ಚಿಕ್ಕಬಳ್ಳಾಪುರ: ಬಿಜೆಪಿ ಕೋಮುವಾದಿ ಹಾಗೂ ಮತೀಯ ಪಕ್ಷ ಎಂದು ತಮ್ಮ ಪಕ್ಷದ ವಿರುದ್ದವೇ ಸಂಸದ ಬಿ.ಎನ್.ಬಚ್ಚೇಗೌಡ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ ಜಿ.ಪಂ ಸಭಾಂಗಣದಲ್ಲಿ ಶುಕ್ರವಾರ ದಿಶಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಹಾಗೂ ಜೆಡಿಎಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಹೊರಟಿರುವುದು ನನಗೆ ಅಚ್ವರಿ ತಂದಿದೆ ಎಂದರು.
ಬಿಜೆಪಿ, ಜೆಡಿಎಸ್ ಮೈತ್ರಿ ಆಗುವ ಬಗ್ಗೆ ಸಾಕಷ್ಡು ಊಹಾಪೋಹಗಳು ಇದ್ದವು. ಈಗ ಜನರಿಗೆ ಸ್ಪಷ್ಟವಾಗಿದೆ. ಆ ಕಾರಣಕ್ಕೆ ಏನೋ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ವಿರೋಧ ಪಕ್ಷ ನಾಯಕನ ಆಯ್ಕೆ ಮಾಡಿಲ್ಲ. ಮೈತ್ರಿ ಆಗುವ ಕಾರಣದಿಂದ ಏನಾದರೂ ಪಕ್ಷದ ವರಿಷ್ಟರು ಇದುವರೆಗೆ ತಡ ಮಾಡಿದರೆಂದು ನನಗೆ ಈಗ ಅನಿಸುತ್ತಿದೆ ಎಂದರು.
ಇದನ್ನೂ ಓದಿ:JDS; ಕಾಂಗ್ರೆಸ್ ಸೋಲಿಸಬೇಕೆಂಬ ಕಾರಣಕ್ಕೆ ಬಿಜೆಪಿ ಜೊತೆ ಮೈತ್ರಿಗೆ ಒಲವು: ಜಿ.ಟಿ ದೇವೇಗೌಡ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದವನ್ನು ಜೆಡಿಎಸ್ ಗೆ ಬಿಟ್ಟು ಕೊಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಈಗಲೇ ಆ ಪ್ರಶ್ನೆ ಬರಲ್ಲ, ಚುನಾವಣೆ ಇರುವುದು 2024 ಕ್ಕೆ ಯಾವ ಕ್ಷೇತ್ರ ಯಾರಿಗೂ ಅಂತ ಇನ್ನೂ ಚರ್ಚೆಯಾಗಿಲ್ಲ ಎಂದ ಬಚ್ಚೇಗೌಡ ಮೈತ್ರಿಯಿಂದ ಬಿಜೆಪಿಗೆ ಶಕ್ತಿ ಬರಲ್ಲ. ಇನ್ನೂ ಕ್ಷೀಣಿಸುತ್ತದೆ. ಬಿಜೆಪಿ ಜೆಡಿಎಸ್ ಮೈತ್ರಿಯಿಂದ ರಾಜಕೀಯವಾಗಿ ಬಿಜೆಪಿಗೆ ಒಳ್ಳಯದಾಗುವುದಿಲ್ಲ ಎಂದರು.