Advertisement
ರಾಜ್ಯ ಕಂಡ ಪ್ರಭಾವಿ ಜನನಾಯಕರಲ್ಲಿ ಒಬ್ಬರಾದ ಬಿ.ಎಸ್.ಯಡಿಯೂರಪ್ಪ ಅಕಾಲಿಕ ಅಧಿಕಾರಾಂತ್ಯ ಕಂಡಿದ್ದಾರೆ. ಆದರೆ, ಸ್ವತಃ ಯಡಿಯೂರಪ್ಪನವರೇ ಹೇಳಿದಂತೆ ಅವರ ರಾಜಕಾರಣ ಇನ್ನೂ ಮುಂದುವರಿಯುತ್ತದೆ!
Related Articles
Advertisement
ಮುಂದೇನು?: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇ ಗೌಡರಂತೆ ಪಕ್ಷದ ಬೆನ್ನ ಹಿಂದೆ ನಿಂತು ಸಲಹೆ ಸಹಕಾರ ನೀಡುತ್ತಾ ರಾಜ್ಯ ಬಿಜೆಪಿಯನ್ನು ನಿಯಂತ್ರಿಸುವುದೆ? ತಮ್ಮ ಪುತ್ರರಾದ ವಿಜ ಯೇಂದ್ರ ಮತ್ತು ರಾಘವೇಂದ್ರ ಅವರ ಭವಿತವ್ಯ, ತಮ್ಮ ಆಪ್ತ ಶಾಸಕರ ಬೆಂಗಾವಲಿಗೆ ನಿಲ್ಲು ವುದೇ? ರಾಜ್ಯದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇ ಕಾದರೆ, ಮುಂದಿನ ಸಂಸತ್ ಚುನಾವಣೆಯಲ್ಲಿ ಪ್ರಧಾನಿ ಮೋದಿ ನಾಯಕತ್ವಕ್ಕೆ ಹೆಚ್ಚಿನ ಸಂಸದರನ್ನು ರಾಜ್ಯದಿಂದ ಮತ್ತೆ ಒದಗಿಸಬೇಕಾದರೆ ತಮ್ಮ ರಾಜಕೀಯ ಇರುವಿಕೆ ಅಗತ್ಯ ಎಂಬುದನ್ನು ಮತ್ತೆ ಮನದಟ್ಟು ಮಾಡುವುದೇ? ಹೀಗೆ… ಒಂದೊಂದು ಆಯ್ಕೆಗಳು ಅವರ ಮುಂದಿರುವ ಸಾಧ್ಯತೆಗಳಿವೆ. ಆ ಮೂಲಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಂತೆ ಪವರ್‌ಫುಲ್ ರಾಜಕಾರಣಿ ಆಗುವುದು ಅವರ ಉದ್ದೇಶ ವಿರಬಹುದು!
ಬಿಜೆಪಿಯಲ್ಲಿ ಹೊಸ ರಾಜಕೀಯ ರಕ್ತಕ್ಕೆ ಅವಕಾಶ ಸೃಷ್ಟಿಸುವ ಉದ್ದೇಶವಿರಬ ಹುದು. ಆದರೆ, ಯಡಿ ಯೂರಪ್ಪ ಹೊರತಾಗಿ ಮತ್ತೆ ಪಕ್ಷ ಅಧಿಕಾರಕ್ಕೆ ಬರುವುದು ಅಷ್ಟು ಸುಲಭವಲ್ಲ
ಎಂದೂ ಆ ಪಕ್ಷದ ವರಿಷ್ಠರಿಗೆ ಗೊತ್ತಿಲ್ಲದ ವಿಷಯ ವಲ್ಲ. ಹಾಗಾಗಿ ಯಡಿಯೂರಪ್ಪ ಅವರ ಬೆಂಬಲ ಇಟ್ಟುಕೊಂಡೇ ಪಕ್ಷ, ಸರ್ಕಾರ ನಡೆಸಬೇಕಾದ ಅನಿವಾರ್ಯತೆ ಇರಬಹುದು. ಯಡಿಯೂರಪ್ಪ ಎದುರಿಸುತ್ತಿರುವ ಕೆಲವು ಕಾನೂನು ತೊಡಕುಗಳು ಅವರನ್ನು ಕಟ್ಟಿಹಾಕಬಹುದೆನ್ನುವ ಲೆಕ್ಕಾಚಾರವೂ ಇದೆ. ಸಕ್ರಿಯ ರಾಜಕಾರಣದಲ್ಲಿರುವುದನ್ನು ಘಂಟಾ ಘೋಷವಾಗಿ ಹೇಳಿರುವ ಯಡಿಯೂರಪ್ಪ ಅವುಗಳೆಲ್ಲವನ್ನೂ ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲಗಳೂ ಇವೆ.
