Advertisement

ಕರ್ನಾಟಕಕ್ಕೆ ಬಂದಿದೆ ಬಿಜೆಪಿ ಹುಚ್ಚು ಆನೆ

03:24 PM Jan 11, 2018 | |

ಚಿತ್ರದುರ್ಗ: ಬಿಜೆಪಿಯ ಹುಚ್ಚು ಆನೆ ಕರ್ನಾಟಕಕ್ಕೆ ಬಂದು ಇಳಿದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಪ್ರಣಾಳಿಕೆ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ ಹೇಳಿದರು. ನಗರದ ಪಂಚಚಾರ್ಯ ಕಲ್ಯಾಣ ಮಂಟಪದಲ್ಲಿ ಕರೆದಿದ್ದ ಐದು ಜಿಲ್ಲೆಗಳ 2018ರ ಚುನಾವಣಾ ಪ್ರಣಾಳಿಕೆ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿಯ ಅಮಿತ್‌ ಶಾ ಅವರಂತಹ ನೂರು ನಾಯಕರು ಬಂದು ಚುನಾವಣೆ ಪ್ರಚಾರ ಮಾಡಿದರು ಸಹ ಕಾಂಗ್ರೆಸ್‌ ಪಕ್ಷ ಅ ಧಿಕಾರ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಅವರ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ ಹೊರತುಯಾವಬ್ಬ ಕಾಂಗ್ರೆಸ್‌ ನಾಯಕರು ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿಲ್ಲ. ಜೈಲಿಗೆ ಹೋಗಿ ಬೇಲಿನ ಮೇಲೆ ಹೊರಗಡೆ ಬಂದು ಪರಿವರ್ತನೆ ಯಾತ್ರೆ ಮಾಡುತ್ತಿದ್ದಾರೆ ಎಂದರು. ಬಿಜೆಪಿಯ ಅಮಿತ್‌ಷಾ ಅವರ ಮೇಲೆ ಸಹ ಗುಜರಾತಲ್ಲಿ ಕೇಸ್‌ ಎದುರಿಸುತ್ತಿದ್ದಾರೆ. ಅವರು ಸಹ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಇವರಿಬ್ಬರು ಸಹ ಮತ್ತೆ ಯಾವಾಗ ಜೈಲಿಗೆ ಹೋಗುತ್ತಾರೆ ಎಂಬುಂದು ಗೊತ್ತಿಲ್ಲ. ಇಂತವರು ಕರ್ನಾಟಕ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. 

Advertisement

ಮೋದಿ ಅಧಿಕಾರ ಬಂದು 100 ದಿನದಲ್ಲಿ ಎಲ್ಲಾ ಜನರ ಖಾತೆಗೆ 15 ಲಕ್ಷ ರೂ. ಹಾಕುತಿವಿ ಎಂದು ಚುನಾವಣೆ ಸಂದರ್ಭದಲ್ಲಿ ಹೇಳಿದ್ದರು. ಆದರೆ,
ಅಧಿಕಾರಕ್ಕೆ ಬಂದು 4 ವರ್ಷಗಳು ತುಂಬುವ ಹಂತದಲ್ಲಿ ಇದ್ದರು ಇನ್ನು ಏಕೆ ಹಾಕಿಲ್ಲ ಎಂದು ಪ್ರಶ್ನಿಸಿದರು. ಮೋದಿ ಸುಳ್ಳು ಹೇಳಿ ಅಧಿ ಕಾರಕ್ಕೆ
ಬಂದು ನೋಟ್‌ಬ್ಯಾನ್‌ ಮಾಡಿ ಅನೇಕ ಜರ ಉದ್ಯೋಗ ಕಳೆದಿರುವುದು ಬಿಜೆಪಿ ಸಾಧನೆ. ಜಿಎಸ್‌ಟಿ ಜಾರಿಗೆ ತಂದು ಒಂದು ಮಸೂದೆಯನ್ನು 20 ಬಾರಿ ಬದಲಾವಣೆ ಮಾಡಿರುವುದು ಬಿಜೆಪಿಯ ಬೇಜಬ್ದಾರಿತನ ತೋರಿಸುತ್ತದೆ. ಅಮಿತ ಶಾ, ಮೋದಿ, ಯಡಿಯೂರಪ್ಪ, ಸುಳ್ಳಿನ
ಮಾಲೆ ಎಣೆಯುವ ತರಬೇತಿ ಪಡೆದಿದ್ದಾರೆ. ಕರ್ನಾಟಕ ಜನರು ಕಣ್ಮುಚ್ಚಿ ಮತ ನೀಡುವ ದಡ್ಡರಲ್ಲ. ಕೇನಿಂದ ಬಿಡುಗಡೆಯಾದರೆ ಮಾತ್ರ ಇವರಿಗೆ ಪರಿವರ್ತನೆಯಾಗುತ್ತದೆ ಎಂದು ಕುಟುಕಿದರು.

