ಮೈಸೂರು: ಮೈಸೂರು ಭಾಗದಲ್ಲಿ ಬಿಜೆಪಿಗೆ ಭದ್ರ ಬುನಾದಿಯೇ ಇಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಮಾಡಿಕೊಳ್ಳಲಿ ಬಿಡಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. ಪ್ರಧಾನಿ ಮೋದಿ ಅವರ ಮೈಸೂರು ಭೇಟಿ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಮೈಸೂರಿಗೆ ಆಗಮಿಸಿ ಟಿ.ಕೆ.ಲೇಔಟ್‌ನ ತಮ್ಮ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಅವರು, ಸೋಮವಾರ ಸುದ್ದಿಗಾ ರರ ಜತೆ ಮಾತನಾಡಿದರು.
ಹಳೇ ಮೈಸೂರು ಭಾಗದ ಯಾವ ಜಿಲ್ಲೆಗಳಲ್ಲಿ ಬಿಜೆಪಿ ಸಂಪೂರ್ಣವಾಗಿ ಗೆದ್ದಿದೆ ಎಂದು ಪ್ರಶ್ನಿಸಿದ ಅವರು, ಚುನಾವಣೆಗಾಗಿ ಸಮಾವೇಶ ಮಾಡುತ್ತಿದ್ದಾರೆ. ಈ ಪ್ರಾಂತ್ಯದಲ್ಲಿ ಬಿಜೆಪಿ ಯಾವತ್ತೂ ಗೆದ್ದಿಲ್ಲ ಎಂದು ಹೇಳಿದರು.
ರಾಜ್ಯದ ಪಾಲಿದೆ: ಪ್ರಧಾನಿಯವರು ಚಾಲನೆ ನೀಡಿರುವ ರೈಲ್ವೆ ಯೋಜನೆಗಳಲ್ಲಿ ರಾಜ್ಯದ ಪಾಲೂ ಇದೆ. ಮೈಸೂರು- ಬೆಂಗ ಳೂರು ಜೋಡಿ ರೈಲು ಮಾರ್ಗಕ್ಕೆ ಕೇಂದ್ರ ಕ್ಕಿಂತ ರಾಜ್ಯ ಸರ್ಕಾರವೇ ಹೆಚ್ಚಿನ ಅನುದಾನ ನೀಡಿದೆ. ಹೀಗಾಗಿ ಪ್ರಧಾನಿಯವರ ಜತೆಗೆ ರೈಲ್ವೆ ಕಾರ್ಯಕ್ರಮದಲ್ಲಿ ಭಾಗಿ ಯಾಗಿದ್ದೇನೆ ಎಂದರು.
ರೇಗಿದ ಸಿಎಂ: ಸಿಎಂ ವಾಸ್ತವ್ಯ ವಿಷಯ ತಿಳಿದ ಜಿಲ್ಲೆಯ ಹಲವು ಮಂದಿ ಸಮಸ್ಯೆಗಳನ್ನು ಹೊತ್ತು ತಂದಿದ್ದರು. ಅಹವಾಲುಗಳನ್ನು ಶಾಂತಚಿತ್ತದಿಂದಲೇ ಸಿಎಂ ಸಿದ್ದರಾಮಯ್ಯ ಅವರು ಆಲಿಸಿ, ಪರಿಹರಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತಿದ್ದರು.
ಈ ವೇಳೆ ಮೈಸೂರಿನ ಡಿ.ಸಾಲುಂಡಿ ಗ್ರಾಮದ ನಿವಾಸಿಯೊಬ್ಬರು ಬ್ಯಾಂಕ್ ಕೆಲಸ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರಲ್ಲಾ, ಇನ್ನೂ ಕೊಡಿಸಲಿಲ್ಲ ಎಂದು ಪ್ರಶ್ನಿಸಿದಾಗ ಗರಂ ಆದ ಸಿಎಂ, ಕೇಳಿದವರಿ ಗೆಲ್ಲಾ ಕೆಲಸ ಕೊಡಿಸಲಾಗುತ್ತಾ ನಡೀ ಎಂದು ರೇಗಿ ಕಳುಹಿಸಿದರು.