Advertisement

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಿಜೆಪಿ ಅಧಿಕಾರವಧಿಯಲ್ಲಿಯೇ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ

08:15 PM Oct 17, 2021 | Team Udayavani |

ಭಟ್ಕಳ: ಬಿ.ಜೆ.ಪಿ. ಪಕ್ಷವನ್ನು ಬೇರೆ ಬೇರೆ ಪಕ್ಷದವರು ತಮ್ಮ ರಾಜಕೀಯ ಲಾಭಕ್ಕಾಗಿ ಅಲ್ಪಸಂಖ್ಯಾತರ ವಿರೋಧಿ ಎನ್ನುವ ಹಣೆಪಟ್ಟಿಯನ್ನು ಕಟ್ಟಿದ್ದಾರೆ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಿ.ಜೆ.ಪಿ. ಪಕ್ಷದ ಅಧಿಕಾರವಧಿಯಲ್ಲಿಯೇ ಹೆಚ್ಚು ಅನುದಾನ ಬಿಡುಗಡೆಯಾಗಿದೆ ಎಂದು ಬಿ.ಜೆ.ಪಿ. ಅಲ್ಪ ಸಂಖ್ಯಾತರ ಮೋರ್ಚಾದ ರಾಜ್ಯಾಧ್ಯಕ್ಷ ಮುಝಮ್ಮಿಲ್ ಬಾಬು ಅವರು ಹೇಳಿದರು.

Advertisement

ಅವರು ಇಲ್ಲಿನ ರಾಮನಾಥ ಶ್ಯಾನಭಾಗ ಸಭಾ ಭವನದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾದಿಂದ ಏರ್ಪಡಿಸಲಾಗಿದ್ದ ಅಲ್ಪಸಂಖ್ಯಾತರ ಮೊರ್ಚಾದ ಕಾರ್ಯಕಾರಿಣಿ ಸಭೆಯನ್ನು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸರಕಾರ ಅನೇಕ ಸೌಲಭ್ಯಗಳನ್ನು ಇಂದು ಅಲ್ಪಸಂಖ್ಯಾತರಿಗಾಗಿ ನೀಡುತ್ತಿದೆ. ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡುತ್ತಿದ್ದು ಇಂದು ಪ್ರತಿಯೊರ್ವ ಅಲ್ಪ ಸಂಖ್ಯಾತ ವಿದ್ಯಾರ್ಥಿಯೂ ಕೂಡಾ ವಿದ್ಯಾರ್ಥಿ ವೇತನ ಪಡೆಯುತ್ತಿರುವುದು ಈ ಸರಕಾರ ಕೊಡುಗೆಯಾಗಿದೆ. ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಿಂದೆಂದೂ ಕಾಣದ ಅಭಿವೃದ್ಧಿಯನ್ನು ಮಾಡುತ್ತಿದ್ದು ರಸ್ತೆ ಅಭಿವೃದ್ಧಿ, ರೈಲ್ವೇ ಅಭಿವೃದ್ಧಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಾಗುತ್ತಿದ್ದು ಅದರ ಪ್ರಯೋಜನ ಕೇವಲ ಒಂದೇ ವರ್ಗಕ್ಕೆ ದೊರೆಯುತ್ತಿಲ್ಲ ಎಂದ ಅವರು ಹಿಂದೆ ಅಮೇರಿಕಾ ವೀಸಾ ನೀಡಲೂ ಹಿಂಜರಿಯುತ್ತಿದ್ದರೆ ಇಂದು ಕೆಂಪು ಹಾಸನ್ನು ಹಾಸಿ ಮೋದಿಯವರನ್ನು ಸ್ವಾಗತಿಸುವ ಕಾಲ ಬಂದಿದೆ ಎಂದರು. ಇಡೀ ಪ್ರಪಂಚವೇ ನಮ್ಮ ಅಭಿವೃದ್ಧಿಯನ್ನು ಕಂಡು ನಿಬ್ಬೆರಗಾಗಿದೆ ಎಂದ ಅವರು ಅಲ್ಪಸಂಖ್ಯಾತರ ಸರಕಾರದ ಸೌಲಭ್ಯವನ್ನು ಪಡೆಯುವಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ :ತುಮಕೂರು ಬಳಿ ಖಾಸಗಿ ಬಸ್‌ ಮತ್ತು ಸರಕು ಸಾಗಣೆ ವಾಹನ ಅಪಘಾತ : ನಾಲ್ವರ ದುರ್ಮರಣ

ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ವೆಂಕಟೇಶ ನಾಯ್ಕ ಅವರು ಮಾತನಾಡಿ ಆರ್.ಎಸ್.ಎಸ್. ಅಲ್ಪ ಸಂಖ್ಯಾತರ ವಿರೋಧಿ ಎನ್ನುವ ಕುರಿತು ಬಿಂಬಿಸಲಾಗುತ್ತಿದೆ. ಆದರೆ ದೇಶ ವಿಭಜನೆಯನ್ನು ವಿರೋಧಿಸಿ ನಾವೆಲ್ಲರೂ ಒಂದಾಗಿರೋಣ ಎಂದಿದ್ದೇ ಆರ್.ಎಸ್.ಎಸ್. ಆಗಿತ್ತು. ಇದೊಂದು ದೇಶ ಭಕ್ತ ಸಂಘಟನೆಯಾಗಿದ್ದು ದೇಶ ಭಕ್ತರನ್ನು ಎಂದಿಗೂ ಆರ್.ಎಸ್.ಎಸ್. ಗೌರವಿಸುತ್ತದೆ ಎಂದರು. ಅಂದು ರಾಜಕೀಯ ನಾಯಕರ ದುರಾಸೆಯಿಂದಾಗಿ ದೇಶ ವಿಭಜನೆಯಾಗಿತ್ತು. ಇಂದೂ ಕೂಡಾ ಅಲ್ಪಸಂಖ್ಯಾತರನ್ನು ಕೇವಲ ಮತ ಬ್ಯಾಂಕಾಗಿ ಪರಿವರ್ತಿಸಿಕೊಂಡ ಕಾಂಗ್ರೆಸ್ ಪಕ್ಷ ಬಿ.ಜೆ.ಪಿ. ಪಕ್ಷದ ಕುರಿತು ತಪ್ಪು ಅಭಿಪ್ರಾಯವನ್ನು ಮೂಡಿಸುತ್ತಿದೆ ಎಂದರು. ಬಿ.ಜೆ.ಪಿ. ಎಲ್ಲರನ್ನು ಸಮಾನವಾಗಿ ನೋಡುವ ಪಕ್ಷವಾಗಿದ್ದು ಇಲ್ಲಿ ಯಾವುದೇ ಬೇಧ ಭಾವ ಇಲ್ಲ ಎಂದೂ ಅವರು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಅಲ್ಪ ಸಂಖ್ಯಾತರ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನೀಸ್ ಅಹಮ್ಮದ್ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯ ಸೂಕ್ಷ್ಮ ಪ್ರದೇಶ ಎನ್ನುವ ಹಣೆಪಟ್ಟಿ ಹೊತ್ತ ಭಟ್ಕಳದಲ್ಲಿ ಬಿ.ಜೆ.ಪಿ. ಅಲ್ಪ ಸಂಖ್ಯಾತ ಘಟಕದ ಕಾರ್ಯಕಾರಿಣಿ ಎರ್ಪಸಿರುವುದು ಒಂದು ದಾಖಲೆಯಾಗಿದೆ ಎಂದರು.

ಸಿ.ಎಂ.ಡಿ.ಸಿ. ಅಧ್ಯಕ್ಷ ಮುಕ್ತಾರ್ ಅಹಮ್ಮದ್ ಮಾತನಾಡಿದರು. ವೇದಿಕೆಯಲ್ಲಿ ಪ್ರಮುಖರಾದ ಎಸ್. ವಿ. ರಾಜು, ಸಿರಾಜ್, ಇಮ್ತಿಯಾಜ್ ಅಹಮ್ಮದ್, ಎನ್.ಎಸ್. ಹೆಗಡೆ, ಉಶಾ ಹೆಗಡೆ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನಿಂದ ಬಂದಿದ್ದ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತೆ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಹಲವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.

ಉತ್ತರ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅನೀಸ್ ತಹಸೀಲ್ದಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭಟ್ಕಳ ತಾಲೂಕಾ ಅಧ್ಯಕ್ಷ ಇಸ್ಮಾಯಿಲ್ ಅನ್ವರ್ ಫಾರೂಕಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next