ದಾವಣಗೆರೆ: ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ಮತ್ತು ಮೋಸ ಮಾಡುವಲ್ಲಿ ನಿಸ್ಸೀಮರು. ನಗರ ಪಾಲಿಕೆಯಲ್ಲೂ ಮೋಸ ಮಾಡಿ ಗೆದ್ದಿದ್ದಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಮೋಸ ಮಾಡಿ ಗೆದ್ದಿದ್ದಾರೆ ಎಂದು ದೂರಿದರು.
ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಮಾತನಾಡಿ, ಎಲ್ಲಿಯೋ ಗೆದ್ದಂತಹವರು ಎಲ್ಲಿಯೋ ಮತ ಹಾಕುವ ಅವಕಾಶ ನೋಡಿದರೆ ಕಾನೂನಿನಲ್ಲಿ ತಪ್ಪು ಇರಬಹುದು. ಮುಂದೆ ಈ ರೀತಿಯಲ್ಲಿ ಆಗದಂತೆ ನ್ಯಾಯಾಲಯದ ಮೊರೆ ಹೋಗುವ ಚಿಂತನೆ ಇದೆ ಎಂದು ತಿಳಿಸಿದರು.
ಇದನ್ನೂ ಓದಿ:ದಾವಣಗೆರೆ ಮಹಾನಗರ ಪಾಲಿಕೆ: ಮೂರನೇ ಅವಧಿಗೆ ಬಿಜೆಪಿಗೆ ಮೇಯರ್, ಉಪ ಮೇಯರ್ ಸ್ಥಾನ
ಎಲ್ಲಿಂದ ಗೆದ್ದಿರುವರೋ ಅಲ್ಲೇ ವಾಸ ಮಾಡಬೇಕು. ಬಹುಮತ ಅಧಿಕಾರ ಪಡೆಯಲು ಮತ ಹಾಕುವುದು ತಪ್ಪು. ನಾವು ಕಾಂಗ್ರೆಸ್ ನವರು, ಬಿಜೆಪಿ, ಜೆಡಿಎಸ್ ನವರದ್ದು ಎಲ್ಲರ ತಪ್ಪೂ ಇದೆ. ಮುಂದೆ ಹೀಗಾಗದಂತೆ ನ್ಯಾಯಾಲಯದ ಮೊರೆ ಹೋಗುವ ಚಿಂತನೆ ಇದೆ ಎಂದು ಪುನರುಚ್ಚರಿಸಿದರು.