Advertisement
ಹಣಕ್ಕೆ ಸಂಬಂಧಿಸಿ ಶನಿವಾರ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಸಚಿವರ ಕಚೇರಿಯಲ್ಲೂ ಪರಿಶೀಲನೆ ನಡೆಸಿದ್ದಾರೆ. ರಾಜ್ಯ ಬಿಜೆಪಿ ಸಚಿವ ಪುಟ್ಟರಂಗ ಶೆಟ್ಟಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದು, ರಾಜ್ಯಾಧ್ಯಂತ ಪ್ರತಿಭಟನೆ ನಡೆಸುವುದಾಗಿ ಹೇಳಿದೆ. ಜೀವಂತ ಸಾಕ್ಷಿ
ಸರ್ಕಾರ ನಡೆಸುತ್ತಿರುವ ವರ್ಗಾವಣೆ ,ಲೂಟಿ, ಹಗರಣ ಮತ್ತು ದರೋಡೆಗೆ ಇದು ಜೀವಂತ ಸಾಕ್ಷಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹೇಳಿಕೆ ನೀಡಿದ್ದಾರೆ.
Related Articles
Advertisement
ಸಚಿವ ಪುಟ್ಟರಂಗ ಶೆಟ್ಟಿ ತಕ್ಷಣ ರಾಜೀನಾಮೆ ನೀಡಬೇಕು. ಸರಿಯಾದ ತನಿಖೆ ಆಗಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದರು.
ತನಿಖೆ ನಡೆಯುತ್ತಿದೆಹುಬ್ಬಳ್ಳಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಬಗ್ಗೆ ಪಾರದರ್ಶಕವಾಗಿ ಪೊಲೀಸ್ ತನಿಖೆ ನಡೆಯುತ್ತಿದೆ. ಸಂಪೂರ್ಣ ವರದಿ ಬಂದ ಮೇಲೆ ಪ್ರತಿಕ್ರಿಯೆ ನೀಡುತ್ತೇನೆ. ಯಾರ ಮೇಲೂ ಅನುಕೂಲವಾಗಲಿ, ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಇದು ಯಾವ ಜುಜುಬಿ ಹಣ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಇದು ಯಾವ ಜುಜುಬಿ ಹಣ, 33,000 ಕೋಟಿ ರೂಪಾಯಿ ರಫೇಲ್ ಹಗರಣಕ್ಕೆ ಸಂಬಂಧಿಸಿ ಜೆಪಿಸಿ ತನಿಖೆಗೆ ಬಿಜೆಪಿಯವರು ಒಪ್ಪುತ್ತಿಲ್ಲ. ಇನ್ನು 25 ಲಕ್ಷ ಯಾವ ಲೆಕ್ಕ ಎಂದರು. ಈ ಬಗ್ಗೆ ಉನ್ನತ ತನಿಖೆ ಆಗಬೇಕು. ಪಕ್ಷದವರು ಭಾಗಿಯಾದರೆ ತೀಕ್‌ಷ್ಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸಿಕ್ಕಿ ಬಿದ್ದದ್ದು ಹೇಗೆ? ಹಿಂದುಳಿದ ವರ್ಗಗಳ ಇಲಾಖೆ ಕಚೇರಿಯಲ್ಲಿ ಖಾಸಗಿ ಟೈಪಿಸ್ಟ್ ಆಗಿರುವ ಮೋಹನ್ ವಿಧಾನಸೌಧ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಹಣದ ಬ್ಯಾಗ್ ಕೊಂಡೊಯ್ಯುತ್ತಿದ್ದ. ಈತನ ವರ್ತನೆಯಿಂದ ಅನುಮಾನಗೊಂಡ ಭದ್ರತಾ ಸಿಬ್ಬಂದಿ ಆರೋಪಿಗೆ ಬ್ಯಾಗ್ ತೋರಿಸುವಂತೆ ಸೂಚಿಸಿದ್ದಾರೆ. ಆತಂಕಗೊಂಡ ಆರೋಪಿ ಬ್ಯಾಗ್ ಸಮೇತ ಪರಾರಿಯಾಗಲು ಯತ್ನಿಸಿದ್ದು, ಕೂಡಲೇ ಬೆನ್ನತ್ತಿದ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು ಬ್ಯಾಗ್ ಪರಿಶೀಲಿಸಿದಾಗ ಲಕ್ಷಾಂತರ ರೂ. ಹಣ
ಪತ್ತೆಯಾಗಿತ್ತು.