ನವದೆಹಲಿ: ಬಿಜೆಪಿ ಹಾಗೂ ಆರೆಸ್ಸೆಸ್ ದಲಿತ ವಿರೋಧಿ ಮನಸ್ಥಿತಿ ಹೊಂದಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ನೀಡಿರುವ ದಲಿತ ವಿರೋಧಿ ಹೇಳಿಕೆಗಳುಳ್ಳ ವಿಡಿ ಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿರುವ ರಾಹುಲ್, ಈ ಪಕ್ಷಗಳ ದಬ್ಟಾಳಿಕೆ ಮನಸ್ಥಿತಿಯಿಂದಾಗಿಯೇ ಇನ್ನೂ ದಲಿತರು ಸಮಾಜದ ಕೆಳಸ್ತರದಲ್ಲೇ ಇದ್ದಾರೆ ಎಂದು ಕಿಡಿಕಾರಿದ್ದಾರೆ.
ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಘಟನೆಗಳ ಸಂಖ್ಯೆ ಹೆಚ್ಚುತ್ತಿ ದ್ದರೂ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮೌನ ವಹಿಸಿರುವುದು ಏಕೆ ಎಂದೂ ಅವರು ಪ್ರಶ್ನಿಸಿದ್ದಾರೆ. ವಿಡಿಯೋದಲ್ಲಿ 2016ರಲ್ಲಿನ ಉನಾದಲ್ಲಿ ದಲಿತರ ಮೇಲೆ ನಡೆದ ಹಲ್ಲೆ, ಮಧ್ಯಪ್ರದೇಶದಲ್ಲಿ ನೇಮಕಾತಿ ಪರೀಕ್ಷೆ ವೇಳೆ ಎಸ್‌ಸಿ ಎಸ್‌ಟಿ ಎಂಬುದಾಗಿ ಅಭ್ಯರ್ಥಿ ಎದೆ ಮೇಲೆ ಬರೆದಿರುವುದು ಸೇರಿದಂತೆ ಇತರ ಘಟನೆಗಳ ವಿಡಿಯೋ ತುಣುಕುಗಳಿವೆ. ಪ್ರಧಾನಿ ಮೋದಿ ಸಬ್‌ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳು ತ್ತಾರೆ. ಆದರೆ ಪ್ರತಿ ದಿನ ಹಾಗೂ ಪ್ರತಿ 12 ನಿಮಿಷ ಕ್ಕೊಮ್ಮೆ ಒಬ್ಬ ದಲಿತರ ಮೇಲೆ ದೌರ್ಜನ್ಯ ನಡೆಯುತ್ತದೆ. ಆರು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತದೆ. ದಲಿ ತರ ಮೇಲೆ ವ್ಯಾಪಕ ಹಿಂಸಾಚಾರ ನಡೆ ಯುತ್ತಿದ್ದರೂ ಮೋದಿ ಮಾತನಾಡುವು ದಿಲ್ಲ ಎಂದು ರಾಹುಲ್ ಟೀಕಿಸಿದ್ದಾರೆ.