Advertisement
– ಇಂತಹದೊಂದು ಪ್ರಶ್ನೆ ಈಗ ಎದುರಾಗಿದೆ. ರಾಜ್ಯದ ಒಟ್ಟು ಜನಸ್ಯಂಖ್ಯೆಯಲ್ಲಿ ಲಿಂಗಾಯತರು ಶೇ.18ರಷ್ಟು ಇದ್ದು, ವಿಶೇಷವಾಗಿ ಉತ್ತರ ಕರ್ನಾಟಕದಾದ್ಯಂತ ಪ್ರಬಲರಾಗಿದ್ದಾರೆ. ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿಯೂ ಲಿಂಗಾಯತರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. 90ರ ದಶಕದಲ್ಲಿ ಕಾಂಗ್ರೆಸ್‌ನಿಂದ ಮುನಿಸಿಕೊಂಡ ಲಿಂಗಾಯತರು ಜನತಾ ಪರಿವಾರ ನಂತರದಲ್ಲಿ ಬಿಜೆಪಿ ಕಡೆ ವಾಲಿದ್ದು, ಇದೀಗ ಬಿಜೆಪಿ ಬಗ್ಗೆಯೂ ಮುನಿಸಿಕೊಂಡ ಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಪಕ್ಷದಲ್ಲಿರುವ ಹಿರಿಯ ನಾಯಕರೆಲ್ಲರೂ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ.
Related Articles
Advertisement
ಜ್ವಾಲೆ ರೂಪ: ರಾಜ್ಯದಲ್ಲಿ ಕಾಂಗ್ರೆಸ್‌ಗೆ 178 ದಾಖಲೆ ರೂಪದ ಸ್ಥಾನಗಳ ಗೆಲುವು ತಂದುಕೊಟ್ಟು ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಅನಾರೋಗ್ಯ ಕಾರಣದಿಂದ ಅಂದಿನ ಕಾಂಗ್ರೆಸ್ ವರಿಷ್ಠರಾಗಿದ್ದ ರಾಜೀವ ಗಾಂಧಿ ಅವಮಾನಕರ ರೀತಿಯಲ್ಲಿ ಸಿಎಂ ಪಟ್ಟದಿಂದ ಕೆಳಗಿಳಿಸಿದ್ದರು. ನಂತರ ರಾಜ್ಯದಲ್ಲಿ ಅಲ್ಪಾವಧಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತಾದರೂ ಆ ಬಳಿಕ ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.
ಅಲ್ಲಿಗೆ ಕಾಂಗ್ರೆಸ್ ಬೆಂಬಲಿಸಿದ್ದ ಲಿಂಗಾಯತ ಸಮುದಾಯ ತಮ್ಮ ನಾಯಕನನ್ನು ಅವಮಾನಕರ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ ಎಂಬ ಆಕ್ರೋಶದೊಂದಿಗೆ ಕಾಂಗ್ರೆಸ್‌ಗೆ ಪಾಠ ಕಲಿಸಬೇಕೆಂಬ ನಿರ್ಣಯಕ್ಕೆ ಬಂದಿತ್ತು. ಪರ್ಯಾಯ ಇಲ್ಲದೆ ಮತ್ತೆ ಜನತಾ ಪರಿವಾರ ಕಡೆ ವಾಲಿತ್ತು. ವೀರೇಂದ್ರ ಪಾಟೀಲ ನಂತರದಲ್ಲಿ ಸಮಾಜಕ್ಕೆ ಒಬ್ಬ ಗಟ್ಟಿ ನಾಯಕ ಇಲ್ಲ ಎಂಬ ಕೊರಗು ಲಿಂಗಾಯತ ಸಮಾಜದಲ್ಲಿತ್ತು. ಹೋರಾಟ ಮೂಲಕವೇ ರಾಜಕೀಯ ನಡೆ ಕಂಡುಕೊಂಡ ಬಿ.ಎಸ್.ಯಡಿಯೂರಪ್ಪ ನಿಧಾನವಾಗಿ ಲಿಂಗಾಯತ ಸಮಾಜಕ್ಕೆ ನಾಯಕನ ಪಟ್ಟ ತುಂಬ ತೊಡಗಿದ್ದರು. 2008ರ ನಂತರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಹೊರಹೊಮ್ಮಿದ್ದರು. ಇಂದಿಗೂ ಲಿಂಗಾಯತರ ಮೇಲೆ ತಮ್ಮದೇ ಪ್ರಭಾವ ಹೊಂದಿದ್ದಾರೆ.
ಇಲ್ಲಿವರೆಗೆ ಲಿಂಗಾಯತ ಸಮಾಜದ ಒಟ್ಟು 9 ಜನರು ಮುಖ್ಯಮಂತ್ರಿಯಾಗಿದ್ದು, ಎಸ್.ನಿಜಲಿಂಗಪ್ಪ 1962-1968ವರೆಗೆ ಪೂರ್ಣಾವಧಿ ಸಿಎಂ ಆಗಿದ್ದು ಬಿಟ್ಟರೆ ಉಳಿದವರಾರು ಅವಧಿ ಪೂರ್ಣಗೊಳಿಸಿಲ್ಲ. ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ವೀರೇಂದ್ರ ಪಾಟೀಲ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್, ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾರೊಬ್ಬರಿಗೂ ಪೂರ್ಣಾವಧಿ ಅಧಿಕಾರ ಸಿಕ್ಕಿಲ್ಲ ಎಂಬ ನೋವು ಲಿಂಗಾಯತರದ್ದಾಗಿದೆ.
ಕಾಂಗ್ರೆಸ್ “ಅಸ್ತ್ರ”-ಬಿಜೆಪಿ ಪ್ರತ್ಯಾಸ್ತ್ರಯಡಿಯೂರಪ್ಪ ಅವರನ್ನು 2021ರ ಜುಲೈನಲ್ಲಿ ಸಿಎಂ ಪಟ್ಟದಿಂದ ಕೆಳಗಿಳಿಸಿದ ರೀತಿ ಹಾಗೂ 2023ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಅವರ ಘೋಷಣೆ ಲಿಂಗಾಯತರಲ್ಲಿ ನೋವು ಮೂಡಿಸಿತ್ತು. ಇದರ ಬೆನ್ನ ಹಿಂದೆಯೇ ಲಿಂಗಾಯತ ನಾಯಕರಾದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ಟಿಕೆಟ್ ಸಿಗದೆ ಪಕ್ಷದಿಂದ ನಿರ್ಗಮಿಸಿದ್ದು ಆಕ್ರೋಶ ಹೆಚ್ಚುವಂತೆ ಮಾಡಿದೆ. ಪಕ್ಷದಲ್ಲಿ ಕಡೆಗಣನೆ, ಟಿಕೆಟ್ ತಪ್ಪಲು ಪ್ರಬಲ ಕಾರಣಗಳನ್ನು ಶೆಟ್ಟರ ಬಹಿರಂಗಪಡಿಸಿದ್ದು ಕಿಡಿಗೆ ತುಪ್ಪ ಸುರಿದಂತಾಗಿದೆ. ಈ ಹಿನ್ನೆಲೆಯಲ್ಲಿ “ಲಿಂಗಾಯಿತ ವಿರೋಧಿ” ಎಂಬ ಹಣೆಪಟ್ಟಿ ಹಚ್ಚುವ ಕಾಂಗ್ರೆಸ್ “ಅಸ್ತ್ರ’ವನ್ನು ಹಿಮ್ಮೆಟ್ಟಿಸಲು ಬಿಜೆಪಿ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲೇ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ. ~ ಅಮರೇಗೌಡ ಗೋನವಾರ