ಬ್ರಹ್ಮಾವರ: ಇಲ್ಲಿನ ಕೊಕ್ಕರ್ಣೆ ಬೈದೆಬೆಟ್ಟಿನ ನಾಗು ಪೂಜಾರಿ ಮತ್ತು ಮಾಲತಿ ಪೂಜಾರ್ತಿ ಅವರು ಕೂಲಿ ಕೆಲಸ ಮಾಡಿಕೊಂಡು ಬಡ ತನದ ಬದುಕಿನಲ್ಲೂ ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನ ಮೂಲಕ ಬೆಳಕು ಕಂಡವರು.
ಪುತ್ರ ಯೋಗೀಶ್(29) ಬೆಂಗಳೂರಿನಲ್ಲಿ ಹೋಟೆಲ್‌ನಲ್ಲಿ ದುಡಿದು ಇಡೀ ಕುಟುಂಬಕ್ಕೆ ಆಧಾರ ಸ್ತಂಭವಾಗಿ ನಿಂತಿದ್ದರು. ಜೀವನದ ಕುರಿತಾದ ಅದಮ್ಯ ಕನಸನ್ನು ಹೊಂದಿರುವ ಯೋಗೀಶ್, ಪತ್ನಿ ಪ್ರತಿಮಾಳೊಂದಿಗೆ ಸಂತಸದ ಬದುಕನ್ನು ಕಂಡವರು. ಕಳೆದ ಒಂದು ವರ್ಷದ ಹಿಂದೆ ಪತ್ನಿ ಪ್ರತಿಮಾಳ ಬಯಕೆ ಶಾಸ್ತ್ರ ಮುಗಿಸಿ ಎರಡು ದಿನದ ಅನಂತರ ಬೆಂಗಳೂರಿಗೆ ತೆರಳುವ ವಿಚಾರವನ್ನು ಪತ್ನಿಗೆ ತಿಳಿಸಲು ಬೈಕ್ ಏರಿ ಹೊರಟ ಯೋಗೀಶ್‌ಗೆ ಅದು ಕರಾಳ ದಿನವೇ ಆಗಿತ್ತು. ಆಕಸ್ಮಿಕ ಬೈಕ್ ಅಪಘಾತದಿಂದ ಯೋಗೀಶ್‌ರ ಮುಂದಿನ ಎಲ್ಲ ದಿನಗಳು ಕಣ್ಣೀರ ಕಥೆಯೆ ಆಗಿತ್ತು.
ಇದೀಗ ಪುಟ್ಟ ಮಗುವಿನ ಜತೆ ಸಂತಸದ ಬದುಕನ್ನು ಕಾಣಬೇಕಾದ ಯೋಗೀಶ್ ಹಾಸಿಗೆಯಲ್ಲಿದ್ದಾರೆ. ಹಾಸಿಗೆಯಲ್ಲಿ ಮಲಗಿದರೆ ಏಳಲಾಗದ, ಎದ್ದರೆ ಮಲಗಲಾಗದ ಸ್ಥಿತಿ ಅವರದು. ಕುಟುಂಬದ ಬದುಕಿನ ದಾರಿಯೇ ಯೋಗೀಶ್.
ಆದರೆ ಈಗಾಗಲೇ ಅವರ ಚಿಕಿತ್ಸೆಗೆ ಖರ್ಚಾದ ಹಣ 8 ಲ.ರೂ.ಗೂ ಅಧಿಕ. ಆದಷ್ಟು ಬೇಗ ಗುಣ ಆಗಬೇಕು ಎನ್ನುವ ಕನಸನ್ನು ಹೊಂದಿರುವ ಯೋಗೀಶ್ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ. ನಿಮ್ಮೆಲ್ಲರ ಸಹಾಯದ ನಿರೀಕ್ಷೆಯಲ್ಲಿ ಯೋಗೀಶ್ ಮತ್ತು ಮಾಲತಿ ಪೂಜಾರಿ ಕುಟುಂಬವಿದೆ.
ಬ್ಯಾಂಕ್ ಖಾತೆ ವಿವರ: ಮಾಲತಿ ಪೂಜಾರ್ತಿ,
ಸಿಂಡಿಕೇಟ್ ಬ್ಯಾಂಕ್ ಕೊಕ್ಕರ್ಣೆ, ಖಾತೆ ಸಂಖ್ಯೆ: 01522200078205, ಐಎಫ್‌ಎಸ್‌ಸಿ ಕೋಡ್-ಎಸ್‌ವೈಎನ್‌ಬಿ0000152, ಮೊಬೈಲ್ 9740174191.