Advertisement

Lok Sabha Elections ಹಿನ್ನಡೆಯಾದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ತಲೆದಂಡ?

12:31 AM Jun 11, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದ ಕ್ಷೇತ್ರಗಳ ಬಗ್ಗೆ ಅಧ್ಯಯನಕ್ಕೆ ಬಿಜೆಪಿ ಮುಂದಾಗಿದೆ. ಯಾವ್ಯಾವ ಜಿಲ್ಲೆಗಳಲ್ಲಿ ಪಕ್ಷಕ್ಕೆ ಮತ ಕಡಿಮೆಯಾಗಿದೆ ಎಂಬ ಬಗ್ಗೆ ಪಕ್ಷ ವಿಶ್ಲೇಷಣೆ ಆರಂಭಿಸಿದ್ದು, ಕೆಲವು ಜಿಲ್ಲಾಧ್ಯಕ್ಷರ ತಲೆದಂಡ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Advertisement

ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿಯ ಸಂಖ್ಯಾಬಲ ಹೆಚ್ಚಿದೆ. ಆದರೆ ಒಟ್ಟಾರೆ ಸಾಧನೆ ಕಳೆದ ಬಾರಿಗಿಂತ ಕಳಪೆಯಾಗಿದೆ. ಇದಕ್ಕೆ ಕಾರಣ ಹುಡುಕುವಂತೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೂಚನೆ ನೀಡಿದ್ದು, ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಿಂದ ಮುನ್ನಡೆಯ ಪ್ರಮಾಣವನ್ನು ಕಲೆ ಹಾಕುವಂತೆ ಸೂಚನೆ ನೀಡಲಾಗಿದೆ.

ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಐದು ಕ್ಷೇತ್ರಗಳು ಹಾಗೂ ಲಿಂಗಾಯತ ಪ್ರಾಬಲ್ಯದ ದಾವಣಗೆರೆ ಹಾಗೂ ಚಿಕ್ಕೋಡಿ ಕಾಂಗ್ರೆಸ್‌ ವಶವಾಗಿರುವುದರ ಹಿಂದಿನ ಕಾರಣವನ್ನು ತಿಳಿಯುವಂತೆ ಸೂಚನೆ ನೀಡಲಾಗಿದೆ. ಈ ವರದಿ ಬಂದ ಬಳಿಕ ಮತ್ತೂಮ್ಮೆ ರಾಜ್ಯ ಪ್ರವಾಸ ನಡೆಸಲು ವಿಜಯೇಂದ್ರ ನಿರ್ಧರಿಸಿದ್ದಾರೆ.

ಲೋಕಸಭಾ ಚುನಾವಣೆಯ ಬೆನ್ನಲ್ಲೇ ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ ಚುನಾವಣೆ ಎದುರಾಗಲಿದೆ. ಹೀಗಾಗಿ ತಳಹಂತದಿಂದ ಪಕ್ಷ ಸಂಘಟನೆ ಮಾಡುವುದ ಕ್ಕಾಗಿ ಪ್ರವಾಸ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಮತ್ತೊಮ್ಮೆ ಪಕ್ಷದ ಪದಾಧಿಕಾರಿ ಪಟ್ಟಿ ಪರಿಷ್ಕರಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next