Advertisement

ಬಿಜೆಪಿ ಹಿಮ್ಮೆಟ್ಟಿಸುವುದೇ ಕಾಂಗ್ರೆಸ್‌ ಗುರಿ: ಕಿಮ್ಮನೆ

12:30 AM Mar 16, 2019 | Team Udayavani |

ತೀರ್ಥಹಳ್ಳಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ನರೇಂದ್ರ ಮೋದಿ ಅವರನ್ನು ವಾಪಸ್‌ ಕಳುಹಿಸುವುದೇ ಕಾಂಗ್ರೆಸ್‌ ಮುಖ್ಯ ಗುರಿ. ನರೇಂದ್ರ ಮೋದಿ ಮತ್ತು ಬಿಜೆಪಿಯ ಗೋಡ್ಸೆ ಸಿದ್ಧಾಂತವನ್ನು ಸೋಲಿಸುವುದಕ್ಕೋಸ್ಕರ ಈ ಕ್ಷೇತ್ರದಲ್ಲಿ ಎರಡು ಪಕ್ಷಗಳು ಒಂದಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದರು.

Advertisement

ಪಟ್ಟಣದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ವತಿಯಿಂದ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದೇ ಕಾಂಗ್ರೆಸ್‌ ಗುರಿ. ನಮಗೆ ವ್ಯಕ್ತಿ ಗೌಣವಾಗಿದ್ದು ಬಿಜೆಪಿಯವರ ಕೋಮು ಸಂಘರ್ಷ ನೀತಿಯನ್ನು ಖಂಡಿಸಿ ಅಹಿಂಸಾ ಮಾರ್ಗದಲ್ಲಿ ಮನಪರಿವರ್ತನೆ ಮಾಡಲೆತ್ನಿಸುತ್ತೇವೆ. ಕಾಂಗ್ರೆಸ್‌ ಸಿದಾಟಛಿಂತದ ಬಗ್ಗೆ ಮತದಾರರಿಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ. ಈ ಬಾರಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ವ್ಯಕ್ತಿಗತ ವಿಚಾರವನ್ನು ಕೈಬಿಟ್ಟು ಸಮ್ಮಿಶ್ರ ಸರ್ಕಾರದ ಕ್ಷೇತ್ರದ ಅಭ್ಯರ್ಥಿ ಮಧು ಬಂಗಾರಪ್ಪನವರನ್ನು ಗೆಲ್ಲಿಸುವ ಪಣ ತೊಡಬೇಕು ಎಂದರು

Advertisement

Udayavani is now on Telegram. Click here to join our channel and stay updated with the latest news.

Next