Advertisement
ನಗರದ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ೩ ದಶಕದಲ್ಲಿ ವಿದ್ಯಾರ್ಥಿಗಳು ಬೀದಿಗೆ ಇಳಿದು ಗಲಾಟೆ ಮಾಡಿಲ್ಲ. ಈ ಹಿಂದೆ ಕಾಲೇಜು ಚುನಾವಣೆಗಳು ನಡೆದಾಗ ಗಲಾಟೆ ನಡೆಯುತ್ತಿದ್ದವು. ಅದನ್ನು ರದ್ದು ಮಾಡಿದಾಗಿನಿಂದ ಗಲಾಟೆ ನಡೆದಿಲ್ಲ. ಬಿಜೆಪಿಗರೇ ಪ್ರಚೋದನೆ ನೀಡಿ ಹಿಜಾಬ್ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಗಲಾಟೆಯಲ್ಲಿ ಕಾಂಗ್ರೆಸ್ ಕುಮ್ಮಕ್ಕಿದೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಅದೆಲ್ಲವೂ ಸುಳ್ಳು ಎಂದರು.
Related Articles
Advertisement
ರಾಜ್ಯದಲ್ಲಿ ವಾಮಾ ಮಾರ್ಗದಲ್ಲಿ ಸರ್ಕಾರ ರಚನೆಯಾಗಿದೆ. ಯಾವು ನೀತಿ, ನಿಯಮಗಳಿಲ್ಲ. ಜನಪ್ರತಿನಿಧಿಗಳನ್ನು ಖರೀದಿಸಿ ಸರ್ಕಾರ ಮಾಡಿದರು. ಬಿಎಸ್ವೈ ಕಷ್ಟಪಟ್ಟು ಸರ್ಕಾರ ತಂದರು. ಆದರೆ, ಅವರನ್ನೇ ಸಿಎಂ ಸ್ಥಾನದಿಂದ ಇಳಿಸಿದರು. ಇದು ಆಂತರಿಕ ಪ್ರಜಾಪ್ರಭುತ್ವನಾ ? ಆದರೆ, ನಮ್ಮ ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡ್ತಾರೆ. ಅವರು ದೇಶ ಮಾರಾಟಕ್ಕಿಟ್ಟಿದ್ದಾರೆ. ಯಾವುದನ್ನು ಅವರು ಕಟ್ಟಿಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಘೋಷಣೆ ಹೈಕಮಾಂಡ್‌ಗೆ ಬಿಟ್ಟಿದ್ದು. ಪಕ್ಷ ಬಿಟ್ಟು ಹೋದವರನ್ನ ಸೇರಿಸಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ 150 ಸ್ಥಾನ ಗೆಲ್ಲಲಿದೆ ಎಂದರಲ್ಲದೇ, ತೆಲಂಗಾಣ ಸಿಎಂ ಸಂವಿಧಾನ ಬದಲಾವಣೆ ಹೇಳಿಕೆ ಖಂಡಿಸುತ್ತೇವೆ. ಸಂವಿಧಾನ ಬದಲಾದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಕ್ತದ ಕೋಡಿ ಹರಿಯುತ್ತದೆ ಎಂದರು.
ಕಾಂಗ್ರೆಸ್ ಸದಸ್ಯತ್ವ ಅಭಿಯಾನಸದಸ್ಯತ್ವ ಅಭಿಯಾನ ಆರಂಭಿಸಿದ್ದೇವೆ. ಡಿಜಿಟಲ್ ಮಾದರಿಯಲ್ಲಿ ಆಪ್ ಮೂಲಕ ಅಭಿಯಾನ ಆರಂಭಿಸಿದ್ದೇವೆ. ಮಾ.31 ವರೆಗೆ ಪ್ರತಿ ಮತಗಟ್ಟೆಯಲ್ಲಿ ಕನಿಷ್ಠ100 ಸದಸ್ಯರನ್ನ ಮಾಡಬೇಕು ಎಂದು ಗುರಿಯಿದೆ. ಮನೆ ಮನೆ ಭೇಟಿ ನೀಡಿ ಸದಸ್ಯತ್ವ ಮಾಡುತ್ತೇವೆ. ಜಿಲ್ಲೆಯಲ್ಲಿ ಪಾರ್ಟಿ ಗಟ್ಟಿಯಾಗಿದೆ. ನಮ್ಮೆಲ್ಲ ನಾಯಕರು ತಮ್ಮ ಕ್ಷೇತ್ರದಲ್ಲಿ ಸದಸ್ಯತ್ವ ಮಾಡಲಿದ್ದಾರೆ. ಪ್ರತಿಯೊಬ್ಬರಿಂದ 5 ರೂ. ಪಡೆದು ಸದಸ್ಯತ್ವ ಪಡೆಯಬೇಕು. ಬೂತ್ ಗೆ ಒಬ್ಬ ಕಾಯಂ ಅಧ್ಯಕ್ಷ, ಕಾರ್ಯದರ್ಶಿ, ಏಜೆಂಟ್ ಮಾಡುತ್ತೇವೆ ಎಂದು ಎಚ್.ಆಂಜಿನೇಯ ಅವರು ತಿಳಿಸಿದರು.