Advertisement

ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸುವಂತೆ ಕರೆ

01:43 PM Mar 04, 2018 | |

ಇಂಡಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರೊಂದಿಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕು. ಇಂಡಿ
ಮತಕ್ಷೇತ್ರದಲ್ಲಿ ನಾನೂ ಶಾಸಕನಾಗಬೇಕು ಎಂಬುವ ಸದುದ್ದೇಶದಿಂದ ನನ್ನ ಅಭಿಮಾನಿ ಬಳಗವು ಹರಕೆ ಹೊತ್ತು ಸತವಾಗಿ ಕಳೆದ 21 ದಿಗಳವರೆಗೆ 84 ಹಳ್ಳಿಗಳಿಗೆ ಹೋಗಿ ಆಶೀರ್ವಾದ ಆಂಜನೇಯ ಯಾತ್ರೆ ಯಶಸ್ವಿಯಾಗಿ ಮಾಡಲಾಗಿದೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಹೇಳಿದರು.

Advertisement

ಪಟ್ಟಣದ ಸಿಂದಗಿ ರಸ್ತೆಯ ವೀರಾಂಜನೇಯ ದೇವಸ್ಥಾನ ಅವರಣದಲ್ಲಿ ದಯಾಸಾಗರ ಪಾಟೀಲ ಅಭಿಮಾನಿ ಬಳಗ ಏರ್ಪಡಿಸಿದ್ದ ಆಶೀರ್ವಾದ ಆಂಜನೇಯ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಆಂಜನೇಯ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬರುವ ವಿಧಾನಸಭಾ ಚುನಾವಣೆಗೆ ಇಂಡಿ ಮತಕ್ಷೇತ್ರದ ಬಿಜೆಪಿಯಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದು ಮತಕ್ಷೇತ್ರದಲ್ಲಿ ಸುಮಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ್ದಿದ್ದೇನೆ. ಅದರಂತೆ ಪಕ್ಷ ಕಟ್ಟುವ ಕಾರ್ಯ ಮಾಡಿ ಶ್ರಮಿಸಿದ್ದೇನೆ. ನನ್ನ ಅಭಿಮಾನಿಗಳ ಕಾರ್ಯ ವೈಖರಿ ಬಹಳ ಮೆಚ್ಚುವಂತಹದ್ದಾಗಿದ್ದು ಮುಸ್ಲಿಂ ಯುವಕರು ಸಹ ಹರಕೆ ತೀರಿಸಿದ್ದಾರೆ. 

ಅವರೆಲ್ಲರಿಗೆ ನಾನು ಸದಾ ಚಿರ ಋಣಿಯಾಗಿರುತ್ತೇನೆ. ಹಗಲು ರಾತ್ರಿಯನ್ನದೆ ಪಕ್ಷಕ್ಕಾಗಿ ಸಾಕಷ್ಟು ಕೆಲಸಗಳನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ. ಅದಕ್ಕಾಗಿ ಈ ಸಮಾರೋಪ ಕಾರ್ಯಕ್ರಮದಲ್ಲಿ ಆಂಜನೇಯ ದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸುವ ಮೂಲಕ ಸಮಾರೋಪ ಮಾಡಿದ್ದಾರೆ ಎಂದರು. 

ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಿಲ ಜಮಾದಾರ ಮಾತನಾಡಿ, ದಯಾಸಾಗರ ಪಾಟೀಲ ಅಭಿಮಾನಿ ಬಳಗದ ಕಾರ್ಯ ಶ್ಲಾಘನಿಯವಾಗಿದ್ದು ಇವರ ಶಕ್ತಿ ಬಿಜೆಪಿಗೆ ಬಲ ನೀಡುತ್ತದೆ. ಆದ್ದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಇವರ ಪರಿಶ್ರಮ ಕೂಡಾ ಅಷ್ಟೆ ಪ್ರಮುಖವಾಗಿದೆ. 

Advertisement

ತಾವೆಲ್ಲರೂ ಸಂಘಟಿತರಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ತರುವ ಮೂಲಕ ಇಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರೆ ಆಗಲಿ ಅವರನ್ನು ಗೆಲ್ಲಿಸುವುದು ಅವಶ್ಯ. ಈ ನಿಟ್ಟಿನಲ್ಲಿ ತಾವೆಲ್ಲರು ಕಾರ್ಯೋನ್ಮುಖರಾಗಬೇಕು ಎಂದರು.

ಪ್ರಾರಂಭದಲ್ಲಿ ಶಿವಾಜಿ ವೃತ್ತದಿಂದ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಸಿಂದಗಿ ರಸ್ತೆಯ ವಿರಾಂಜನೇಯ ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮುಖಾಂತರ ಕಾರ್ಯಕ್ರಮ ಮುಕ್ತಾಯ ಮಾಡಲಾಯಿತು.

ಈ ಸಂದರ್ಭದಲ್ಲಿ ಯುವ ಮುಖಂಡ ಅನಿಲಗೌಡ ಬಿರಾದಾರ, ಪುಟ್ಟಣಗೌಡ ಪಾಟೀಲ, ಮಲ್ಲಿಕಾರ್ಜುನ ಕಿವುಡೆ, ರಾಜಕುಮಾರ ಸಗಾಯಿ, ದಯಾನಂದ ಹುಬಳ್ಳಿ, ದೇವೇಂದ್ರ ಕುಂಬಾರ, ಶ್ರೀಮಂತ ಮೊಗಲಾಯಿ, ಸೋಮು ಕುಂಬಾರ, ಶ್ರೀಕಾಂತ ದೇವರ, ಸತೀಶ ಕುಂಬಾರ, ಮಲ್ಲಿಕಾರ್ಜುನ ಹಾವಿನಾಳಮಠ, ಪ್ರದೀಪ ಉಟಗಿ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next