Advertisement

BJP ಅಭ್ಯರ್ಥಿ ಹೇಮಾ ಮಾಲಿನಿ ಆಸ್ತಿ ಘೋಷಣೆ

12:42 AM Apr 06, 2024 | Team Udayavani |

ಹೊಸದಿಲ್ಲಿ: ಉ.ಪ್ರ.ದ ಮಥುರಾ ಕ್ಷೇತ್ರದಿಂದ 3ನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿರುವ ಹಾಲಿ ಸಂಸದೆ, ಬಿಜೆಪಿಯ ಅಭ್ಯರ್ಥಿ ಹೇಮಾ ಮಾಲಿನಿ 123 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ. ಅವರ ಹೆಸರಲ್ಲಿ 1.4 ಕೋಟಿ ರೂ. ಮತ್ತು ಪತಿ ಧರ್ಮೇಂದ್ರ ಡಿಯೋಲ್‌ ಅವರ ಹೆಸರಲ್ಲಿ 6.4 ಕೋಟಿ ರೂ. ಸಾಲವಿದೆ.

Advertisement

ಚುನಾವಣ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯ ಪ್ರಕಾರ, ಹೇಮಾ ಮಾಲಿನಿ ಬಳಿ 13.5 ಲಕ್ಷ ಹಾಗೂ ಪತಿಯ ಬಳಿ 43 ಲಕ್ಷ ನಗದು ಇದ್ದು, ಮರ್ಸಿಡೆಸ್‌ ಬೆಂಜ್‌, ಅಲ್ಕಜಾರ್‌ ಮತ್ತು ಮಾರುತಿ ಇಕೋ ಸೇರಿ 61 ಲಕ್ಷ ರೂ. ಮೌಲ್ಯದ ವಾಹನಗಳಿವೆ. ಪತಿ ಧರ್ಮೇಂದ್ರ ಬಳಿ ರೇಂಜ್‌ ರೋವರ್‌, ಮಹೀಂದ್ರಾ ಬೊಲೆರೋ ಮತ್ತು ಮೋಟರ್‌ ಸೈಕಲ್‌ ಇದೆ. ಧರ್ಮೇಂದ್ರ ಒಟ್ಟು 20 ಕೋ.ರೂ. ಆಸ್ತಿಯನ್ನು ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next