ಲಿಂಗಾಯತ ನಾಯಕ: ಮಾಸ್‌ಲೀಡರ್ ಆಗಿರುವ ಬಿಎಸ್‌ವೈ , ಲಿಂಗಾಯತ ಮುಖಂಡ ಎಂದು ಗಟ್ಟಿ ಯಾಗಿ ಗುರುತಿಸಿಕೊಂಡಿದ್ದು, ಕುಮಾರಸ್ವಾಮಿ ನೇತೃ ತ್ವದ 20-20 ಸರ್ಕಾರದಲ್ಲಿ ಡಿಸಿಎಂ ಆದ ಬಳಿಕ.
ಈಗ ಯಡಿಯೂರಪ್ಪ ರಾಜೀನಾಮೆ ಬಳಿಕ ಲಿಂಗಾಯತರು ಯಾರನ್ನು ತಮ್ಮ ಮುಖಂಡನನ್ನಾಗಿ ನೋಡುತ್ತಾರೆ ಎನ್ನುವುದು ಬಿಜೆಪಿಯ ಚಿಂತೆ. ಯಡಿಯೂರಪ್ಪ ಅವರೇ ಆ ಸ್ಥಾನದಲ್ಲಿ ಇರುತ್ತಾರೆಯೇ ಅಥವಾ ಅವರ ಪ್ರಯತ್ನದಂತೆ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಲಿಂಗಾಯತ ಮುಖಂಡನಾಗುವಂತೆ ಬೆಳೆಸುತ್ತಾರೆಯೇ ಎಂಬ ಪ್ರಶ್ನೆಗಳೂ ಉದ್ಭವಿಸಿವೆ.
ಎಂ. ಬಿ. ಪಾಟೀಲ್: ರಾಜ್ಯದಲ್ಲಿ ಮತ್ತೆ ಅಧಿಕಾರ ಪಡೆಯಬೇಕೆಂಬ ಹಠದಲ್ಲಿರುವ ಕಾಂಗ್ರೆಸ್, ತನ್ನದೇ ರೀತಿಯಲ್ಲಿ ಯೋಜನೆಗಳನ್ನು ರೂಪಿಸುತ್ತಿದೆ. ತನ್ನ ಲಿಂಗಾಯತ ಮುಖಂಡರಾದ ಎಂ.ಬಿ. ಪಾಟೀಲ ಮತ್ತು ಶಾಮನೂರು ಶಿವಶಂಕರಪ್ಪ ಅವರನ್ನು “ರಾಜೀನಾಮೆ ವದಂತಿ’ ಸಂದರ್ಭದಲ್ಲೇ ಯಡಿ ಯೂರಪ್ಪ ಅವರ ಭೇಟಿ ಮಾಡಿಸಿ ಲಿಂಗಾಯತ ಮತ ಬ್ಯಾಂಕಿಗೆ ಕೈಹಾಕಲು ಹೊರಟಿರುವುದು ಬಿಜೆಪಿ ನಾಯಕರಿಗೆ ತಿಳಿಯದ ವಿಷಯ ವಲ್ಲ. ಅಲ್ಲದೆ, ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರು ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂಬ ಹೇಳಿಕೆಯನ್ನು ಪಾಟೀಲ್ ನೀಡಿರುವ ಹಿನ್ನೆಲೆ ಏನೆಂಬುದು ಎಲ್ಲರಿಗೂ ತಿಳಿದ ವಿಷಯ.
ಹಾಗಾಗಿ… ಈ ಎಲ್ಲಾ ಬೆಳವಣಿಗೆಗಳು ರಾಜ್ಯ ರಾಜಕೀಯದ ಇನ್ನೊಂದು ದಿಕ್ಕಿನ ಸೂಚನೆ.
ನವೀನ್ ಅಮ್ಮೆಂಬಳ