Advertisement

ಕಾರ್ಯಕರ್ತರ ಪರಿಶ್ರಮದಿಂದ ಬಿಜೆಪಿ ಅಧಿಕಾರಕ್ಕೆ

03:52 PM Feb 13, 2023 | Nagendra Trasi |

ಗೋಕಾಕ: ದೇಶ ಹಾಗೂ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಪಕ್ಷದ ಕಾರ್ಯಕರ್ತರ ನಿಷ್ಠಾವಂತ ಸೇವೆಯೆ ಕಾರಣವೆಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

Advertisement

ಅವರು ರವಿವಾರ ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಬಿಜೆಪಿ ಗೋಕಾಕ ವಿಧಾನಸಭಾ ಮತಕ್ಷೇತ್ರದ ಬೂತ್‌ ಅಧ್ಯಕ್ಷರ ಹಾಗೂ ಪೇಜ್‌ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಜನತಾ ಪಕ್ಷದಲ್ಲಿ ಕಾರ್ಯಕರ್ತರೇ ಜೀವಾಳವಾಗಿದ್ದು, ಪಕ್ಷವು ಸಹ ಕಾರ್ಯಕರ್ತರಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಕಾರ್ಯಕರ್ತರ ಪರಿಶ್ರಮದಿಂದಲೇ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಮುಂಬರುವ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ಈಗಿನಿಂದಲೆ ಕಾರ್ಯ ಪ್ರವೃತ್ತರಾಗಿ ಪಕ್ಷವನ್ನು ಮತ್ತೂಮ್ಮೆ ಅಧಿ ಕಾರಕ್ಕೆ ತರುವುದರೊಂದಿಗೆ ದೇಶದ ಅಭಿವೃದ್ಧಿಗೆ ಶ್ರ ಮಿಸಬೇಕು. ಇಂದಿನ ಕಾರ್ಯಕರ್ತರ ಉತ್ಸಾಹವನ್ನು ನೋಡಿದರೆ ನನ್ನ 1999ರ ದಾಖಲೆಯನ್ನು ಮುರಿದು ಹೊಸ ಇತಿಹಾಸವನ್ನು ನೀವುಗಳು ನಿರ್ಮಿಸುವುದು ನಿಶ್ಚಿತ. ಗೋಕಾಕ ಹಾಗೂ ಅರಭಾಂವಿ ಕ್ಷೇತ್ರಗಳ ಗೆಲುವಿನ ಜವಾಬ್ದಾರಿ ನಿಮ್ಮದಾಗಿದೆ. ಜಿಲ್ಲೆಯ 18 ಕ್ಷೇತ್ರಗಳು ಹಾಗೂ ಇತರ ಜಿಲ್ಲೆಗಳಲ್ಲೂ ಪ್ರಚಾರ ನಡೆಸಿ, 140 ಸೀಟುಗಳೊಂದಿಗೆ ಮತ್ತೂಮ್ಮೆ ಬಿಜೆಪಿ ಅ ಧಿಕಾರಕ್ಕೆ ತರಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.

ನಾವು ಮಾನವ ಧರ್ಮ ಒಂದೇ ಎನ್ನುವ ಬಸವಣ್ಣನವರ ತತ್ವದಲ್ಲಿ ಕಾರ್ಯಪ್ರವೃತ್ತರಾಗೋಣ. ಜಾತಿ, ಮತ ಭೇದ ಮಾಡದೆ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡೋಣ. ಸಿಡಿ ಯಂತಹ ಮಹಾನ್‌ ನಾಯಕರಿಂದ ಕಾಂಗ್ರೆಸ್‌ ಗೆ ಭವಿಷ್ಯವಿಲ್ಲದಂತಾಗಿದೆ. ದಿಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷದ ನಾಯಕರು ನನಗೆ ನೀಡುತ್ತಿರುವ ಸಹಕಾರದಿಂದ ನನಗೆ ಈ ಪಕ್ಷಕ್ಕೆ ಬಂದಿದ್ದು ಹೆಮ್ಮೆಯೆನಿಸುತ್ತಿದೆ. ನನಗೆ ಈಗ ಸಚಿವ ಸ್ಥಾನ ತಪ್ಪಿದರೂ ಮುಂದಿನ ದಿನಗಳಲ್ಲಿ
ಹೆಚ್ಚಿನ ಸ್ಥಾನಮಾನ ದೊರೆಯಲಿದೆ. ಈಗ ಜಿಲ್ಲೆಯಾದ್ಯಂತ ಯುದ್ದೋಪಾದಿಯಲ್ಲಿ ಪಕ್ಷ ಬಲಪಡಿಸಲು ಕಾರ್ಯನಿರ್ವಹಿಸುತ್ತಿದ್ದೇನೆ.

