Advertisement

ಬಿಜೆಪಿ ಸೇರಲು ಸಜ್ಜಾದ ಲಖನ್‌

04:52 PM Apr 06, 2021 | Team Udayavani |

ಗೋಕಾಕ: ಬೆಳಗಾವಿ ಲೋಕಸಭೆ ಉಪಚುನಾವಣೆ ಸಮಯದಲ್ಲೇಪ್ರಮುಖ ರಾಜಕೀಯ ಬೆಳವಣಿಗೆನಡೆದಿದ್ದು ಕಾಂಗ್ರೆಸ್‌ ಮುಖಂಡ ಲಖನ್‌ ಜಾರಕಿಹೊಳಿ ಬಿಜೆಪಿ ಸೇರಲು ಸಜ್ಜಾಗಿದ್ದಾರೆ.

Advertisement

ಚುನಾವಣೆ ಉಸ್ತುವಾರಿವಹಿಸಿಕೊಂಡಿರುವ ಕೈಗಾರಿಕಾ ಸಚಿವಜಗದೀಶ ಶೆಟ್ಟರ, ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರು ಸ್ವತಃಗೋಕಾಕದಲ್ಲಿ ಲಖನ್‌ ಜಾರಕಿಹೊಳಿಮನೆಗೆ ಭೇಟಿ ನೀಡಿ ಮಾತುಕತೆನಡೆಸಿದ ಬೆನ್ನಲ್ಲೇ ಈ ಮಹತ್ವದಬೆಳವಣಿಗೆ ನಡೆದಿದ್ದು, ಲಖನ್‌ಕಾಂಗ್ರೆಸ್‌ ಪಕ್ಷಕ್ಕೆ ಆಘಾತ ನೀಡಿದ್ದಾರೆ.

ಬಿಜೆಪಿ ನಾಯಕರ ಜತೆ ಚರ್ಚೆನಡೆಸಿದ ನಂತರ ಮಾತನಾಡಿದ ಲಖನ್‌,ಕಾಂಗ್ರೆಸ್‌ ಪಕ್ಷದಲ್ಲಿ ಗುಂಪುಗಾರಿಕೆ ನಡೆಯುತ್ತಿದ್ದು, ಪಕ್ಷ ಇಂದು ಒಬ್ಬವ್ಯಕ್ತಿಯ ಕೈಗೊಂಬೆಯಾಗಿ ವರ್ತಿಸುತ್ತಿದೆ. ಮೇಲಾಗಿ ಇತ್ತಿಚಿನ ಬೆಳವಣಿಗೆಯಿಂದ ಮನಸ್ಸಿಗೆ ಘಾಸಿಯಾಗಿದ್ದು ಈ ಎಲ್ಲಕಾರಣಗಳಿಂದ ನಾನು ಈ ಬಾರಿ ಬಿಜೆಪಿಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಲು ನಿರ್ಧರಿಸಿದ್ದೇನೆ ಎಂದರು.

ಕಳೆದ ವಿಧಾನಸಭೆ ಉಪಚುನಾವಣೆಯಲ್ಲಿ ಜಾರಕಿಹೊಳಿಕುಟುಂಬವೆಲ್ಲ ಒಂದೇ ಎಂದುಹೇಳಿದ ಮಹಾನುಭಾವನ ಮಾತುಕೇಳಿ ನನಗೆ ಕೊನೆ ಕ್ಷಣದಲ್ಲಿ ಟಿಕೆಟ್‌ನೀಡಿ ಗೊಂದಲ ನಿರ್ಮಿಸಿದರು. ಈಗ ಕೂಡಾ ಸತೀಶ ಜಾರಕಿಹೊಳಿ ಅವರಿಗೆಯಾವ ಆಧಾರದ ಮೇಲೆ ಟಿಕೆಟ್‌ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಇದನ್ನೆಲ್ಲ ನೋಡಿದರೆ ಕಾಂಗ್ರೆಸ್‌ನಿಂದಯಾವುದೇ ಉಪಯೋಗವಿಲ್ಲ.ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ನಾಲ್ಕುಹೈಕಮಾಂಡ್‌ ನಿರ್ಮಾಣವಾಗಿವೆ.ಯಾರಲ್ಲೂ ಒಮ್ಮತವಿಲ್ಲ. ಹೀಗಾಗಿಕಾಂಗ್ರೆಸ್‌ ಪರವಾಗಿ ಪ್ರಚಾರಕ್ಕೆಹೋಗಲು ಮುಜುಗರವಾಗುತ್ತಿದೆ ಎಂದರು.

