Advertisement

ಮಹಾಚುನಾವಣೆ: ಬಿಜೆಪಿಗೆ 300+ ಸ್ಥಾನ ಖಚಿತ: ಸಚಿವ ಗೋಯಲ್‌

03:23 PM Jun 22, 2018 | Team Udayavani |

ಲಂಡನ್‌ : 2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 300ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಮತ್ತು ತನ್ನ ಮೈತ್ರಿ ಪಾಲುದಾರರೊಂದಿಗೆ ಬಹುಮತವನ್ನು ಸಾಧಿಸಲಿದೆ ಎಂದು ಕೇಂದ್ರ  ಹಣಕಾಸು ಸಚಿವರಾಗಿರುತ್ತಾ ರೈಲ್ವೆ ಮತ್ತು ಕಲ್ಲಿದ್ದಲು ಸಚಿವರೂ ಆಗಿರುವ ಪಿಯೂಷ್‌ ಗೋಯಲ್‌ ಹೇಳಿದ್ದಾರೆ. 

Advertisement

ಲಂಡನ್‌ನ ಬಕಿಂಗಂಶಯರ್‌ನ ಲ್ಯಾಟಿಮರ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಇಂಡಿಯಾ ಲೀಡರ್‌ಶಿಪ್‌ ಕಾನ್‌ ಕ್ಲೇವ್‌ನ ಸಮಾರೋಪದಲ್ಲಿ ದಿಲ್ಲಿಯಿಂದ ವಿಡಿಯೋ ಲಿಂಕ್‌ ಮೂಲಕ ಮಾತನಾಡಿದ ಸಚಿವ  ಗೋಯಲ್‌ ಅವರು “ಭಾರತಕ್ಕೆ ಎರಡಂಕಿಯ ಆರ್ಥಿಕಾಭಿವೃದ್ಧಿಯನ್ನು ಸಾಧಿಸಲು ಕಷ್ಟವಾಗದು; ಏಕೆಂದರೆ ಭಾರತಕ್ಕೆ ಜನಸಂಖ್ಯಾ ಮಾನವಶಕ್ತಿಯ ಲಾಭವಿದೆ ಮತ್ತು ಘನ ಆಶೋತ್ತರಗಳನ್ನು ಹೊಂದಿದ ಭಾರೀ ದೊಡ್ಡ ಪ್ರಮಾಣದ ಮಧ್ಯಮ ವರ್ಗವಿದೆ ಎಂದು ಹೇಳಿದರು. 

ಅಧಿಕಾರರೂಢ ಬಿಜೆಪಿ ಸರಕಾರ ಪ್ರಾಮಾಣಿಕ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಿದ್ದು ಭಾರತವನ್ನು ಉಜ್ವಲ ಭವಿಷ್ಯಕ್ಕೆ ಸಜ್ಜುಗೊಳಿಸಿದೆ ಎಂದು ಗೋಯಲ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next