Advertisement

ಗುಜರಾತ್‌ನಲ್ಲಿ ಬಿಜೆಪಿಗೆ ಸುಲಭದಲ್ಲಿ 150+ ಸೀಟು: ಆದಿತ್ಯನಾಥ್

11:35 AM Oct 14, 2017 | Team Udayavani |

ನವಸಾರಿ : ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ನಿರಾಯಾಸವಾಗಿ 150+ ಸೀಟುಗಳನ್ನು ಗೆಲ್ಲಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

Advertisement

‘ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಮಾಡಿದ್ದಾರೆ. ಜನರು ಈಗಲೂ ಅದನ್ನು ಮರೆತಿಲ್ಲ; ಇಂದಿಗೂ ಮೋದಿ ಮಾದರಿಯ ಅಭಿವೃದ್ಧಿ ಕಾರ್ಯ ಸಾಗುತ್ತಿದೆ. ಹಾಗಾಗಿ ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ 150+ ಸೀಟುಗಳು ಸಿಗಲು ಏನೇನೂ ಕಷ್ಟವಾಗದು’ ಎಂದು ಯೋಗಿ ಆದಿತ್ಯನಾಥ್‌ ಅವರು ಎಎನ್‌ಐ ಜತೆಗೆ ಮಾತನಾಡುತ್ತಾ ತಮ್ಮಲ್ಲಿನ ವಿಶ್ವಾಸವನ್ನು ವ್ಯಕ್ತಪಡಿಸಿದರು. 

‘ಗುಜರಾತ್‌ನಲ್ಲಿ ಕಳೆದ 20 ವರ್ಷಗಳಲ್ಲಿ ಜನರ ತಲಾ ಆದಾಯ ಹತ್ತು ಪಟ್ಟು ಏರಿದೆ. ಹಿಂದೆ 14,000 ರೂ. ಇದ್ದ ತಲಾ ಆದಾಯ ಇಂದು 1,41,000 ರೂ. ಆಗಿದೆ. ಗುಜರಾತ್‌ ಆರ್ಥಿಕಾಭಿವೃದ್ದಿ ದರವು ದೇಶದಲ್ಲೇ ಗರಿಷ್ಠವಾಗಿದೆ. ಉದ್ಯೋಗ ಸೃಷ್ಟಿಯಲ್ಲೂ ಗುಜರಾತ್‌ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಗುಜರಾತ್‌ನಲ್ಲಿನ ಅಭಿವೃದ್ಧಿ ಮತ್ತು ಸುರಕ್ಷೆಯ ಮನೋಭಾವ ದೇಶದ ಇತರ ರಾಜ್ಯಗಳು ಅನುಸರಿಸುವಂತಿದೆ’ ಎಂದು ಆದಿತ್ಯನಾಥ್‌ ಹೇಳಿದರು.

ಗುಜರಾತ್‌ ಚುನಾವಣೆಯು ಈ ವರ್ಷ ಡಿಸೆಂಬರ್‌ 18ಕ್ಕೆ ಮೊದಲ ನಡೆಯುವುದೆಂದು ಚುನಾವಣಾ ಆಯೋಗ ಹೇಳಿದೆಯಾದರೂ ನಿಗದಿತ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next