Advertisement

ರಾಜ್ಯ ಸರ್ಕಾರ ವಜಾಕ್ಕೆ ಬಿಜೆಪಿ ಆಗ್ರಹ

12:36 PM Jan 06, 2018 | Team Udayavani |

ದಾವಣಗೆರೆ: ಮೂಡಬಿದರೆ ಸಮೀಪದ ಕಾಟಿಪಾಳ್ಳದ ಹಿಂದೂ ಕಾರ್ಯಕರ್ತ ದೀಪಕ್‌ ರಾವ್‌ ಒಳಗೊಂಡಂತೆ ಹಿಂದೂ ಸಂಘಟನೆಯ ಮುಖಂಡರ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯಪಾಲರು ರಾಜ್ಯ ಸರ್ಕಾರವನ್ನ ವಜಾ ಮಾಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.

Advertisement

ಉಪ ವಿಭಾಗಾಧಿಕಾರಿ ಕಚೇರಿ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾರೆಡ್ಡಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆಹಾರ ಸಚಿವ ಯು.ಟಿ. ಖಾದರ್‌ ಪ್ರತಿಕೃತಿ ದಹಿಸಿ, ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕಾಟಿಪಾಳ್ಳದ ಹಿಂದೂ ಕಾರ್ಯಕರ್ತ ದೀಪಕ್‌ ರಾವ್‌, ಇತರೆ ಹಿಂದೂ ಸಂಘಟನೆಯ ಮುಖಂಡರ ಹತ್ಯೆಗಳ ಗಮನಿಸಿದರೆ ಚಿಕನ್‌ ಕಟ್‌ ಮಾದರಿಯಲ್ಲಿ ಅತ್ಯಂತ ಬರ್ಬರವಾಗಿ ಕತ್ತು ಕತ್ತರಿಸಿ ಅಮಾನುಷವಾಗಿ ಕೊಲೆ ಮಾಡಲಾಗಿದೆ. ದೀಪಕ್‌ ರಾವ್‌ ಹತ್ಯಾ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ದೀಪಕ್‌ ರಾವ್‌ ಬರ್ಬರ ಹತ್ಯೆಯಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ, ಕೆಎಫ್‌ಡಿ ಸಂಘಟನೆಯವರ ಕೈವಾಡ ಇದೆ ಎಂಬುದು ಅತ್ಯಂತ ಪ್ರಬಲವಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್‌ನ ನಾಲ್ಕೂವರೆ ವರ್ಷದ ಆಡಳಿತದಲ್ಲಿ ರಾಜ್ಯದಲ್ಲಿ ಹಿಂದೂ ಸಂಘಟನೆಯ 20ಕ್ಕೂ ಹೆಚ್ಚು ಮುಖಂಡರ ಬರ್ಬರ ಹತ್ಯೆ ನಡೆದಿವೆ. ಎಲ್ಲ ಹತ್ಯೆಯನ್ನು ಸಾಮಾನ್ಯ ಪ್ರಕರಣ ಎಂದು ಸರ್ಕಾರ ತೀವ್ರ ಉದಾಸೀನತೆ ತೋರುತ್ತಿರುವುದರಿಂದಲೇ ಹಿಂದೂ ಸಂಘಟನೆಯ ಮುಖಂಡರ ಹತ್ಯೆ ನಿರಂತರವಾಗಿ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಸಂಘಟನೆಯ ಮುಖಂಡರು, ಕಾರ್ಯಕರ್ತರನ್ನು ಕೊಲೆ ಮಾಡುವ ಅತ್ಯಂತ ವ್ಯವಸ್ಥಿತ ಜಾಲ ರಾಜ್ಯದಲ್ಲಿದೆ. ಹಿಂದೂ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರ ಹತ್ಯೆಯನ್ನ ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸದೇ ಇರುವುದು ಇಂತಹ ದುಷ್ಕೃತ್ಯಗಳು ನಡೆಯುವುದಕ್ಕೆ ಕಾರಣವಾಗುತ್ತಿದೆ. ಹಿಂದೂ ಸಂಘಟನೆಯ ಮುಖಂಡರು, ಕಾರ್ಯಕರ್ತರ ಹತ್ಯೆ ನಿಲ್ಲಿಸುವಲ್ಲಿ, ರಕ್ಷಣೆ ಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಸರ್ಕಾರವನ್ನು ರಾಜ್ಯಪಾಲರು ಕೂಡಲೇ ವಜಾ ಮಾಡಬೇಕು. ಇಲ್ಲವೆ, ಹಿಂದೂ ಸಂಘಟನೆಯ ಮುಖಂಡರ ಅಮಾನುಷ ಹತ್ಯೆಗೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾರೆಡ್ಡಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆಹಾರ ಸಚಿವ ಯು.ಟಿ. ಖಾದರ್‌ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಎಚ್‌.ಎನ್‌. ಶಿವಕುಮಾರ್‌, ಪಿ.ಸಿ. ಶ್ರೀನಿವಾಸ್‌, ರಾಜನಹಳ್ಳಿ ಶಿವಕುಮಾರ್‌, ರಮೇಶ್‌ನಾಯ್ಕ, ಪಿ.ಎಸ್‌. ಜಯಣ್ಣ, ಎಚ್‌.ಎನ್‌. ಗುರುನಾಥ್‌, ಎನ್‌. ರಾಜಶೇಖರ್‌, ಪ್ರಭು ಕಲುºರ್ಗಿ, ಶಂಕರಗೌಡ ಬಿರಾದಾರ್‌, ಶಿವನಗೌಡ ಪಾಟೀಲ್‌, ನಾಗರತ್ನನಾಯ್ಕ, ಅಣಬೇರು ಶಿವಪ್ರಕಾಶ್‌, ಅಣಜಿ ಗುಡ್ಡೇಶ್‌, ಹನುಮಂತಪ್ಪ, ವೀರೇಶ್‌ ಪೈಲ್ವಾನ್‌,  ಟಿಂಕರ್‌ ಮಂಜಣ್ಣ, ಧನುಶ್‌ ರೆಡ್ಡಿ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next