Advertisement
ತಹಶೀಲ್ದಾರ ಕಚೇರಿಗೆ ತೆರಳಿ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಅವರಿಗೆ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ಅತ್ಯಂತ ಸರಳವಾಗಿ ತಮ್ಮ ನಾಲ್ವರು ಸೂಚಕರೊಂದಿಗೆ ಒಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಭಾ ಶುಗರ ನಿರ್ದೇಶಕರಾದ ಬಸಗೌಡ ಪಾಟೀಲ, ಕೆಂಚನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯರಾದ ಡಾ.ರಾಜೇಂದ್ರ ಸಣ್ಣಕ್ಕಿ, ಶಂಕರ ಬಿಲಕುಂದಿ ಅವರು ಉಪಸ್ಥಿತರಿದ್ದರು.
1510 ಗ್ರಾಂ ಚಿನ್ನವಿದ್ದರೆ, 8,14,100 ರೂ. ಮೌಲ್ಯದ10 ಕೆಜಿ ಬೆಳ್ಳಿ ಇದೆ. 31,13,85,052 ರೂ. ಮೌಲ್ಯದ ಕೃಷಿ, ಕೃಷಿಯೇತರ ಭೂಮಿ ಹಾಗೂ ವಾಸಿಸುವ ಮನೆ ಸೇರಿದೆ. ಬಾಲಚಂದ್ರ ಜಾರಕಿಹೊಳಿ ಅವರು 1,29,30,703 ರೂ.ಗಳನ್ನು ಬೇರೆಯವರಿಗೆ ಸಾಲವನ್ನಾಗಿ ನೀಡಿದ್ದಾರೆ.
Related Articles
Advertisement
ಪಕ್ಷೇತರ ಅಭ್ಯರ್ಥಿಯೊಂದಿಗೆ ಉಭಯ ಕುಶಲೋಪರಿ
ಉಮೇದುವಾರಿಕೆ ಸಲ್ಲಿಸಿ ಜಾರಕಿಹೊಳಿ ಅವರು ಹೊರಬರುತ್ತಿದ್ದಂತೆಯೇ ಪಕ್ಷೇತರ ಅಭ್ಯರ್ಥಿ ಭೀಮಪ್ಪ ಗಡಾದ ಅವರು ಎದುರಾದರು. ರಾಜಕೀಯ ಮರೆತು ಪರಸ್ಪರ ಕೈ ಮುಗಿಯುವ ಮೂಲಕ ಕುಶಲೋಪರಿ ವಿಚಾರಿಸಿದರು. ನಗುಮುಖದಿಂದಲೇ ಬಾಲಚಂದ್ರ ಜಾರಕಿಹೊಳಿ ಅವರಿಗೆ ಗಡಾದ ಎದುರಾದಾಗ ನಮಗೂ ಒಳ್ಳೆಯದಾಗಲಿ. ನಿಮಗೂ ಒಳ್ಳೆಯದಾಗಲಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಈ ಅಪರೂಪದ ಘಟನೆಗೆ ಕಾರ್ಯಕರ್ತರು ಸಾಕ್ಷಿಯಾದರು.