Advertisement
ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನಲ್ಲಿ ಮಾತನಾಡಿರುವ ಅವರು, ಮುಸ್ಲಿಮರಿಗೆ ಮೀಸಲಾತಿ ನೀಡುವುದರ ವಿರುದ್ಧ, 370ನೇ ವಿಧಿ ರದ್ದತಿಯ ಪರ ಹಾಗೂ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಬಗ್ಗೆ ಬಿಜೆಪಿ ಮಾತನಾಡಿದೆ. ಇದನ್ನೇ ನೀವು ಧರ್ಮಾಧಾರಿತ ಎಂದು ಕರೆಯುವುದಾದರೆ, ಬಿಜೆಪಿ ಇದನ್ನು ಮಾಡಿದೆ ಮತ್ತು ಇದನ್ನು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ.
ಜಮ್ಮು- ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವುದು ನಮ್ಮ ಆದ್ಯತೆ
3ನೇ ಅವಧಿಯಲ್ಲಿ ಒಂದು ದೇಶ ಒಂದು ಚುನಾವಣೆ ಜಾರಿ ಮಾಡುತ್ತೇವೆ.
ಸಮಾನ ನಾಗರಿಕ ಸಂಹಿತೆ ಜಾರಿಯೂ ನಮ್ಮ ಸರಕಾರದ ಆದ್ಯತೆ
ಸೋಲು ಮುಚ್ಚಿಟ್ಟುಕೊಳ್ಳಲು ಚುನಾವಣ ಆಯೋಗದ ಹೇಳಿಕೆ ಬಳಕೆ ಮಾಡುವ ವಿಪಕ್ಷಗಳು
Related Articles
ಮೋದಿ 3ನೇ ಅವಧಿಗೆ ಪ್ರಧಾನಿಯಾದರೆ ಜಮ್ಮು-ಕಾಶ್ಮೀ ರದಲ್ಲಿ ಚುನಾವಣೆ ನಡೆಸುವುದು ಆದ್ಯತೆಯಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಜಮ್ಮು-ಕಾಶ್ಮೀರ ಚುನಾವಣೆ ಬಳಿಕ ಅದಕ್ಕೆ ರಾಜ್ಯದ ಸ್ಥಾನಮಾನ ದೊರಕಿಸು ವುದಾಗಿ ಸಂಸತ್ತಿನಲ್ಲೇ ನಾನು ಹೇಳಿದ್ದೆ. ಇದೀಗ ಕ್ಷೇತ್ರ ಪುನ ರ್ವಿಂಗಡನೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದರು.
ಒಂದು ದೇಶ ಒಂದು ಚುನಾವಣೆ: ಮೋದಿ ಸರಕಾರದ ಮುಂದಿನ ಅವಧಿಯಲ್ಲಿ ಒಂದು ದೇಶ ಒಂದು ಚುನಾವಣೆ ನೀತಿಯನ್ನು ಜಾರಿ ಮಾಡಲಾಗುತ್ತದೆ. ಏಕ ಕಾಲ ದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾ ವಣೆ ಗಳು ನಡೆಯುವುದರಿಂದ ಖರ್ಚು ಉಳಿತಾಯವಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
Advertisement
ರಾಹುಲ್ ವಿದೇಶಕ್ಕೆ ಹೋದರೆ, ಮೋದಿ ಸೈನಿಕರೊಟ್ಟಿಗೆಸಾಸಾರಾಂ: ಪ್ರಸ್ತುತ ನಡೆಯುತ್ತಿರುವ ಚುನಾವಣೆ ರಜೆ ಬಂದರೆ ವಿದೇಶಕ್ಕೆ ಓಡಿಹೋಗುವ ರಾಹುಲ್ ಗಾಂಧಿ ಹಾಗೂ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಹೋರಾಟವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಬಿಹಾರದ ಸಾಸಾರಾಂನಲ್ಲಿ ರವಿವಾರ ನಡೆದ ಚುನಾವಣ ರ್ಯಾಲಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಬಾಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡು ಹುಟ್ಟಿದವರು. ಆದರೆ ಮೋದಿ ಹಾಗಲ್ಲ. ಅವರು ಕಷ್ಟುಪಟ್ಟು ಮೇಲೇರಿದ್ದಾರೆ. ಅವರು ಹಿಂದುಳಿದ ವರ್ಗದ ಕುಟುಂಬದಿಂದ ಬಂದಿದ್ದಾರೆ. ಆದರೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ರಜೆ ಸಿಕ್ಕ ಕೂಡಲೇ ವಿದೇಶಗಳಿಗೆ ಓಡಿ ಹೋಗುತ್ತಾರೆ ಎಂದು ಅವರು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಪಾಕಿಸ್ಥಾನದ ಬಳಿ ಇರುವ ಅಣ್ವಸ್ತ್ರಗಳಿಗೆ ಹೆದರಿಕೊಳ್ಳುತ್ತಿದೆ. ಆದರೆ ನಮ್ಮ ಸರಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಯಿದ್ದ 370ನೇ ವಿಧಿಯನ್ನು ರದ್ದು ಮಾಡಿದ್ದಲ್ಲದೇ, ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ದೇಶಕ್ಕೆ ಸೇರಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಇದೇ ವೇಳೆ ಅವರು ಹೇಳಿದರು.