ಬನ್ನೂರು: ಜಯಕನಾಟಕ ಸಂಘಟನೆಯ ಸಂಸ್ಥಾಪಕರ ಜನ್ಮದಿನಾಚರಣೆ ಪ್ರಯುಕ್ತ ನೀರಿಲ್ಲದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಒದಗಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸತೀಶ್‌ಗೌಡ ಹೇಳಿದರು.
ಪಟ್ಟಣದಲ್ಲಿ ಜಯಕನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪರೈ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೈಸೂರು ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲದೆ ನೀರಿಗಾಗಿ ಜನರು ಬಹಳಷ್ಟು ದೂರ ಕೊಡಗಳನ್ನು ಹಿಡಿದು ಕೊಂಡು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಜೊತೆಗೆ ಗ್ರಾಮದ ನೈರ್ಮಲ್ಯದ ವ್ಯವಸ್ಥೆ ಸರಿ ಇಲ್ಲದೇ ಮಾನವನ ಆರೋಗ್ಯಕ್ಕೆ ತೊಂದರೆ ಯನ್ನುಂಟು ಮಾಡುತ್ತಿದೆ. ಇದನ್ನು ಮನಗಂಡು ಜಯಕರ್ನಾಟಕ ಸಂಗಟನೆಯ ಸಾಮಾಜಿಕ ಕಾರ್ಯದಲ್ಲಿ ಮೊದಲು ಕುಡಿಯುವ ನೀರು ಒದಗಿಸಲು ಹಾಗೂ ಸ್ವತ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಹಿಳಾ ಅಧ್ಯಕ್ಷೆ ಎಲ್.ಪಿ. ರೇವತಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಅನೇಕ ಮೂಲಭೂತ ಸಮಸ್ಯೆಗಳು ತಾಂಡವ ವಾಡುತ್ತಿದೆ. ಈ ಉದ್ದೇಶದಿಂದಲೇ ಮುತ್ತಪ್ಪರೈ ಅವರ ಆಶಯದಂತೆ ಪ್ರತಿ ಗ್ರಾಮದಲ್ಲೂ ಜಯಕರ್ನಾಟಕ ಸಂಘಟನೆಯ ಗ್ರಾಮ ಘಟಕ ಆರಂಭಿಸಿದ್ದು, ಸಂಘಟನೆಯನ್ನು ಬಳಸಿಕೊಳ್ಳುವಂತೆ ತಿಳಿಸಿದರು.
ಸಾರ್ವಜನಿಕರಿಗೆ ಸಿಹಿಯನ್ನು ವಿತರಿಸ ಲಾಯಿತು. ಜಯಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ವಿನಯ್ ಕುಮಾರ್, ತಾಲೂಕು ಉಪಾಧ್ಯಕ್ಷ ರಾಜಣ್ಣ, ಅಂದಾನಿಗೌಡ, ಕೇತುಪುರ ಶಿವಕುಮಾರ್, ಆನಂದ್, ದೊಡ್ಡಮುಲಗೂಡು ರಾಜೇಶ್, ಯೋಗೇಶ್, ದೇವರಾಜು, ಗೀತಾ, ಮಲಿಯೂರು ಕುಮಾರ್, ನಾಗೇಂದ್ರ, ರಘು, ಶಿವಣ್ಣ, ಬನ್ನೂರು ಶಿವು, ಅತ್ತಹಳ್ಳಿ ರಾಜು, ರಂಗಸಮುದ್ರ ಶಿವರಾಜು, ವಿಶ್ವನಾಥ್ ಇದ್ದರು.