Advertisement

BJP; 3 ರಾಜ್ಯಗಳ ಸಿಎಂ ಆಯ್ಕೆ ಕಗ್ಗಂಟು; ಇಂದು ವೀಕ್ಷಕರ ನೇಮಕ

12:17 AM Dec 08, 2023 | Team Udayavani |

ಹೊಸದಿಲ್ಲಿ: ಅತ್ತ ತೆಲಂಗಾಣದಲ್ಲಿ ನೂತನ ಸಿಎಂ ಆಗಿ ಕಾಂಗ್ರೆಸ್‌ನ ಎ. ರೇವಂತ ರೆಡ್ಡಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದರೆ, ಮಿಜೋರಾಂನಲ್ಲಿ ಝಡ್‌ಪಿಎಂ ನಾಯಕ ಲಾಲ್ದು ಹೋಮಾ ಶುಕ್ರವಾರ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ. ಆದರೆ ಬಿಜೆಪಿ ಗೆಲುವು ಸಾಧಿಸಿರುವ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ದಲ್ಲಿ ಇನ್ನೂ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಒಮ್ಮತ ಮೂಡಿಲ್ಲ.

Advertisement

ಮೂರೂ ರಾಜ್ಯಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವ ಕಾರಣ ಸಿಎಂ ಆಯ್ಕೆ ಕಗ್ಗಂಟಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ನಾಯಕತ್ವವು ಶುಕ್ರವಾರ ಈ ರಾಜ್ಯಗಳಿಗೆ ವೀಕ್ಷಕರನ್ನು ಆಯ್ಕೆ ಮಾಡಲಿದ್ದು, ಅವರು ನೀಡಿದ ವರದಿಯ ಆಧಾರದಲ್ಲಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲು ನಿರ್ಧರಿಸಿದೆ.

ಮಧ್ಯಪ್ರದೇಶದಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌, ಕೇಂದ್ರ ಸಚಿವರಾದ ಪ್ರಹ್ಲಾದ್‌ ಪಟೇಲ್‌, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ನರೇಂದ್ರ ಸಿಂಗ್‌ ತೋಮರ್‌ ಸಿಎಂ ರೇಸ್‌ನಲ್ಲಿದ್ದಾರೆ. ಛತ್ತೀಸ್‌ಗಢದಲ್ಲಿ ಮಾಜಿ ಸಿಎಂ ರಮಣ್‌ ಸಿಂಗ್‌, ಬಿಜೆಪಿ ರಾಜ್ಯಾಧ್ಯಕ್ಷ ಅರುಣ್‌ ಕುಮಾರ್‌ ಸಾಹೋ, ಧರಮ್‌ಲಾಲ್‌ ಕೌಶಿಕ್‌, ಒ.ಪಿ. ಚೌಧರಿ ಅವರು ಸಿಎಂ ಆಕಾಂಕ್ಷಿಗಳಾಗಿದ್ದಾರೆ. ಇನ್ನು, ರಾಜಸ್ಥಾನದಲ್ಲಿ ಮಾಜಿ ಸಿಎಂ ವಸುಂಧರಾ ರಾಜೇ, ಮಹಾಂತ ಬಾಲಕನಾಥ್‌, ಸಿ.ಪಿ. ಜೋಶಿ, ಗಜೇಂದ್ರ ಶೇಖಾವತ್‌ ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ ನಡೆಸಿದ್ದಾರೆ. ಈ ಹಿಂದೆ ಹಲವು ರಾಜ್ಯಗಳಲ್ಲಿ ಬಿಜೆಪಿ ಹೈಕಮಾಂಡ್‌ ಅಚ್ಚರಿ ಅಭ್ಯರ್ಥಿಗಳನ್ನು ಸಿಎಂ ಆಗಿ ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಈ ಬಾರಿಯೂ
ಸಹಜವಾಗಿಯೇ ಕುತೂಹಲ ಮನೆ ಮಾಡಿದೆ.

ರೆಸಾರ್ಟ್‌ ಭೇಟಿ: ರಾಜಸ್ಥಾನದಲ್ಲಿ ಸಿಎಂ ಆಯ್ಕೆ ಕಸರತ್ತು ಮುಂದುವರಿದಿರುವಂತೆಯೇ, ಬಿಜೆಪಿಯ ಐವರು ಶಾಸಕರು ಗುರುವಾರ ಜೈಪುರದ ಹೊರವಲಯದ ರೆಸಾರ್ಟ್‌ವೊಂದಕ್ಕೆ ಭೇಟಿ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದೇ ವೇಳೆ ಮೂರು ರಾಜ್ಯಗಳ ಗೆಲುವಿಗಾಗಿ ಪ್ರಧಾನಿ ಮೋದಿಯವರನ್ನು ವಸುಂಧರಾ ಅವರು ಅಭಿನಂದಿಸುತ್ತಿರುವ ದೊಡ್ಡ ಬ್ಯಾನರ್‌ಗಳನ್ನು ರಾಜೇ ನಿವಾಸದ ಹೊರಗೆ ಅಳವಡಿಸಲಾಗಿದೆ.