ಕಾಂಗ್ರೆಸ್‌ ಸರ್ಕಾರ ಬಡವರ, ದೀನದಲಿತರ, ಹಿಂದುಳಿದವರ ಪರವಿದೆ. ಪಕ್ಷದ ಮುಂದಿನ ಪ್ರಣಾಳಿಕೆಯಲ್ಲಿ ಪ್ರತಿ ಜಿಲ್ಲೆಯ ಅಭಿವೃದ್ಧಿಗೋಸ್ಕರ ಜನರಿಂದ ಮಾಹಿತಿ ನ ಪಡೆದು ಪ್ರಣಾಳಿಕೆ ಮಾಡುತ್ತೇವೆ. ಸರ್ಕಾರದ ಹಿಂದಿನ ಪ್ರಣಾಳಿಕೆಯಲ್ಲಿ ನೀಡಿದ 160 ಭರವಸೆಯಲ್ಲಿ 155 ಭರವಸೆ
ಈಡೇರಿಸಿದ್ದೇವೆ. ಮುಂದಿನ 5 ವರ್ಷದಲ್ಲಿ ಜನರ ಬದುಕು ಮತ್ತು ಭವಿಷ್ಯಕ್ಕೆ ಯೋಗ್ಯವಾದ ಪ್ರಣಾಳಿಕೆ ರಚಿಸುವ ಉದ್ದೇಶದಿಂದ ರಾಜ್ಯ ಪ್ರವಾಸ ಮಾಡಿ ಸಮಸ್ಯೆ ಅರಿತು ಜಿಲ್ಲೆಗಳ ಸಮಸ್ಯೆಗಳು ಪ್ರಣಾಳಿಕೆಯಲ್ಲಿ ಕಾಣಿಸುವಂತೆ ಮಾಡಿತ್ತೇವೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಆಂಜನೇಯ ಮಾತನಾಡಿ, ಚಿತ್ರದುರ್ಗಕ್ಕೆ ಬೇಡಿಕೆಗಳಾದ ಭದ್ರ ಮೇಲ್ದಂಡೆ ಯೋಜನೆಯ ಕಾಮಗಾರಿ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ ಬರದನಾಡು ಎಂಬ ಅಣೆ ಪಟ್ಟಿ ಕಳಚಬೇಕು. ತುಂಗಭದ್ರಾ ಹಿನ್ನೀರಿನ ಕುಡಿಯುವ ನೀರು ಯೋಜನೆ ಶೀಘ್ರ ಅನುಷ್ಠಾನಕ್ಕೆ ತಂದರೆ ಚಳ್ಳಕೆರೆ, ಮೊಳಕಾಲ್ಮೂರು, ಪಾವಗಡಕ್ಕೆ ಶಾಶ್ವತ ಕುಡಿಯುವ ನೀರು ವ್ಯವಸ್ಥೆಯಾಗುತ್ತದೆ ಎಂದರು.

ವೈದ್ಯಕೀಯ ಕಾಲೇಜಿಗೆ ಹಣ ನೀಡಬೇಕು. ಚಿತ್ರದುರ್ಗ ವಿ.ವಿ.ಸ್ಥಾಪನೆ. ಜಿಲ್ಲೆ ತೋಟಗಾರಿಕೆ ಬೆಳೆಗಳಿಗೆ ಪ್ರಸಿದ್ಧಿಯಾಗಿರುವುದರಿಂದ ತೋಟಗಾರಿಕೆ
ವಲಯ ಎಂದು ಘೋಷಿಸಬೇಕು ಮತ್ತು ವಿಶೇಷ ಪ್ಯಾಕೇಜ್‌ ನೀಡಬೇಕು. ಶೇಂಗಾ, ಅಡಿಕೆ, ಈರುಳ್ಳಿ, ದಾಳಿಂಬೆ ಹೆಚ್ಚಾಗಿ ಬೆಳೆಯುತ್ತಿದ್ದು, ಉತ್ಪನ್ನಗಳ
ಆಧಾರಿತವಾದ ಕೈಗಾರಿಕ ವಲಯ ಸ್ಥಾಪನೆ, ಪ್ರವಸೋದ್ಯಮಕ್ಕೆ ಅಭಿವೃದ್ಧಿಗೊಳಿಸಬೇಕು, ಶೇಂಗ ಹೆಚ್ಚಾಗಿ ಬೆಳೆಯುವುದರಿಂದ ಸರ್ಕಾರದಿಂದ ಆಯಿಲ್‌ ಮಿಲ್‌ ಮಾಡಬೇಕು, ಜಾನುವಾರು ಸಂರಕ್ಷಣೆ ಮತ್ತು ಉತ್ಪನ್ನಗಳ ಅಭಿವೃದ್ಧಿಗಾಗಿ ಪಶು ವೈದ್ಯಕೀಯ ಡಿಪ್ಲೋಮಾ ಮತ್ತು ಸಂಶೋಧನಾ ಕೇಂದ್ರ, ಈರುಳ್ಳಿ ಬೆಳೆ ದರದಲ್ಲಿ ವ್ಯತ್ಯಾಸವಾದಗ ದಸ್ತಾನು ಮಾಡಲು ಶೀಥಲ ಗೃಹ ನಿರ್ಮಿಸಬೇಕು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಬೇಕು
ಎಂದರು. 

