Advertisement

ರಮ್ಯಾ ಟ್ವೀಟ್‌ಗೆ ಬಿಜೆಪಿ ಟೀಕಾಸ್ತ್ರ

11:37 PM Apr 29, 2019 | Team Udayavani |

ಬೆಂಗಳೂರು: ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರು ಪ್ರಧಾನಿ ಮೋದಿಯವರು ಮಕ್ಕಳ ಕಿವಿ ಹಿಂಡುತ್ತಿರುವ ಫೋಟೋವನ್ನು ಟ್ವೀಟ್‌ ಮಾಡಿರುವ ಬಗ್ಗೆ ಬಿಜೆಪಿ ಕರ್ನಾಟಕ ಸಹಿತವಾಗಿ ಬಿಜೆಪಿ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಸಹಿತವಾಗಿ ಅನೇಕರು ಟ್ವೀಟ್‌ ಮಾಡಿ ರಮ್ಯಾ ಅವರ ಕಾಲೆಳೆದಿದ್ದಾರೆ. ಮಂಡ್ಯದಲ್ಲಿ ಮಾನ್ಯತೆ ಕಳೆದುಕೊಂಡ ನಂತರ ಜನಪ್ರಿಯತೆ ಗಳಿಸಿಕೊಳ್ಳಲು ಹೀಗೆಲ್ಲ ಮಾಡಬೇಕಾದ ಸ್ಥಿತಿ ಬಂದಿದೆ. ಫೋಟೋಶಾಫ್ ಮೂಲಕ ಚಿತ್ರವನ್ನು ತಿರುಚಿ, ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು ಎಂದು ಶೋಭಾ ಕರಂದ್ಲಾಜೆ ಟ್ವೀಟ್‌ ಮಾಡಿದ್ದಾರೆ.

ಫೋಟೋಶಾಫ್ನಲ್ಲಿ ಎಡಿಟ್‌ ಮಾಡಿದ ಚಿತ್ರವನ್ನು ಅಪ್‌ಲೋಡ್‌ ಮಾಡಿ, ನಕಲಿ ಐಟಿ ಮೂಲಕ ಫಾಲೋ ಮಾಡಿ, ಮತದಾನದಿಂದ ದೂರ ಉಳಿದಿರುವ ದಿವ್ಯಸ್ಪಂದನ ಅವರ ಬೌದ್ಧಿಕ ದಿವಾಳಿತನ ಹೇಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಅರವಿಂದ ಲಿಂಬಾವಳಿ ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ಮುಖಂಡ ಹಾಗೂ ನಟ ಬುಲೆಟ್‌ ಪ್ರಕಾಶ್‌, ರಮ್ಯ ಮೇಡಂ (ಪದ್ಮಾವತಿ), ಮಗುವಿನ ವಯಸ್ಸಿನಲ್ಲಿ ನಿಮ್ಮ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗುತ್ತಿರಲಿಲ್ಲ. ನೀವು ಎರಡು ಚುನಾವಣೆಗಳಲ್ಲಿ ನಿಮ್ಮ ಹಕ್ಕು ಅಂದರೆ, ಮತ ಚಲಾಯಿಸದವರು. ನಿಮಗೆ ವಿಶ್ವನಾಯಕ ನರೇಂದ್ರ ಮೋದಿಯವರ ಬಗ್ಗೆ ಮಾತನಾಡೋಕೆ ಯಾವುದೇ ನೈತಿಕತೆ ಇಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next