ವೇಣೂರು: ಇಂದು ಜಿಲ್ಲೆ ಯಲ್ಲಿ ಬಿಜೆಪಿ- ಕಾಂಗ್ರೆಸ್ ಸ್ಪರ್ಧೆ ಇಲ್ಲ. ಕಾಂಗ್ರೆಸ್‌ನವರು ಅಸ್ತಿತ್ವ ಉಳಿಸಿಕೊಳ್ಳಲು ಸ್ಪರ್ಧಿಸುತ್ತಿದ್ದರೆ ಬಿಜೆಪಿ ಐತಿಹಾಸಿಕ ಜಯ ದಾಖಲಿಸಿಕೊಳ್ಳಲು ಪಣ ತೊಟ್ಟಿದೆ. ಈ ಮೂಲಕ ಭವ್ಯ ಭಾರತದಲ್ಲಿ ಬಿಜೆಪಿ ಇತಿ ಹಾಸ ಸೃಷ್ಟಿಸಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು.
ಅಳದಂಗಡಿ ಪೇಟೆಯಲ್ಲಿ ನಡೆದ ಪಕ್ಷದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಪ್ರಮುಖ ಭಾಷಣಕಾರರಾಗಿ ಮಾತನಾಡಿದರು.
ಗಾಂಧಿ,ಮೋದಿ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತಲುಪದಿದ್ದರೂ ಮೋದಿ ಈಗಾಗಲೇ ಮನೆ ಮನಗಳ ಕದ ತಟ್ಟಿದ್ದಾರೆ. ಅಂದು ಗಾಂಧಿ ಇಂದು ಮೋದಿ. ಇಬ್ಬರೂ ಗುಜರಾತಿನವರು. ಮೋದಿ ಅಂದರೆ ಮಾಸ್ಟರ್ ಆಫ್ ಡೆವಲಪಿಂಗ್ ಇಂಡಿಯಾ, ಮಾಸ್ಟರ್ ಆಫ್ ಡೇರಿಂಗ್ ಇಂಡಿಯಾ ಎಂದು ಬಣ್ಣಿಸಿದ ಅವರು, ಕಳೆದ 50 ವರ್ಷಗಳಲ್ಲಿ ಪಾಕಿಸ್ಥಾನಕ್ಕೆ ತಕ್ಕ ಉತ್ತರ ಕೊಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲೀಗ ಕೋಮುಗಲಭೆಗಳು ಬಂದ್ ಆಗಿವೆ. ಜಿಲ್ಲೆಯ 68,000 ಮಂದಿಗೆ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ನೀಡಲಾಗಿದೆ ನಾವೆಲ್ಲ ಸೇರಿ ಮತ್ತೂಮ್ಮೆ ಮೋದಿ ಯವರನ್ನು ಪ್ರಧಾನಿಯನ್ನಾಗಿ ಮಾಡಬೇಕಾಗಿದೆ ಎಂದರು.
ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಶಿವ ಭಟ್ ಕಟ್ಟೂರು, ಅಳದಂಗಡಿ ಹಾಲು ಉತ್ಪಾದಕ ಸ. ಸಂಘದ ಅಧ್ಯಕ್ಷ ಗಣೇಶ ದೇವಾಡಿಗ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಕಾರ್ಯದರ್ಶಿ ಸೀತಾರಾಮ ಬಿ.ಎಸ್., ಹಿತೇಶ್ ಕಾಪಿನಡ್ಕ ಹಾಗೂ ಮತ್ತಿತರರಿದ್ದರು. ಸಭೆಯ ಸಂಚಾಲಕ ಸದಾನಂದ ಪೂಜಾರಿ ಉಂಗಿಲಬೈಲು ಸ್ವಾಗತಿಸಿ, ರಾಮಣ್ಣ ಸಾಲ್ಯಾನ್ ವಂದಿಸಿದರು.