Advertisement

ಕೊರೊನಾ ಜಾಗೃತಿಗೆ ಬಿರಿಯಾನಿ ಮೇಳ

11:10 PM Mar 01, 2020 | Lakshmi GovindaRaj |

ಬಳ್ಳಾರಿ: ಕೋಳಿ ಮಾಂಸ ಸೇವನೆಯಿಂದ ಕೊರೊನಾ ವೈರಸ್‌ ಬರಲಿದೆ ಎಂಬ ಸುದ್ದಿ ಎಲ್ಲೆಡೆ ಹರಡಿದ ಹಿನ್ನೆಲೆ ಯಲ್ಲಿ ಪಶು ಸಂಗೋಪನಾ ಇಲಾಖೆ ಸಹಯೋಗದಲ್ಲಿ ಪೌಲ್ಟ್ರಿ ಫಾಮ್ಸ್‌ ಅಸೋಸಿಯೇಷನ್‌ ವತಿಯಿಂದ ನಗರದಲ್ಲಿ ಭಾನುವಾರ ಚಿಕನ್‌ ಬಿರಿಯಾನಿ ಮೇಳ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

Advertisement

ಚೀನಾವನ್ನು ಮಾರಕವಾಗಿ ಕಾಡುತ್ತಿರುವ ಕೊರೊನಾ ವೈರಸ್‌ ರಾಜ್ಯದಲ್ಲೂ ಆತಂಕ ಸೃಷ್ಟಿ ಸಿದ್ದು, ಕೋಳಿ ಮಾಂಸ ಮತ್ತದರ ಮೊಟ್ಟೆ ತಿಂದರೆ ಕೊರೊನಾ ವೈರಸ್‌ ಆವರಿಸಲಿದೆ ಎಂಬ ಸುದ್ದಿ ರಾಜ್ಯದೆಲ್ಲೆಡೆ ಹರಡಿತ್ತು. ಪರಿಣಾಮ ಚಿಕನ್‌ ಬೆಲೆ ಕುಸಿದಿದೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಈ ಮೇಳ ಆಯೋಜಿಸಲಾಗಿತ್ತು.

ಒಂದು ಸಾವಿರ ಕೆ.ಜಿ. ಕೋಳಿ ಮಾಂಸ ಬಳಸಿ ಸುಮಾರು 3 ಸಾವಿರ ಜನರಿಗಾಗುವಷ್ಟು ಚಿಕನ್‌ ಬಿರಿಯಾನಿ, ಚಿಕನ್‌ ಪಕೋಡಾ, ಮೊಟ್ಟೆ ಕರ್ರಿ, ಮೊಸರನ್ನ ಸಿದ್ಧಪಡಿಸಲಾಗಿತ್ತು. ಒಬ್ಬರಿಗೆ ಕೇವಲ 149 ರೂ. ಶುಲ್ಕ ವಿಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next