Advertisement
ಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿ ಆತ್ಮಾಲೋಕನ ಸಭೆಯಲ್ಲಿ ಮಾತನಾಡಿದ ಅವರು, ಆನೇಕಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲಿಸಿದ್ದೇವೆ ಎಂದು ಕಾಂಗ್ರೆಸಿಗರು ಬಿಜೆಪಿ ಕಾರ್ಯಕರ್ತರಿಗೆ ಉದ್ದೇಶ ಪೂರ್ವಕವಾಗಿ ತೊಂದರೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸಿಗರ ದಬ್ಟಾಳಿಕೆ ಸಹಿಸಿಕೊಂಡು ಮನೆಯಲ್ಲಿ ಕೂತುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.
ಮುಂಚೆಯೇ ಅವರೇ ಇಲ್ಲಿಂದ ಜಾಗ ಮಾಡಿದರೆ ಒಳಿತು ಎಂದು ಎ.ನಾರಾಯಣಸ್ವಾಮಿ ಎಚ್ಚರಿಕೆ ಸಂದೇಶವನ್ನು ನೀಡಿದರು. ಅಧಿಕಾರ, ಹಣಕ್ಕೋಸ್ಕರ ರಾಜಕಾರಣಕ್ಕೆ ಬಂದವನಲ್ಲ, ಪಕ್ಷ ಮತ್ತು ಕಾರ್ಯಕರ್ತರಿಗೆ ರಕ್ಷಣೆ ಹಾಗೂ ಕ್ಷೇತ್ರದ ಅಭಿವೃದ್ಧಿಯೇ ತನ್ನ ಧ್ಯೇಯವಾಗಿದೆ. ಚುನಾವಣೆಯಲ್ಲಿ ಎಷ್ಟು ಬಾರಿ ಸೋತರೂ ಕ್ಷೇತ್ರವನ್ನು ಬಿಟ್ಟು ಹೋಗುವ
ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
Related Articles
Advertisement
ಬಿಜೆಪಿಯ ಹೆಸರಿನಲ್ಲಿ ಉನ್ನತ ಸ್ಥಾನವನ್ನು ಪಡೆದು, ಪಕ್ಷದ ಹೆಸರಿನಲ್ಲಿ ಕೋಟ್ಯದೀಶರಾಗಿ ಕೆಲವರು ಒಂದೇ ತಟ್ಟೆಯಲ್ಲಿ ಊಟ ಮಾಡಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಬೆನ್ನಿಗೆ ಚೂರಿ ಹಾಕಿದ್ದಾರೆ. ಇಂತಹ ಕುತಂತ್ರಿಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಬಿಜೆಪಿ ಕಾರ್ಯಕರ್ತರು ನೀಡಲಿದ್ದಾರೆ ಎಂದು ಹೇಳಿದರು. ಸಂವಿಧಾನದ ಅವರಿವಿಲ್ಲದ ಎರಡು ಪಕ್ಷಗಳು ಸರ್ಕಾರ ರಚಿಸಿವೆ, ಕಾಂಗ್ರೆಸ್ ಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸುವ ಮಾತೇ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು.
ಆದರೆ, ಇಂದು ಮಾಡಿರುವುದು ಏನು? ತಾಲೂಕಿನಲ್ಲಿ ಕಾಂಗ್ರೆಸ್ ಅಟ್ಟಹಾಸಕ್ಕೆ ಬ್ರೇಕ್ ಹಾಕುತ್ತೇವೆ, ಅವರ ಭ್ರಷ್ಟಾಚಾರದ ವಿರುದ್ಧ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ಮುಖಂಡ ನಾರಾಯಣಪ್ಪ, ಮುಖಂಡರಾದ ನರಸಿಂಹರೆಡ್ಡಿ, ಜಗನ್ನಾಥ್, ಮುನಿರತ್ನಮ್ಮ ನಾರಾಯಣಪ್ಪ, ನಾರಾಯಣ ಸ್ವಾಮಿ, ಸುರೇಶ್, ರಾಮಚಂದ್ರ ಇದ್ದರು.
ಕ್ಷೇತ್ರದಲ್ಲಿ ಬಿಜೆಪಿ ಸೋತಿಲ್ಲ. ಅದು ಗೆದ್ದಿದೆ. ಕಳೆದ ಚುನಾವಣೆಯಲ್ಲಿ ಕೇವಲ 67 ಸಾವಿರ ಮತಗಳು ಪಡೆದಿತ್ತು.ಈ ಬಾರಿ ಒಂದೂವರೆ ಲಕ್ಷ ಮತ ಪಡೆದಿದೆ. ಕ್ಷೇತ್ರ ದಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆದಿದೆ. ಅದಕ್ಕೆ ಕಾರಣರಾದ ಎಲ್ಲಾ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ.
ರಾಮಚಂದ್ರ, ಜಿಪಂ ಮಾಜಿ ಅಧ್ಯಕ್ಷ.