Advertisement

ಸಾಲ ಮನ್ನಾ –ಶ್ವೇತಪತ್ರ ಹೊರಡಿಸಿ: ತಾರಾ

12:59 AM Apr 21, 2019 | Team Udayavani |

ಬೈಂದೂರು: ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ 46 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದೇವೆಂದು ಹೇಳುತ್ತಿದ್ದಾರೆ. ಆದರೆ ಎಷ್ಟು ಮಂದಿ ರೈತರು ಪ್ರಯೋಜನ ಪಡೆದುಕೊಂಡಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.

Advertisement

ಎರಡನೇ ಹಂತದ ಚುನಾವಣೆಯ ಮುನ್ನವಾದರೂ ಶ್ವೇತಪತ್ರ ಹೊರಡಿಸಿ ಜನರಿಗೆ ಸತ್ಯಾಸತ್ಯತೆ ತಿಳಿಸಿ ಎಂದು ಬಿಜೆಪಿ ನಾಯಕಿ ತಾರಾ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಕೃಷಿಕರ ಕಲ್ಯಾಣಕ್ಕಾಗಿ ಕಿಸಾನ್‌ ಸಮ್ಮಾನ್‌ ಯೋಜನೆ ಜಾರಿಗೆ ತಂದಿತ್ತು. ಆದರೆ ರಾಜ್ಯದಲ್ಲಿನ ಸಮ್ಮಿಶ್ರ ಸರಕಾರ ಅರ್ಹ ರೈತರ ಪಟ್ಟಿಯನ್ನು ಸಮರ್ಪಕವಾಗಿ ಕೇಂದ್ರಕ್ಕೆ ನೀಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಮೋದಿ ದೇಶದ ಶಕ್ತಿ
ಮೋದಿ ಕೇವಲ ವ್ಯಕ್ತಿ
ಯಲ್ಲ; ಬಹುದೊಡ್ಡ ಶಕ್ತಿ ಯಾಗಿದ್ದಾರೆ. 2014ರಲ್ಲಿ ಕೇವಲ ಮೋದಿ ಅವರ ಹೆಸರಿನಲ್ಲಿ ಚುನಾವಣೆ ಎದುರಿಸಿದ್ದೆವು. ಆದರೆ ಈಗ ಮೋದಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ದೇಶದ ಭದ್ರತೆಗಾಗಿ ಅವರು ಇರಿಸಿದ ದಿಟ್ಟಹೆಜ್ಜೆಗಳನ್ನು ಮುಂದಿರಿಸಿಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಕೇಂದ್ರವು ಮೀನುಗಾರರ ಕಲ್ಯಾಣ ಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುತ್ತಿರುವುದು ಮೀನುಗಾರರ ಬಗೆಗಿ ರುವ ಬದ್ಧತೆ ತೋರಿಸುತ್ತದೆ ಎಂದರು.

ಅಸ್ತಿತ್ವ ಕಳಕೊಂಡ ಕಾಂಗ್ರೆಸ್‌
ಉಪಚುನಾವಣೆ ಬಳಿಕ ಸಂಸದ ರಾಘವೇಂದ್ರ ಅವರು ಅತಿ ಕಡಿಮೆ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದ ಕಾಂಗ್ರೆಸ್‌ ಇಂದು ಚಿಹ್ನೆ ಯನ್ನು ಕಳೆದುಕೊಂಡು ಅಸ್ತಿತ್ವವೇ ಇಲ್ಲದಂತಿದೆ ಎಂದ ತಾರಾ, ಕಾಂಗ್ರೆಸ್‌ಕಾರ್ಯಕರ್ತರದ್ದು ಮನೆ ಕಳೆದು ಕೊಂಡಂತಹ ಪರಿಸ್ಥಿತಿಯಾಗಿದೆ ಎಂದು ಟೀಕಿಸಿದರು.

Advertisement

ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ರಾಘವೇಂದ್ರ ಅವರಿಗೆ 50 ಸಾವಿರಕ್ಕೂ ಅಧಿಕ ಅಂತರದ ಮತ ಗಳ ಗೆಲುವು ದೊರಕಲಿದೆ ಎಂದರು.ಸದಾನಂದ ಉಪ್ಪಿನಕುದ್ರು, ದೀಪಕ್‌ ಕುಮಾರ್‌ ಶೆಟ್ಟಿ, ರಾಮಚಂದ್ರ ಬೈಕಂಪಾಡಿ, ಬಾಲಚಂದ್ರ ಭಟ್‌, ಪ್ರವೀಣ ಗುರ್ಮೆ, ಸುರೇಶ್‌ ಬಂಟ್ವಾಡಿ, ಶರತ್‌ ಶೆಟ್ಟಿ, ಪ್ರಿಯದರ್ಶಿನಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next