Advertisement
ಇದಕ್ಕೆ ದನಿ ಗೂಡಿಸಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, “ಮೌನವಾಗಿರುವುದು ನೋಡಿ ದರೆ, ಒಪ್ಪಿಕೊಂಡಂತಿದೆ’ ಎಂದು ಆಡಳಿತ ಪಕ್ಷದ ಮೌನವನ್ನು ಕೆಣಕಿದರು. ಇದು ಕಿಡಿ ಹೊತ್ತಿಕೊಳ್ಳಲು ಕಾರಣವಾಯಿತು. ತಕ್ಷಣ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, “ಯಡಿಯೂರಪ್ಪ ಒಂದು ದೈತ್ಯಶಕ್ತಿ. ಅವರಿಲ್ಲದಿದ್ದರೆ ಬಿಜೆಪಿ ಶೂನ್ಯ ಎಂದು ನಾವು ಒಪ್ಪಿಕೊಂಡರೆ, ಸಿದ್ದ ರಾಮಯ್ಯ ಇಲ್ಲದಿದ್ದರೆ, ಕಾಂಗ್ರೆಸ್ ಶೂನ್ಯ ಎಂದು ನೀವು ಒಪ್ಪಿಕೊಳ್ಳುವಿರಾ?’
Related Articles
Advertisement
15 ಮಂದಿ ಬಿಜೆಪಿ ಕಚೇರಿಯಲ್ಲಿ ಕಸ ಹೊಡೆದಿದ್ರಾ?ವಿಧಾನಸಭೆ: ಉಪ ಚುನಾವಣೆಯಲ್ಲಿ ಟಿಕೆಟ್ ನೀಡಿದ 15 ಮಂದಿ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಿದ್ರಾ? ಸಂವಿಧಾನ ಕುರಿತ ಚರ್ಚೆಯಲ್ಲಿ ಕಾಂಗ್ರೆಸ್‌ನ ಡಾ.ಜಿ.ಪರಮೇಶ್ವರ್ ಪಾಲ್ಗೊಂಡು ಮಾತ ನಾಡುವಾಗ ಕೆ.ಎಸ್. ಈಶ್ವರಪ್ಪ ಅವರಿಗೆ ಎಚ್.ಕೆ.ಪಾಟೀಲ್ ಕೇಳಿದ ಪ್ರಶ್ನೆಯಿದು. ಡಾ.ಜಿ.ಪರಮೇಶ್ವರ್ ಮಾತನಾಡುವಾಗ, “ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿಯು ಒಂದೇ ಒಂದು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡ ಲಿಲ್ಲ’ ಎಂದು ಹೇಳಿದರು. ಆಗ, ಗೃಹ ಸಚಿವ ಬಸವರಾಜ ಬೊಮ್ಮಾಯಿ, “ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮುಮ್ತಾಜ್ ಅಲಿ ಖಾನ್ ಅವರಿಗೆ ಪರಿಷತ್ ಸದಸ್ಯರನ್ನಾಗಿ ಮಾಡಿ, ಮಂತ್ರಿ ಮಾಡಿದ್ದರು’ ಎಂದು ನೆನಪಿಸಿದರು. ಕೆ.ಎಸ್.ಈಶ್ವರಪ್ಪ ಅವರು, ನನ್ನ ಕ್ಷೇತ್ರ ಶಿವಮೊಗ್ಗದಲ್ಲಿ 12 ಮುಸ್ಲಿಂ ಬೂತ್‌ಗಳಿವೆ. 