90 ಶಾಸಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ: ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಚುನಾಯಿತರಾದ 230 ಶಾಸಕರ ಪೈಕಿ 90 ಶಾಸಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗಳು ದಾಖಲಾಗಿವೆ. ಅವರಲ್ಲಿ 34 ಮಂದಿ ಗರಿಷ್ಠ 5 ವರ್ಷಗಳ ಶಿಕ್ಷೆಗೆ ಒಳಪಡುವ ಅಪರಾಧಗಳನ್ನು ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಶನ್‌ ಫಾರ್‌ ಡೆಮಾಕ್ರಟಿಕ್‌ ರಿಫಾಮ್ಸ್‌ì ವರದಿ ಹೇಳಿದೆ. ವರದಿಗಳ ಪ್ರಕಾರ 2018ರ ಚುನಾವಣೆಯಲ್ಲಿ ಸಲ್ಲಿಕೆಯಾದ ಅಫಿದ‌ವಿತ್‌ಗಳಲ್ಲಿ 94 ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗಳಿರುವುದಾಗಿ ತಿಳಿಸಿದ್ದರು. 2023ರಲ್ಲಿ ಈ ಸಂಖ್ಯೆ 90ಕ್ಕೆ ಇಳಿಕೆಯಾಗಿದೆ. ಇನ್ನು 230 ಶಾಸಕರ ಪೈಕಿ 205 ಮಂದಿ ಕೋಟ್ಯಧಿಪತಿಗಳಾಗಿದ್ದು, ಸರಾಸರಿ ಆಸ್ತಿ ಮೌಲ್ಯವೇ 11.77 ಕೋಟಿ ರೂ.ಗಳಷ್ಟಿದೆ.

Advertisement

ಚಾ, ಸಮೋಸಾ ಸಭೆ
“ಮೋದಿ ಇದ್ದರೆ ಎಲ್ಲವೂ ಸಾಧ್ಯ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಜೆಡಿಯು ಸಂಸದ ಸುನೀಲ್‌ ಕುಮಾರ್‌ ಪಿಂಟು ಮತ್ತೂಮ್ಮೆ ವಿಪಕ್ಷಗಳ ಮೈತ್ರಿಕೂಟಕ್ಕೆ ಮುಜುಗರವಾಗುವ ಹೇಳಿಕೆ ನೀಡಿದ್ದಾರೆ. “ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಅಂತಿಮಗೊಳ್ಳುವವರೆಗೆ ವಿಪಕ್ಷಗಳ ಮೈತ್ರಿಯ ಸಭೆಗಳು ಕೇವಲ ಚಹಾ, ಸಮೋಸಾಗೆ ಸೀಮಿತವಾಗಿರುತ್ತದೆ’ ಎಂದಿದ್ದಾರೆ. ಆರ್‌ಜೆಡಿ ಮೈತ್ರಿಯೊಂ ದಿಗೆೆ ಚುನಾವಣೆ ಎದುರಿಸಲು ಇಚ್ಛಿಸುವುದಿಲ್ಲ ಎಂದೂ ಹೇಳಿದ್ದಾರೆ.

ಮುಖಕ್ಕೆ ಮಸಿ
ಮ.ಪ್ರದೇಶದಲ್ಲಿ ಬಿಜೆಪಿ 50ಕ್ಕಿಂತ ಹೆಚ್ಚು ಸೀಟು ಗಳಿಸಿದರೆ ಮುಖಕ್ಕೆ ಮಸಿ ಬಳಿಸಿಕೊಳ್ಳುವೆ ಎಂದಿದ್ದ ಕೈ ಶಾಸಕ ಫ‌ೂಲ್‌ ಸಿಂಗ್‌ ಮುಖಕ್ಕೆ ಪಕ್ಷದ ನಾಯಕ ದಿಗ್ವಿಜಯ್‌ ಮಸಿ ಬಳಿದರು.

Advertisement

Udayavani is now on Telegram. Click here to join our channel and stay updated with the latest news.

Next