Advertisement

ಬಿಸಿಲು: ಮತದಾನ ಸಮಯ ಪರಿಷ್ಕರಣೆಗೆ ಬಿಜೆಪಿ ಮನವಿ

12:30 AM May 04, 2024 | Team Udayavani |

ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7ರಂದು ನಡೆಯುವ ಮತದಾನದ ಸಮಯವನ್ನು ಪರಿಷ್ಕರಿಸುವಂತೆ ರಾಜ್ಯ ಬಿಜೆಪಿ ನಿಯೋಗವು ಕೇಂದ್ರ ಚುನಾವಣ ಆಯೋಗಕ್ಕೆ ಮನವಿ ಸಲ್ಲಿಸಿದೆ.

Advertisement

ರಾಜ್ಯದ ಪಾಲಿನ 2ನೇ ಹಂತದ ಚುನಾವಣೆಯಾಗಿರುವ ದೇಶದ 3ನೇ ಹಂತದ ಚುನಾವಣೆಯು ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿದ್ದು, ಉತ್ತರ ಕರ್ನಾಟಕದ ಬಹುಪಾಲು ಭಾಗ ಈ ವ್ಯಾಪ್ತಿಯಲ್ಲಿ ಬರಲಿದೆ.

ಈಗಾಗಲೇ ಈ ಭಾಗದಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ತಾಪಮಾನ ದಾಖಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉಷ್ಣಾಂಶ ಹೆಚ್ಚಳ ಆಗುವ ಮುನ್ಸೂಚನೆ ಇದೆ. ಅನಿಯಂತ್ರಿತ ಉಷ್ಣಾಂಶದ ಪರಿಣಾಮ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಮನೆಯಿಂದ ಹೊರ ಬಂದು ಮತದಾನ ಮಾಡುವುದು ಕಷ್ಟವಿದೆ. 40 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ ಹೆಚ್ಚಿದ್ದು, ಮತದಾನಕ್ಕಾಗಿ ಮನೆಯಿಂದ ಹೊರ ಬರುವುದು ಸುಲಭವಿಲ್ಲ.

ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಮತದಾನದ ಸಮಯವನ್ನು ಪರಿಷ್ಕರಣೆ ಮಾಡುವ ಅಗತ್ಯವಿದೆ. ಬೆಳಗ್ಗೆ 6ರಿಂದ ರಾತ್ರಿ 7 ಗಂಟೆವರೆಗೆ ಮತದಾನ ಮಾಡಲು ಅನುಕೂಲ ಆಗುವಂತೆ ಮತದಾನದ ಸಮಯವನ್ನು ಪರಿಷ್ಕರಣೆ ಮಾಡಬೇಕು ಎಂದು ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next