Advertisement

BJP: ಪ್ರತೀ ಎಂಪಿ ಕ್ಷೇತ್ರದಲ್ಲಿ ಬಿಜೆಪಿ ಚುನಾವಣ ಕಚೇರಿ

11:45 PM Dec 29, 2023 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಈಗಲೇ ಸಿದ್ಧತೆಯನ್ನು ಆರಂಭಿಸಿರುವ ಬಿಜೆಪಿಯು ಜನ ವರಿಯ ಅಂತ್ಯದೊಳಗೆ ಎಲ್ಲ ಲೋಕ
ಸಭೆ ಕ್ಷೇತ್ರಗಳಲ್ಲೂ ಚುನಾವಣ ಕಚೇರಿ ತೆರೆಯಲು ಮುಂದಾಗಿದೆ. ಈ ಕಚೇರಿ ಗಳಲ್ಲಿ ಕಾರ್ಯಕರ್ತರ ಸಮಾ ವೇಶ, ಪಕ್ಷದ ಹಿರಿಯ ಮುಖಂಡರು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಲು ಉದ್ದೇಶಿಸಿದೆ. ಪ್ರತೀ ಕ್ಷೇತ್ರದಲ್ಲೂ ಕ್ಷೇತ್ರದ ಹೊರಗಿನ ನಾಯಕರನ್ನು ಲೋಕಸಭಾ ಉಸ್ತುವಾರಿ ಮತ್ತು ಸ್ಥಳೀಯ ನಾಯಕರನ್ನು ಲೋಕಸಭಾ ಸಂಚಾಲಕರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ.

Advertisement

ಇತ್ತೀಚೆಗೆ ನಡೆದ ಪಕ್ಷದ ಉನ್ನತ ನಾಯಕರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆ ಚುನಾವಣೆ ಯನ್ನು ಎದುರಿಸಲು ಈಗಿನಿಂದಲೇ ತಯಾರಿಗಳನ್ನು ನಡೆಸುವಂತೆ ಸೂಚನೆ ನೀಡಿದ್ದರು. ಅದರಂತೆ ಪಕ್ಷ ಈಗ ಕಾರ್ಯಸೂಚಿಯನ್ನು ಸಿದ್ಧಪಡಿಸಿದ್ದು ಮುಂದಿನ ಚುನಾವಣೆಯಲ್ಲಿ ಪಕ್ಷದ ಮತಗಳಿಕೆ ಪ್ರಮಾಣವನ್ನು ಕಳೆದ ಚುನಾವಣೆಗಿಂತ ಶೇ. 10ರಷ್ಟು ಹೆಚ್ಚಿಸುವುದರ ಜತೆಯಲ್ಲಿ ಈ ಬಾರಿ ಒಟ್ಟು 350 ಸ್ಥಾನಗಳನ್ನು ಪಡೆಯುವ ಗುರಿಯನ್ನು ಹಾಕಿಕೊಂಡಿದೆ.

ಪ್ರತೀ ಲೋಕಸಭಾ ಕ್ಷೇತ್ರದಲ್ಲಿ ತೆರೆ ಯಲಾಗುವ ಚುನಾವಣ ಕಚೇರಿಯಲ್ಲಿ ಪಕ್ಷದ ಸ್ಥಳೀಯ ಕಾರ್ಯ ಕರ್ತರ ಸಮಾವೇಶವನ್ನು ನಡೆಸಲು ನಿರ್ಧರಿಸಲಾಗಿದೆ. ಈ ಸಭೆಯಲ್ಲಿ ರಾಜ್ಯ ನಾಯಕರು ಪಾಲ್ಗೊಂಡು ಕ್ಷೇತ್ರದ ಕಾರ್ಯಕರ್ತರಲ್ಲಿ ಇರುವ ಯಾವುದೇ ತೆರನಾದ ಅಸಮಾಧಾನ ವನ್ನು ಹೋಗಲಾಡಿಸಲಿದ್ದಾರೆ. ಕಳೆದ ಕೆಲವು ಚುನಾವಣೆಗಳಲ್ಲಿ ಪಕ್ಷದ ಸಾಧನೆಯನ್ನು ಪರಿಗಣಿಸಿ, ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆಯ ಬಲವರ್ಧನೆಗಾಗಿ ಬೂತ್‌ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next