Advertisement

ʼಅಲ್ಪಮತೀಯವಾದʼ ಸಿದ್ದರಾಮಯ್ಯ ಸಾಕಿದ ಗಿಣಿ : ಬಿಜೆಪಿ ಆರೋಪ

03:26 PM Apr 18, 2022 | Team Udayavani |

ಬೆಂಗಳೂರು: ಹುಬ್ಬಳ್ಳಿಯ ಹಿಂಸಾಚಾರ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ ಪ್ರತ್ಯಾರೋಪಗಳು ಮುಂದುವರಿದಿದ್ದು, ಬಿಜೆಪಿ,  ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಗಳನ್ನೂ ಮಾಡಿ ಆಕ್ರೋಶ ಹೊರ ಹಾಕಿದೆ.

Advertisement

ಕರ್ನಾಟಕದಲ್ಲಿ ತಲೆ ಎತ್ತಿರುವ ʼಅಲ್ಪಮತೀಯವಾದʼ ಸಿದ್ದರಾಮಯ್ಯ ಸಾಕಿದ ಗಿಣಿ. ಹಿಂದೂ ಕಾರ್ಯಕರ್ತರ ವಿರುದ್ದ ಇದೇ ಶಕ್ತಿಯನ್ನು ಗುರಾಣಿ ಮಾಡಿದ್ದರು.ಸಿದ್ದರಾಮಯ್ಯನವರೇ, ಪಿಎಫ್ಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಕೈಬಿಟ್ಟು, ಆ ಸಂಘಟನೆಯನ್ನು ಹಿಂದೂ ಕಾರ್ಯಕರ್ತರ ಮೇಲೆ ಛೂಬಿಟ್ಟ ಔರಂಗಜೇಬ್ ನೀವಲ್ಲವೇ? ಎಂದು ಪ್ರಶ್ನಿಸಿದೆ.

ಡಿಜೆ ಹಳ್ಳಿ – ಶಾಸಕರ ಮನೆಗೆ ಬೆಂಕಿ, ಪೊಲೀಸ್ ಠಾಣೆ ಮೇಲೆ ದಾಳಿ, ಹುಬ್ಬಳ್ಳಿ – ಕಲ್ಲು ತೂರಾಟ, ಪೊಲೀಸ್ ವಾಹನ ಮೇಲೆ ದಾಳಿ, ಈ ಎರಡೂ ಪ್ರಕರಣದಲ್ಲೂ ಲೋಡ್ ಗಟ್ಟಲೆ ಕಲ್ಲು ತೂರಾಟ. ಈ ಕಲ್ಲು ಸಂಗ್ರಹ ಮಾಡಿದ ʼಅಲ್ಪಮತೀಯರನ್ನುʼ ಸಿದ್ದರಾಮಯ್ಯ, ಡಿಕೆಶಿ ಪ್ರಶ್ನಿಸುವುದಿಲ್ಲವೇಕೆ? ಎಂದು ಪ್ರಶ್ನಿಸಿದೆ.

ದನಗಳ್ಳನನ್ನು ಗುಂಡಿಟ್ಟು ಕೊಂದ ಪೊಲೀಸರಿಗೆ ಅಮಾನತು ಶಿಕ್ಷೆ ನೀಡಿ ಪೊಲೀಸ್‌ ಇಲಾಖೆಯ ಆತ್ಮಸ್ಥೈರ್ಯವನ್ನೇ ಕುಗ್ಗಿಸಿದ ಸಿದ್ದರಾಮಯ್ಯ ಅವರಿಗೆ ಪೊಲೀಸರ ಕರ್ತವ್ಯ ನಿರ್ವಹಣೆ ಹಾಗೂ ಗೃಹ ಇಲಾಖೆಯ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದೆ.

ಪಿಎಫ್ಐ ಕೇವಲ ಮತೀಯ ಸಂಘಟನೆಯಲ್ಲ, ಸಂಘಟಿತ ಅಪರಾಧದಲ್ಲೂ ಅದು ನಿಸ್ಸೀಮ ಎಂದು ಜಾಗೃತ ಸಮಾಜ ಹಾಗೂ ಮಾಧ್ಯಮ ಎಚ್ಚರಿಸಿತ್ತು. ಆದರೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಉಡಾಫೆಯಾಗಿ ವರ್ತಿಸಿ ಕ್ರಮಿನಲ್‌ ಪ್ರಕರಣಗಳನ್ನು ಹಿಂಪಡೆದದ್ದು ಮಾತ್ರವಲ್ಲದೆ ಮತಾಂಧರೊಂದಿಗೆ ಇಫ್ತಾರ್ ಕೂಟ ನಡೆಸಿದರು. ಎಂದು ಆರೋಪಿಸಿದೆ.

Advertisement

ಕಾನೂನು – ಸುವ್ಯವಸ್ಥೆ ಹದೆಗೆಟ್ಟಿದೆ ಎಂದು ಬೊಬ್ಬೆ ಹೊಡೆಯುತ್ತಿರುವ ಬುರುಡೆ ರಾಮಯ್ಯ ಅವರೇ,ಕಾನೂನು-ಸುವ್ಯವಸ್ಥೆಗೆ ಭಂಗ ತರುತ್ತಿರುವವರ ವಿರುದ್ಧ ಧ್ವನಿ ಎತ್ತುತ್ತಿಲ್ಲವೇಕೆ? ಮತ ಕಳೆದುಕೊಳ್ಳುವ ಭಯವೇ? ಇಂದು ರಾಜ್ಯದಲ್ಲಿ ʼಅಲ್ಪಮತೀಯರುʼ ಸಮಾಜಘಾತುಕರಾಗಿ ಬೆಳೆಯಲು ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ಆರೋಪಿಸಿದೆ.

ಎಲ್ಲಾ ಟ್ವೀಟ್ ಗಳ ಜತೆಗೆ ‘ಕಾಂಗ್ರೆಸ್ ಜಿಹಾದಿಗಳನ್ನು ಬೆಂಬಲಿಸುತ್ತಿದೆ’ ಎಂದು ಹ್ಯಾಷ್ ಟ್ಯಾಗ್ ಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next