Advertisement

ಬಿಜೆಪಿ ಪಕ್ಷಕ್ಕೆ ಒಳ್ಳೆಯ ಭವಿಷ್ಯವಿದ್ದು, ದೇಶದ ಅಭಿವೃದ್ಧಿ ಈ ಪಕ್ಷದಿಂದ ಮಾತ್ರ ಸಾಧ್ಯವಿದೆ. ಕಾರ್ಯಕರ್ತರು ಮತ್ತೂಮ್ಮೆ ಅಧಿಕಾರಕ್ಕೆ ಪಕ್ಷವನ್ನು ತರುವುದರೊಂದಿಗೆ ರಾಮರಾಜ್ಯ ನಿರ್ಮಿಸಲು ಶ್ರಮಿಸುವಂತೆ ಕರೆ ನೀಡಿದರು. ಬಿಜೆಪಿ ವಿಶೇಷ ವಕ್ತಾರರಾಗಿ ಆಗಮಿಸಿದ್ದ ಆದರ್ಶ ಗೋಖಲೆ ಮಾತನಾಡಿ, ಆದರ್ಶ ಸಮಾಜ ನಿರ್ಮಾಣ ಮಾಡುತ್ತ ನಾವೆಲ್ಲ ಒಂದೆ ಎಂಬ ಭಾವನೆ ತುಂಬಿಸಿ, ಗತವೈಭವದ ಭಾರತವನ್ನು ನಿರ್ಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಕೈಬಲಪಡಿಸಲು ಕಾರ್ಯಕರ್ತರು ಶ್ರಮಿಸಬೇಕು. ದೇಹಿ ಭಾರತ ದಾತಾ ಭಾರತವಾಗಿ ಬದಲಾಗುತ್ತಿದೆ.ನಮಗೆ ಸ್ವಾಭಿಮಾನದ ಹಾಗೂ ಆತ್ಮವಿಶ್ವಾಸದ ಬದುಕನ್ನು ಮೋದಿಯವರು ನೀಡಿದ್ದಾರೆ.

ಗೋಕಾಕ ಮತಕ್ಷೇತ್ರದಿಂದ ದಾಖಲೆಯ ಮತಗಳನ್ನು ಪಕ್ಷಕ್ಕೆ ನೀಡಿ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಾಗಿದೆ. ನರ್ಮದಾ ನದಿಯ ಯೋಜನೆಯಂತೆ ಗೋಕಾಕದಲ್ಲೂ ಶಾಸಕ ರಮೇಶ ಜಾರಕಿಹೊಳಿ ಅವರು ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ಈ ಭಾಗಕ್ಕೆ ನಿರಂತರ ವಿದ್ಯುತ್‌, ಕುಡಿಯುವ ನೀರಿನೊಂದಿಗೆ ಶ್ರಮಿಸುತ್ತ ಜನರ ಕನಸನ್ನು ಸಾಕಾರಗೊಳಿಸುತ್ತಿದ್ದಾರೆ. ಲಕ್ಷ ದಾಖಲೆಯ ಅಂತರದಲ್ಲಿ ಅವರನ್ನು ಗೆಲ್ಲಿಸುವಂತೆ ಕೋರಿದರು.

ವೇದಿಕೆಯ ಮೇಲೆ ಬಿಜೆಪಿ ಪಕ್ಷದ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಗೋಕಾಕ ವಿಧಾನಸಭಾ ಬಿಜೆಪಿ ಪ್ರಭಾರಿ ಮಹಾಂತೇಶ ವಕ್ಕುಂದ, ಒಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ ಇದ್ದರು. ಗೋಕಾಕ ವಿಧಾನಸಭಾ ಕ್ಷೇತ್ರದ 288 ಬೂತ್‌ಗಳ ಅಧ್ಯಕ್ಷರುಗಳು, 8 ಸಾವಿರಕ್ಕೂ ಹೆಚ್ಚು ಪೇಜ್‌ ಪ್ರಮುಖರು, ಬಿಜೆಪಿ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next