Advertisement

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

08:41 PM Sep 18, 2021 | Team Udayavani |

ನವದೆಹಲಿ: ಅಕ್ಟೋಬರ್‌ 4ರಂದು ನಡೆಯಲಿರುವ ಅಸ್ಸಾಂ ಮತ್ತು ಮಧ್ಯಪ್ರದೇಶದ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಕೇಂದ್ರದ  ಇಬ್ಬರು ಸಚಿವರ ಹೆಸರನ್ನು ಅಂತಿಮಗೊಳಿಸಲಾಗಿದೆ.

Advertisement

ಅಸ್ಸಾಂನ ಸರ್ಬಾನಂದ ಸೊನೊವಾಲ್‌ ಹಾಗೂ ಮಧ್ಯಪ್ರದೇಶದ ಎಲ್‌ ಮುರುಗನ್‌ ಅವರನ್ನು ಅಭ್ಯರ್ಥಿಗಳೆಂದು ಘೋಷಿಸಲಾಗಿದೆ. ಈ ಇಬ್ಬರೂ ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಪಡೆದವರು.

ಅಸ್ಸಾಂನ ರಾಜ್ಯಸಭಾ ಸದಸ್ಯರಾಗಿದ್ದ ಬಿಸ್ವಜಿತ್‌ ದೈಮಾರಿ ಅವರು ವಿಧಾನಸಭಾ ಸ್ಪೀಕರ್‌ರಾದ ಕಾರಣ ರಾಜೀನಾಮೆ ಸಲ್ಲಿಸಿದ್ದರೆ, ಮಧ್ಯಪ್ರದೇಶದ ಥಾವರ್‌ಚಂದ್‌ ಗೆಹಲೋತ್‌ ಅವರು ಕರ್ನಾಟಕದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ರಾಜ್ಯಸಭಾ ಸ್ಥಾನಕ್ಕೆ  ರಾಜೀನಾಮೆ ಸಲ್ಲಿಸಿದ್ದರು.

ಇದನ್ನೂ ಓದಿ :ನನ್ನ ಪ್ರವಾಸ ಆರಂಭವಾಗಿದೆ : ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ : ಬಿಎಸ್ ವೈ

Advertisement

Udayavani is now on Telegram. Click here to join our channel and stay updated with the latest news.

Next