ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಭಾನುವಾರ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡವರನ್ನು ಸ್ವಾಗತಿಸುವ
ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅವಕಾಶ ಸಿಕ್ಕಾಗ ಐದು ವರ್ಷಗಳ ಕಾಲ ಆಡಳಿತ ನಡೆಸದೆ ತಮ್ಮದೇ ಪಕ್ಷದವರಿಂದ ಕೇಸು ಹಾಕಿಸಿಕೊಂಡು ಜೈಲು ಸೇರಿದ್ದ  ಯಡಿಯೂರಪ್ಪ ಈಗ 150 ಸ್ಥಾನ ರಾಜ್ಯದಲ್ಲಿ ಗೆಲ್ಲುತ್ತೇವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿ. ಸಾಮಾಜಿಕ ಸಮಾನತೆ, ಬದ್ಧತೆ, ನೈತಿಕತೆ ಇರುವುದು ಕಾಂಗ್ರೆಸ್‌ ಪಕ್ಷದಲ್ಲಿ ಮಾತ್ರ. ಈಗ ನನ್ನೊಂದಿಗೆ ಗೋಪಾಲಕೃಷ್ಣ ಇದ್ದಾರೆ. ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್‌ 7 ಸ್ಥಾನಗಳನ್ನು ಗೆಲ್ಲಿಸುವ ಕೆಲಸವನ್ನು ನಾವೆಲ್ಲ ಸೇರಿ ಮಾಡಬೇಕು. ಬೇಳೂರು ಹಾಗೂ ನಾನು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಸೈನಿಕರಾಗಿ, ಸೇವಕರಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು. 

ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಗೋಪಾಲಕೃಷ್ಣ ಮತ್ತು ನಾನು ಬೇರೆ ಬೇರೆ ಪಕ್ಷದಲ್ಲಿದ್ದು ರಾಜಕೀಯ ಮಾಡಿದ್ದೇವೆ. ನಮ್ಮದು ಕಳ್ಳುಬಳ್ಳಿ ಸಂಬಂಧ. ಆದರೂ ರಾಜಕೀಯವಾಗಿ ನಾವು ಅದನ್ನು ತರಲಿಲ್ಲ. ಮಂತ್ರಿಯಾಗಿ ಎರಡೂವರೆ ವರ್ಷದಲ್ಲಿ ಅದಕ್ಕೆ ರಾಜೀನಾಮೆ ಏಕೆ ಕೊಟ್ಟರು ಎನ್ನುವುದನ್ನು ಹಾಲಪ್ಪ ಜನರಿಗೆ ತಿಳಿಸಲಿ. ಇಂತಹವರಿಗೆ ಚುನಾವಣೆ ಮೂಲಕ ತಕ್ಕ ಪಾಠ ಕಲಿಸಬೇಕು. ಕನಿಷ್ಟ 80ರಿಂದ 1 ಲಕ್ಷ ಮತಗಳ ಅಂತರದಿಂದ ಗೆದ್ದು ತಕ್ಕ ಉತ್ತರ ಕೊಡೋಣ ಎಂದು ಕರೆ ನೀಡಿದರು.

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಪಕ್ಕದ ಕ್ಷೇತ್ರದಿಂದ ಬಂದ ಹರತಾಳು ಹಾಲಪ್ಪ ಅವರಿಗೆ ಬಿಜೆಪಿ ಟಿಕೆಟ್‌ ಕೊಡಲಾಗಿದೆ. ಹಾಗಾದರೆ ಸಾಗರದಲ್ಲಿ ಯಾರೂ ಬಿಜೆಪಿಯಲ್ಲಿ ನಿಲ್ಲುವ ಗಂಡಸರು ಇರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಬ್ರಾಹ್ಮಣ ಸಮುದಾಯದವರು ಟಿಕೆಟ್‌ ಕೇಳುತ್ತಿದ್ದರು. ಅವರಿಗೆ ಟಿಕೆಟ್‌ ಕೊಟ್ಟಿದ್ದರೆ ನಾನು ಪಕ್ಷ ತೊರೆಯುತ್ತಿರಲಿಲ್ಲ. ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುತ್ತಿದ್ದೆ ಎಂದರು.ಇದೇ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಭೀಮನೇರಿ ಶಿವಪ್ಪ, ಕೋಳೂರು ಗ್ರಾಪಂ ಮಾಜಿ ಅಧ್ಯಕ್ಷರಾದ ಬಿ.ಎ.ಇಂದುಧರ ಗೌಡ, ನವೀನ ಗೌಡ, ತಾಪಂ ಸದಸ್ಯರಾದ ಕಲಸೆ ಚಂದ್ರಪ್ಪ, ಸುವರ್ಣ ಟೀಕಪ್ಪ, ಸೋಮಶೇಖರ ಲ್ಯಾವಿಗೆರೆ, ಬಿಜೆಪಿ ಪದಾಧಿಕಾರಿಗಳಾಗಿರುವ ವಿ. ಶಂಕರ್‌, ಚಂದ್ರಶೇಖರ ಅದರಂತೆ, ಗಣಪತಿ ಮಂಡಗಳಲೆ, ಆನಂದ ಭೀಮನೇರಿ, ಅಶೋಕ ಬೇಳೂರು, ವೆಂಕಟಗಿರಿ ಮತ್ತಿಕೊಪ್ಪ, ಪ್ರವೀಣ ಬಣಕಾರ್‌, ಎಪಿಎಂಸಿ ಸದಸ್ಯ ಅಣ್ಣಪ್ಪ ಸೂರನಗದ್ದೆ ಸೇರಿದಂತೆ ವಿವಿಧ ಗ್ರಾಪಂ ಅಧ್ಯಕ್ಷರು, ಸದಸ್ಯರು ಹಲವರು ಕಾಂಗ್ರೆಸ್‌ ಸೇರ್ಪಡೆಗೊಂಡರು. 

ಪಕ್ಷದ ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ್‌, ತಾಲೂಕು ಅಧ್ಯಕ್ಷ ಎಲ್‌.ಟಿ. ತಿಮ್ಮಪ್ಪ, ನಗರ ಅಧ್ಯಕ್ಷ ಮಕೂಲ್‌ ಅಹ್ಮದ್‌, ಪ್ರಧಾನ ಕಾರ್ಯದರ್ಶಿ ಗಣಪತಿ ಹೆನಗೆರೆ, ಡಿ. ದಿನೇಶ್‌, ಅನ್ವರ್‌ ಭಾಷಾ, ಜಿಲ್ಲಾ ಕಾರ್ಯದರ್ಶಿ ತುಕಾರಾಮ, ಎಪಿಎಂಸಿ ಅಧ್ಯಕ್ಷ ಕೆ. ಹೊಳೆಯಪ್ಪ, ನಗರಸಭೆ ಅಧ್ಯಕ್ಷೆ ಬಿ.ಬಿ. ಫಸಿಹಾ ಇನ್ನಿತರರು ಇದ್ದರು

Advertisement

ಹರತಾಳು ಹಾಲಪ್ಪ ನನ್ನನ್ನು ಸಹ ಸೆಕ್ಸ್‌ ಸ್ಕಾಂಡಲ್‌ನಲ್ಲಿ ಸಿಕ್ಕಿಸುವ ಪ್ರಯತ್ನ ಮಾಡಿದ್ದಕ್ಕೆ ಸಂಬಂಧಪಟ್ಟ ದಾಖಲೆ ಸಂಗ್ರಹಿಸಿದ್ದೇನೆ.  ದ್ಯದಲ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತೇನೆ.  ಬೇಳೂರು ಗೋಪಾಲಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next