ನವ ದೆಹಲಿ : ತೌಖ್ತೇ ಚಂಡಮಾರುತದ ಸಂದರ್ಭದಲ್ಲಿ ತೆಗೆದುಕಳ್ಳಬೇಕಾದ ಮುಂಜಾಗ್ರತಾ ಕ್ರಮ ಮತ್ತು ರಕ್ಷಣಾ ಕಾರ್ಯಗಳ ಬಗ್ಗೆ ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಪಕ್ಷದ ಶಾಸಕರು ಹಾಗೂ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳ, ದಮನ್ ಮತ್ತು ದಿಯು ಮತ್ತು ಗುಜರಾತ್‌ನ ರಾಜ್ಯ ಪದಾಧಿಕಾರಿಗಳೊಂದಿಗೆ ಪರಿಸ್ಥಿತಿಯ ಬಗ್ಗೆ ಚರ್ಚೆ ಮಾಡಿದ್ದಾರೆ.
ಇದನ್ನೂ ಓದಿ : ಸರ್ಕಾರಗಳ ನಿರ್ಲಕ್ಷ್ಯದಿಂದ ಕೋವಿಡ್ ಹೆಚ್ಚಳ : ಎಸ್.ಜಿ.ನಂಜಯ್ಯನಮಠ
ಚಂಡಮಾರುತದ ಪರಿಸ್ಥಿತಿಯನ್ನು ಅವಲೋಕಿಸಿ ಪಕ್ಷದ ಕಾರ್ಯ ಕರ್ತರೊಂದಿಗೆ ಮಾತನಾಡಿದ ನಡ್ಡಾ, ಈ ಸಂದರ್ಭವನ್ನು ಜವಾಬ್ದಾರಿಯುತ ಪಕ್ಷವಾಗಿರು ಬಿಜೆಪಿ ನಾವು ಈ ಸಂಕಷ್ಟವನ್ನು ಎದುರಿಸಬೇಕಿದೆ. ಬಿಜೆಪಿಗೆ ಆಡಳಿತವಿರುವ ರಾಜ್ಯಗಳಲ್ಲಿ ಸರ್ಕಾರದೊಂದಿಗೆ ಕೆಲಸ ಮಾಡಬೇಕು. ಪಕ್ಷ ಅಧಿಕಾರದಲ್ಲಿ ಇಲ್ಲದೇ ಇರುವೆಡೆ ಕೂಡ, ಸ್ಥಳೀಯ ಆಡಳಿತದೊಂದಿಗೆ ಸಕಾರಾತ್ಮಕವಾಗಿ ಸಮನ್ವಯ ಸಾಧಿಸಬೇಕು ಎಂದು ಸೂಚಿಸಿದ್ದಾರೆ.
ಬಿಜೆಪಿಯ ಸಂಸತ್ತಿನ ಸದಸ್ಯರು ಮತ್ತು ಶಾಸಕರನ್ನು ಸಂತ್ರಸ್ತ ರಾಜ್ಯಗಳ ಪಂಚಾಯತ್ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸುವಂತೆ ಕೇಳಿಕೊಂಡಿದ್ದಲ್ಲದೇ, ಶಾಸಕರು ಮತ್ತು ಸಂಸದರು ಪಂಚಾಯತ್ ಜಿಲ್ಲಾ ಪರಿಷತ್ ಮತ್ತು ಬ್ಲಾಕ್ ಅಭಿವೃದ್ಧಿ ಮಂಡಳಿಗಳ ಪ್ರತಿನಿಧಿಗಳೊಂದಿಗೆ ನೇರಾ ನೇರ ಸಂವಹನ ನಡೆಸಬೇಕು ಎಂದಿದ್ದಾರೆ.
Related Articles
ಇನ್ನು, ಇಂತಹ ಸಂದರ್ಭದಲ್ಲಿ ಎದೆಗುಂದದೇ ಜನರ ಧ್ವನಿಯಾಗಿ ಕೆಲಸ ಮಾಡಬೇಕು. ಬಿಕ್ಕಟ್ಟನ್ನು ಎದುರಿಸುವಲ್ಲಿ ಕಡಲ ತೀರದ ಜನರಿಗೆ ಸಹಾಯವನ್ನು ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದಿದ್ದಾರೆ.
ಅಗತ್ಯವಾಗಿ ಬೇಕಾದ ವೈದ್ಯಕೀಯ ಸೌಲಭ್ಯಗಳು ಹಾಗೂ ಸುರಕ್ಷಾ ಕ್ರಮಗಳ ಬಗ್ಗೆ ಆದ್ಯತೆ ನೀಡಿ ಎಂದು ಕೂಡ ಹೇಳಿದ್ದಾರೆ.
ಇನ್ನು, ಕೊವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದಕ್ಕಾಗಿ ರಾಜ್ಯಕ್ಕೆ ಸಹಾಯ ಮಾಡಲು ‘ಸೇವಾ ಹೈ ಸಂಘಟನ್ ‘ ಕಾರ್ಯಕ್ರಮದಡಿ ನಡ್ಡಾ 17 ಮೊಬೈಲ್ ವೈದ್ಯಕೀಯ ಘಟಕಗಳನ್ನು ಮತ್ತು ಹಿಮಾಚಲ ಪ್ರದೇಶಕ್ಕೆ ವೈದ್ಯಕೀಯ ಸಹಾಯಕ್ಕೆ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ : ಪ್ರತಿಕೂಲ ಹವಾಮಾನ: ಹೈದರಾಬಾದ್ , ತಿರುಪತಿ ವಿಮಾನ ಸಂಚಾರ ರದ್ದು