ಬಿಜೆಪಿಗೆ ಸೇರುವಂತೆ ಹಿರಿಯರು, ಪ್ರಮುಖ ನಾಯಕರು ಕೇಳಿಕೊಂಡಿದ್ದಾರೆ. ಈ ಸಂಬಂಧಸಹೋದರರಾದ ರಮೇಶ ಹಾಗೂಬಾಲಚಂದ್ರ ಜತೆ ಚರ್ಚಿಸಿ ತೀರ್ಮಾನಕೈಗೊಳ್ಳುತ್ತೇನೆ. ನಮ್ಮ ಕಾರ್ಯಕರ್ತರ ಅಭಿಪ್ರಾಯ ಕೂಡಾ ಇದೇ ಆಗಿದೆ. ಇನ್ನೆರಡು ದಿನಗಳಲ್ಲಿ ಕಾರ್ಯಕರ್ತರು ಹಾಗೂ ಮುಖಂಡರ ರೊಂದಿಗೆ ಚರ್ಚಿಸಿ ನಮ್ಮ ಮುಂದಿನ ನಡೆಯನ್ನು ತಿಳಿಸಲಾಗುವುದು. ಲೋಕಸಭಾ ಉಪಚುನಾವಣೆ ಯಲ್ಲಿ ಪ್ರಚಾರದಲ್ಲಿರುವ ಬಿಜೆಪಿ ಮುಖಂಡರು ತಮ್ಮ ಜತೆ ಮಾತುಕತೆ ನಡೆಸಿದ್ದುಅವರ ಮನವಿ ಮೇರೆಗೆ ಸಹೋದರಿ ಮಂಗಲಾ ಅಂಗಡಿಯವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದರು.

Advertisement

ಇದಕ್ಕೂ ಮುನ್ನ ಲಖನ್‌ ಜಾರಕಿಹೊಳಿ ಅವರ ನಿವಾಸಕ್ಕೆ ಕೈಗಾರಿಕೆಸಚಿವ ಜಗದೀಶ ಶೆಟ್ಟರ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ,ಆಹಾರ ಮತ್ತು ನಾಗರಿಕ ಪೂರೈಕೆಸಚಿವ ಉಮೇಶ ಕತ್ತಿ, ರಾಜ್ಯಸಭಾಸದಸ್ಯ ಈರಣ್ಣಾ ಕಡಾಡಿ, ಸಂಸದಅಣ್ಣಾಸಾಹೇಬ ಜೊಲ್ಲೆ, ಸಂಜಯಪಾಟೀಲ ಭೇಟಿ ನೀಡಿ ಮಾತುಕತೆನಡೆಸಿ ಪಕ್ಷಕ್ಕೆ ಬರುವಂತೆ ಆಹ್ವಾನನೀಡಿದರು. ಬಳಿಕ ಬಿಜೆಪಿ ಅಭ್ಯರ್ಥಿಮಂಗಲಾ ಅಂಗಡಿ, ಮಗಳು ಶೃದ್ಧಾಹಾಗೂ ಈರಣ್ಣ ಕಡಾಡಿ ಮತ್ತೂಂದುಸುತ್ತಿನ ಮಾತುಕತೆ ನಡೆಸಿ ಪಕ್ಷದ ಪ್ರಚಾರದ ಕುರಿತು ಚರ್ಚಿಸಿದರು.

ಬಿಜೆಪಿ ಬೆಂಬಲ ಲಖನ್‌ ವೈಯಕ್ತಿಕ ನಿಲುವು: ಸತೀಶ :

ಬೆಳಗಾವಿ: ಲಖನ್‌ ಜಾರಕಿಹೊಳಿ ಬಿಜೆಪಿಗೆ ಬೆಂಬಲ ನೀಡಿದರೆ ಅದು ಅವರ ವೈಯಕ್ತಿಕ ವಿಚಾರ ಎಂದು ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನನಗೂ ಬಿಜೆಪಿ ನಾಯಕರು ಭೇಟಿ ಆಗುತ್ತಾರೆ. ಅದರಲ್ಲೇನು ವಿಶೇಷ. ಬೆಂಬಲ ನೀಡುವುದು ಬೇರೆ, ಭೇಟಿಯಾಗೋದು ಬೇರೆ. ರಾಜಕೀಯದಲ್ಲಿ ಒಬ್ಬರು ಹೋಗುತ್ತಾರೆ, ಇನ್ನೊಬ್ಬರು ಬರುತ್ತಾರೆ. ಇದೆಲ್ಲ ಸಹಜ. ಹೋದವರ ಜತೆಗೆಕೆಲವು ಮತ ಹೋಗುತ್ತವೆ. ಬಂದವರ ಜತೆಗೆ ಕೆಲವು ಮತಗಳು ಬರುತ್ತವೆ.ಪಕ್ಷದ ಮತಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ವಿಧಾನಸಭೆಚುನಾವಣೆಯಲ್ಲಿ ಕಾಂಗ್ರೆಸ್‌ ಮತ ಎಷ್ಟು ಅಂತ ತೋರಿಸಿದ್ದೇವೆ. ಮತಗಳ ಸಂಖ್ಯೆಯಲ್ಲಿ ಕಡಿಮೆ ಆಗಲು ಸಾಧ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next