Advertisement

ಕೈಗಾರಿಕ ಅಭಿವೃದ್ಧಿಗೋಸ್ಕರ ಕೈಗಾರಿಕ ಪಾರ್ಕ್‌ ನಿರ್ಮಾಣ ಮಾಡಿ ಉದ್ಯೋಗ ಸೃಷ್ಟಿಸಿ ನಿರಿದ್ಯೋಗಿಗಳಿಗೆ ಉದ್ಯೋಗ ಸಮಸ್ಯೆ ನಿಗಿಸಬೇಕು. ಐತಿಹಾಸಿಕ ಕೋಟೆಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿ ಅಭಿವೃದ್ಧಿಗೆ ಹೆಚು ಒತ್ತು ನೀಡಬೇಕು, ಅನೇಕ ಮಠಗಳು ಇರುವುದರಿಂದ ಆಧ್ಯಾತ್ಮಿಕ
ಪ್ರವಾಸೋದ್ಯಮಕ್ಕೆ ವಿಶೇಷ ಪ್ಯಾಕೇಜು ಮಾಡಬೇಕು ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ದಾಖಲಿಸಬೇಕು ಎಂದರು.

ಚಿತ್ರದುರ್ಗ ಮತ್ತು ತುಮಕೂರು ನೇರ ರೈಲು ಮಾರ್ಗ ಶೀಘ್ರಗತಿಯಲ್ಲಿ ಪೂರ್ಣವಾಗಬೇಕು, ಕೌಶಲ್ಯಭಿವೃದ್ಧಿ ಕೇಂದ್ರ ಹಾಗೂ ಭಾರಿ ವಾಹನ ಚಾಲನ ತರಬೇತಿ ಕೇಂದ್ರ ಆಗಬೇಕು ಎಂದು ಚುನಾವಣೆ ಪ್ರಣಾಳಿಕೆ ಅಧ್ಯಕ್ಷರ ಎದುರು ಚಿತ್ರದುರ್ಗ ಪರವಾಗಿ ಮಂಡಿಸಿದರು. ಕಾನೂನು ಸಚಿವ ಟಿ.ಬಿ. ಜಯಚಂದ್ರ, ಮಾಜಿ ಸಂಸದ ಎಚ್‌. ಹನುಮಂತಪ್ಪ, ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಆರ್‌. ಸುದರ್ಶನ್‌, ಆರ್‌.ವಿ. ವೆಂಕಟೇಶ್‌, ಸಂಸದ ಬಿ.ಎನ್‌. ಚಂದ್ರಪ್ಪ, ಮಾಜಿ ಶಾಸಕ ನಂಜಯ್ಯನಮಟ್‌, ಶಾಸಕರಾದ ಟಿ. ರಘುಮೂರ್ತಿ, ಎನ್‌.ವೈ. ಗೋಪಲಕೃಷ್ಣ, ಚಿತ್ರದುರ್ಗ ದಾವಣಗೆರೆ ಚುನಾವಣೆ ಉಸ್ತುವಾರಿ ಕೃಷ್ಣಪ್ಪ, ಮಹಿಳಾ ಕೆಪಿಸಿಸಿ ಕಾರ್ಯದರ್ಶಿ ಪುಷ್ಪ ಅಮರ ನಾಥ,
ಜಿಲ್ಲಾ ಕಾಂಗ್ರೆಸ ಅಧ್ಯಕ್ಷ ಫ್ಯಾತರಾಜನ್‌, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್‌. ಮಂಜುನಾಥ ಮತ್ತು ದಾವಣಗೆರೆ, ತುಮಕೂರು,ಶಿವಮೊಗ್ಗ, ಚಿತ್ರದುರ್ಗ ಸೇರಿ ಐದು ಜಿಲ್ಲೆಯ ಮಾಜಿ ಶಾಸಕರು, ಜಿಪಂ ಸದಸ್ಯರು, ತಾಪಂ ಸದಸ್ಯರು, ಗ್ರಾಪಂ ಸದಸ್ಯರು, ಪದಾಧಿ ಕಾರಿಗಳು,
ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next