1989 ರಲ್ಲಿ ನಾನು ಚುನಾವಣೆಗೆ ನಿಂತು ಗೆದ್ದಾಗಲೂ ನನಗೆ ಒಂದೇ ಒಂದು ಮತ ಹಾಕಿರಲಿಲ್ಲ. ಮೂರ್‍ನಾಲ್ಕು ಚುನಾವಣೆಗಳಲ್ಲೂ ನನಗೆ ಮತ ಬರಲಿಲ್ಲ, ಆದರೂ ನಾನು ಆ ಸಮುದಾಯದವರು ಸಮಸ್ಯೆ ಹೇಳಿಕೊಂಡು ಬಂದಾಗ ಪರಿಹಾರ ಕಲ್ಪಿಸುತ್ತಿದ್ದೆ. ನನ್ನ ಪ್ರಯತ್ನ ನಾನು ಮಾಡುತ್ತಿದ್ದೆ, ಕಳೆದ ಚುನಾವಣೆಯಲ್ಲಿ 362 ಮತ ಬಂದಿದೆ. ಕಾಂಗ್ರೆಸ್‌ನವರು ಬಿಜೆಪಿಗೆ ಬಗ್ಗೆ ಅಪಪ್ರಚಾರ ಮಾಡಿದ್ದರಿಂದ ಅವರು ನಮ್ಮತ್ತ ಬರುತ್ತಿರಲಿಲ್ಲ, ಆದರೆ, ಅವರಿಗೆ ವಾಸ್ತವ, ಸತ್ಯ ಗೊತ್ತಾದ ಮೇಲೆ ಬಂದೇ ಬರುತ್ತಾರೆ ಎಂದರು. ಆಗ, ಪರಮೇಶ್ವರ್, ನೀವೇ ಮುಸ್ಲಿಂ ಸಮುದಾಯದವರಿಗೆ ಬಿಜೆಪಿ ಟಿಕೆಟ್ ಬೇಕು ಎಂದರೆ ಬಿಜೆಪಿ ಕಚೇರಿಯಲ್ಲಿ ನಾಲ್ಕೈದು ವರ್ಷ ಕಸ ಗುಡಿಸಬೇಕು ಎಂದು ಹೇಳಿದ್ದೀರಿ ಎಂದು ನೆನಪಿಸಿದರು. ಹೌದು, ನಾನು ಹೇಳಿದ್ದೆ ಎಂದು ಈಶ್ವರಪ್ಪ ಸಮರ್ಥಿಸಿಕೊಂಡು ಮುಸ್ಲಿಂರಷ್ಟೇ ಅಲ್ಲ ಯಾರಿಗೆ ಟಿಕೆಟ್ ಬೇಕಾದರೂ ಕಸ ಹೊಡೆಯಬೇಕಾಗುತ್ತದೆ ಎಂದರು. ಆಗ, ಕಾಂಗ್ರೆಸ್‌ನ ಎಚ್.ಕೆ.ಪಾಟೀಲ್, ಉಪ ಚುನಾವಣೆಯಲ್ಲಿ 15 ಮಂದಿಗೆ ಟಿಕೆಟ್ ಕೊಟ್ಟಿàರಲ್ಲಾ, ಅವರೆಲ್ಲಾ ಕಸ ಗುಡಿಸಿದ್ರಾ ಎಂದು ಪ್ರಶ್ನಿಸಿದರು. ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಧ್ವನಿಗೂಡಿಸಿರು. ಆಗ ಈಶ್ವರಪ್ಪ, ಈಗ ಕಸ ಗುಡಿಸುತ್ತಾರೆ. ಕಸ ಹೊಡೆಯುವುದು ಎಂದರೆ ಪೊರಕೆ ಹಿಡಿಯುವುದಲ್ಲ, ಪಕ್ಷ ಕಟ್ಟುವ ಕೆಲಸ ಮಾಡುವುದು ಎಂದರು. ಆಗ, ಪರಮೇಶ್ವರ್, ಈಗ ಕಸ ಗುಡಿಸುತ್ತೀರಾ? ಹಾಗಾದರೆ ಸರಿ ಎಂದು ಲೇವಡಿ ಮಾಡಿದರು. ಸಚಿವ ಬೈರತಿ ಬಸವರಾಜ್ ಮಾತನಾಡಿ, ನಾವು ಕಸ ಹೊಡೆಯಲು ರೆಡಿ ಇದ್ದೇವೆ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.